ಪೂರಿ ಜಗನ್ನಾಥ್‌ ನಿರ್ದೇಶನದ ‘ಡಬಲ್‌ ಇಸ್ಮಾರ್ಟ್‌’ ತೆಲುಗು ಸಿನಿಮಾದ ‘ಸ್ಟೆಪ್ಪಾ ಮಾರ್‌’ ಸಾಂಗ್‌ ಬಿಡುಗಡೆಯಾಗಿದೆ. ಭಾಸ್ಕರ ಭಟ್ಲರ ರಚನೆಯ ಈ ಹಾಡಿಗೆ ಮಣಿಶರ್ಮ ಸಂಗೀತ ಸಂಯೋಜಿಸಿದ್ದರೆ. ಜಾನಿ ಮಾಸ್ಟರ್‌ ಕೊರಿಯೋಗ್ರಫಿಗೆ ಹೀರೋ ರಾಮ್‌ ಪೋತಿನೇನಿ ಹೆಜ್ಜೆ ಹಾಕಿದ್ದಾರೆ.

ರಾಮ್‌ ಪೋತಿನೇನಿ ನಟನೆಯ ‘ಡಬಲ್‌ ಇಸ್ಮಾರ್ಟ್‌’ ತೆಲುಗು ಚಿತ್ರದ ‘ಸ್ಪೆಪ್ಪಾ ಮಾರ್‌’ ಸಾಂಗ್‌ ಬಿಡುಗಡೆಯಾಗಿದೆ. ಭಾಸ್ಕರ ಭಟ್ಲರ ರಚನೆಯ ಈ ಹಾಡಿಗೆ ಮಣಿಶರ್ಮ ಸಂಗೀತ ಸಂಯೋಜಿಸಿದ್ದು, ಅನುರಾಗ್ ಕುಲಕರ್ಣಿ ಮತ್ತು ಚಂಗಂತಿ ದನಿಯಾಗಿದ್ದಾರೆ. ಅದ್ಧೂರಿ ಸೆಟ್‌ಗಳಲ್ಲಿ ಜಾನಿ ಮಾಸ್ಟರ್‌ ಕೊರಿಯೋಗ್ರಫಿಗೆ ಹೀರೋ ರಾಮ್‌ ಪೋತಿನೇನಿ ಎನರ್ಜಿಟಿಕ್‌ ಆಗಿ ಕುಣಿದಿದ್ದಾರೆ. ಪುರಿ ಕನೆಕ್ಟ್ಸ್‌ ಬ್ಯಾನರ್‌ನಡಿ ಪೂರಿ ಜಗನ್ನಾಥ್‌, ಚಾರ್ಮಿ ಕೌರ್‌ ನಿರ್ಮಿಸುತ್ತಿರುವ ಚಿತ್ರವನ್ನು ಪೂರಿ ಜಗನ್ನಾಥ್‌ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರ ಆಗಸ್ಟ್ 15ರಂದು ಬಿಡುಗಡೆಯಾಗಲಿದೆ. ಸದ್ಯ ಸಿನಿಮಾ ಕೊನೆಯ ಹಂತದ ಚಿತ್ರೀಕರಣದಲ್ಲಿದ್ದು, ಪ್ರಚಾರ ಕೆಲಸಗಳೂ ನಡೆಯುತ್ತಿವೆ.

ಬಾಲಿವುಡ್‌ ನಟ ಸಂಜಯ್‌ ದತ್‌ ಚಿತ್ರದ ಖಳಪಾತ್ರದಲ್ಲಿ ನಟಿಸುತ್ತಿದ್ದು, ನಾಯಕಿಯಾಗಿ ಕಾವ್ಯಾ ಥಾಪರ್‌ ಇದ್ದಾರೆ. ತೆಲುಗು ಮಾತ್ರವಲ್ಲದೇ ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಸ್ಯಾಮ್ ಕೆ ನಾಯ್ಡು ಮತ್ತು ಗಿಯಾನಿ ಗಿಯಾನ್ನೆಲಿ ಛಾಯಾಗ್ರಾಹಕರಾಗಿ ದುಡಿದಿದ್ದಾರೆ. 2019 ರಲ್ಲಿ ‘ಇಸ್ಮಾರ್ಟ್ ಶಂಕರ್’ ಸಿನಿಮಾ ರಿಲೀಸ್ ಆಗಿತ್ತು. ಇದರಲ್ಲಿ ಕನ್ನಡತಿ ನಭಾ ನಟೇಶ್ ಅಭಿನಯಿಸಿದ್ದರು. ಈ ಸಿನಿಮಾ ದೊಡ್ಡ ಯಶಸ್ಸು ಕಂಡಿತ್ತು. ಈಗ ಐದು ವರ್ಷಗಳ ನಂತರ ಪಾರ್ಟ್ 2 ‘ಡಬಲ್ ಇಸ್ಮಾರ್ಟ್’ ರಿಲೀಸ್‌ ಆಗುತ್ತಿದೆ.

LEAVE A REPLY

Connect with

Please enter your comment!
Please enter your name here