ಸೈಯದ್‌ ಸೊಹೈಲ್‌ ರಯಾನ್‌ ಮತ್ತು ರೂಪ ಕೊಡುವಯೂರ್‌ ನಟನೆಯ ‘ಮಿಸ್ಟರ್‌ ಪ್ರೆಗ್ನೆಂಟ್‌’ ತೆಲುಗು ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ತನ್ನ ಗರ್ಭದಲ್ಲಿ ಮಗುವನ್ನು ಹೊತ್ತು ಹೆರಿಗೆಗೆ ಸಜ್ಜಾಗುವ ಪುರುಷನ ಕತೆಯಿದು. ಆಗಸ್ಟ್‌ 18ರಂದು ಸಿನಿಮಾ ತೆರೆಕಾಣಲಿದೆ.

ಶ್ರೀನಿವಾಸ್ ವಿಂಜನಂಪತಿ ನಿರ್ದೇಶನದ ‘ಮಿಸ್ಟರ್ ಪ್ರೆಗ್ನೆಂಟ್’ ತೆಲುಗು ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದೆ. ಡಿಫರೆಂಟ್ ಕಾನ್ಸೆಪ್ಟ್‌ನೊಂದಿಗೆ ಬರುತ್ತಿರುವ ಈ ಸಿನಿಮಾದಲ್ಲಿ ಸೈಯದ್ ಸೊಹೈಲ್‌ ರಯಾನ್, ರೂಪ ಕೊಡುವಯೂರ್, ಸುಹಾಸಿನಿ ಮಣಿರತ್ನಂ ಮತ್ತು ರಾಜಾ ರವೀಂದ್ರ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಟ್ರೈಲರ್‌ನಲ್ಲಿ ಗೌತಮ್ (ಸೈಯದ್‌ ಸೋಹೆಲ್‌ ರಯಾನ್), ಮಾಹಿ (ರೂಪ ಕೊಡುವಯೂರ್)‌ ಯನ್ನು ಮದುವೆಯಾದ ಬಳಿಕ ಮಗುವನ್ನು ತನ್ನ ಗರ್ಭದಲ್ಲಿ ಹೊತ್ತು ಮಗುವನ್ನು ಹೆರಿಗೆ ಮಾಡಲು ನಿರ್ಧರಿಸುತ್ತಾನೆ. ದಂಪತಿಗಳು ತಮ್ಮ ಆಯ್ಕೆಯ ಪರಿಣಾಮದಿಂದಾಗಿ ಸಮಾಜದಿಂದ, ಕುಟುಂಬಗಳಿಂದ ಅವಮಾನ ಎದುರಿಸಬೇಕಾಗುತ್ತದೆ. ಭಾರತದ ಮೊದಲ ಪುರುಷ ಗರ್ಭದಾರಿ ಎಂದು ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿ ಮನೆಯಿಂದ ಹೊರಬಾರಲಾಗದೇ ಗೌತಮ್‌ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾನೆ.

ಇಬ್ಬರೂ ಸಂಬಂಧಿಕರು ಮತ್ತು ಅವರ ಕುಟುಂಬದ ಸದಸ್ಯರುಗಳಿಂದ ನಕಾರಾತ್ಮಕ ಪ್ರತಿಕ್ರಿಯೆಯನ್ನು ಎದುರಿಸುತ್ತಾರೆ. ಅವರು ಎಲ್ಲಿ ಹೋದರೂ ಅವರನ್ನು ಹಿಂಬಾಲಿಸಿ ಚಿತ್ರಹಿಂಸೆ ಕೊಡುವ ಸನ್ನಿವೇಶಗಳನ್ನು ಚಿತ್ರ ಒಳಗೊಂಡಿದೆ. ಚಿತ್ರವನ್ನು MIC MOVIES ಬ್ಯಾನರ್‌ ಅಡಿಯಲ್ಲಿ ಅಪ್ಪಿ ರೆಡ್ಡಿ ನಿರ್ಮಿಸುತ್ತಿದ್ದು, ಶ್ರವಣ್‌ ಭಾರದ್ವಾಜ್‌ ಸಂಗೀತ ಸಂಯೋಜಿಸಿದ್ದಾರೆ. ನಿಜಾರ್‌ ಶಾಫಿ ಛಾಯಾಗ್ರಹಣವಿದೆ. ರವೀಂದ್ರ, ಬ್ರಹ್ಮಾಜಿ, ಅಲಿ, ಹರ್ಷ, ಅಭಿಷೇಕ್ ರೆಡ್ಡಿ ಬೊಬ್ಬಾಳ, ಸ್ವಪ್ನಿಕಾ ಸೇರಿದಂತೆ ಪ್ರಮುಖ ತಾರಾಬಳಗವನ್ನು ಸಿನಿಮಾ ಹೊಂದಿದೆ. ಪುರುಷ ಗರ್ಭ ಧರಿಸುವುದು ಅದೆಷ್ಟರ ಮಟ್ಟಿಗೆ ಸತ್ಯಾಂಶವೋ ತಿಳಿಯದು. ಒಟ್ಟಿನಲ್ಲಿ ಭಿನ್ನ ಕತೆಯಿಂದಾಗಿ ಸಿನಿಮಾ ಪ್ರೇಕ್ಷಕರಲ್ಲಿ ನಿರೀಕ್ಷೆ ಮೂಡಿಸಿದೆ. ಚಿತ್ರ ಆಗಸ್ಟ್‌ 18ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

Previous articleಧರ್ಮಗುರುಗಳ ಸಮ್ಮುಖದಲ್ಲಿ ಬಿಡುಗಡೆಯಾಯ್ತು ‘ತಾಯ್ತ’ ಚಿತ್ರದ ಹಾಡು
Next article‘ಸ್ಕಂದ’ ಸಾಂಗ್‌ | ರಾಮ್‌ – ಶ್ರೀಲೀಲಾ ತೆಲುಗು ಸಿನಿಮಾ ಸೆಪ್ಟೆಂಬರ್‌ 15ಕ್ಕೆ ತೆರೆಗೆ

LEAVE A REPLY

Connect with

Please enter your comment!
Please enter your name here