ಸಾಲು, ಸಾಲು ತಮಿಳು ಚಿತ್ರಗಳಲ್ಲಿ ನಟಿಸುತ್ತಿರುವ ತೆಲುಗು ನಟ ಸುನೀಲ್‌ ಇದೀಗ ‘ಟರ್ಬೋ’ ಚಿತ್ರದಿಂದ ಮಲಯಾಳಂ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ವೈಸಾಕ್‌ ನಿರ್ದೇಶನದಲ್ಲಿ ಮಮ್ಮೂಟಿ ಹೀರೋ ಆಗಿ ನಟಿಸುತ್ತಿರುವ ಚಿತ್ರವಿದು. ನಟ ಮಮ್ಮೂಟಿ ಅವರ Mammootty Kampany ಬ್ಯಾನರ್‌ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ.

ಮಮ್ಮೂಟಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿರುವ ‘ಟರ್ಬೋ’ ಚಿತ್ರದ ಮೂಲಕ ತೆಲುಗು ನಟ ಸುನಿಲ್‌ ಮಲಯಾಳಂ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ‘ಪೋಕ್ಕಿರಿ ರಾಜ’ ಮತ್ತು ‘ಮಧುರ ರಾಜ’ ಸಿನಿಮಾಗಳ ನಂತರ ವೈಸಾಕ್ ನಿರ್ದೇಶನದಲ್ಲಿ ಮಮ್ಮುಟ್ಟಿಯವರ ಮೂರನೇ ಚಿತ್ರವಿದು. ಚಿತ್ರವನ್ನು Mammootty Kampany ಬ್ಯಾನರ್‌ ಅಡಿಯಲ್ಲಿ ನಿರ್ಮಿಸಲಾಗುತ್ತಿದೆ. ಇದು ಅವರ ಐದನೇ ನಿರ್ಮಾಣದ ಸಿನಿಮಾ. ಜಸ್ಟಿನ್ ವರ್ಗೀಸ್ ಸಂಗೀತ ಸಂಯೋಜನೆ, ವಿಷ್ಣು ಶರ್ಮಾ ಛಾಯಾಗ್ರಹಣ ಮತ್ತು ಶಮೀರ್ ಮಹಮ್ಮದ್ ಸಂಕಲನವಿದೆ. ಮಿಥುನ್ ಮ್ಯಾನುಯೆಲ್ ಥಾಮಸ್ ಸಿನಿಮಾಗೆ ಚಿತ್ರಕಥೆ ರಚಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ತಮಿಳಿಗೆ ಪದಾರ್ಪಣೆ ಮಾಡಿರುವ ಸುನಿಲ್‌ ಅವರು ‘ಮಾವೀರನ್’, ‘ಜೈಲರ್’, ‘ಮಾರ್ಕ್ ಆಂಟನಿ’ ಮತ್ತು ‘ಜಪಾನ್’ ಚಿತ್ರಗಳಲ್ಲಿ ನಟಿಸಿದ್ದಾರೆ. ಶಂಕರ್ ನಿರ್ದೇಶನದ ‘ಗೇಮ್ ಚೇಂಜರ್’, ತ್ರಿವಿಕ್ರಮ್ ಶ್ರೀನಿವಾಸ್ ಅವರ ‘ಗುಂಟೂರು ಕಾರಮ್’, ಸುಕುಮಾರ್ ಅವರ ‘ಪುಷ್ಪ 2: ದಿ ರೂಲ್’ ತೆರೆಗೆ ಸಿದ್ಧವಾಗುತ್ತಿರುವ ಸುನೀಲ್‌ ಅವರ ಇತರೆ ಪ್ರಮುಖ ಸಿನಿಮಾಗಳು.

LEAVE A REPLY

Connect with

Please enter your comment!
Please enter your name here