ಭಾರತದ ಖ್ಯಾತ ಕೈಗಾರಿಕೋದ್ಯಮಿ ಶ್ರೀಕಾಂತ್‌ ಬೊಲ್ಲಾ ಬಯೋಪಿಕ್‌ ಸಿನಿಮಾ ‘ಶ್ರೀ’ ಮೇ 10, 2024ರಂದು ತೆರೆಕಾಣಲಿದೆ. ತುಷಾರ್‌ ಹಿರಾನಂದಾನಿ ನಿರ್ದೇಶನದ ಚಿತ್ರದ ಶೀರ್ಷಿಕೆ ಪಾತ್ರದಲ್ಲಿ ರಾಜ್‌ಕುಮಾರ್‌ ರಾವ್‌ ನಟಿಸುತ್ತಿದ್ದಾರೆ. ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಸಿನಿಮಾ ತೆರೆಕಾಣಲಿದೆ.

ರಾಜ್‌ಕುಮಾರ್ ರಾವ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ‘ಶ್ರೀ’ ಹಿಂದಿ ಚಿತ್ರವು ಬಿಡುಗಡೆ ದಿನಾಂಕ ಘೋಷಿಸಿದೆ. ಈ ಚಿತ್ರವನ್ನು ತುಷಾರ್ ಹಿರಾನಂದಾನಿ ನಿರ್ದೇಶಿಸಿದ್ದು, ಚಿತ್ರದಲ್ಲಿ ಅಲಯ ಎಫ್, ಜ್ಯೋತಿಕಾ ಮತ್ತು ಶರದ್ ಕೇಳ್ಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಭಾರತದ ಖ್ಯಾತ ಕೈಗಾರಿಕೋದ್ಯಮಿ ಶ್ರೀಕಾಂತ್ ಬೊಲ್ಲಾ ಪಾತ್ರದಲ್ಲಿ ರಾಜ್‌ಕುಮಾರ್‌ ರಾವ್‌ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಜಗದೀಪ್ ಸಿಧು ಮತ್ತು ಸುಮಿತ್ ಪುರೋಹಿತ್ ಚಿತ್ರಕಥೆ ರಚಿಸಿದ್ದಾರೆ. ಚಿತ್ರ ನಿರ್ಮಿಸಿರುವ T-Series ತನ್ನ Xನಲ್ಲಿ ಮಾಹಿತಿ ಹಂಚಿಕೊಂಡಿದ್ದು, ‘ಮೇ 10, 2024ರಂದು ಶ್ರೀಕಾಂತ್ ಬೊಳ್ಳಾ ಅವರ ಅದ್ಭುತ ಕಥೆಯಿಂದ ಸ್ಫೂರ್ತಿ ಪಡೆಯಲು ಸಿದ್ಧರಾಗಿ’ ಎಂದು ಕ್ಯಾಪ್ಶನ್‌ ನೀಡಿದೆ. ಚಿತ್ರವನ್ನು T-Series Films ಮತ್ತು Chalk N Cheese Films Production LLP ಬ್ಯಾನರ್‌ಗಳು ನಿರ್ಮಿಸಿವೆ. ಮೇ 10, 2024 ರಂದು ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಗೆ ಬರಲಿದೆ.

LEAVE A REPLY

Connect with

Please enter your comment!
Please enter your name here