ನಾನಿ ಅಭಿನಯದ ‘ಹಾಯ್‌ ನಾನ್ನ’ ತೆಲುಗು ಸಿನಿಮಾದ ಕನ್ನಡ ಅವತರಣಿಕೆಯ ಹಾಡನ್ನು ನಟ ಸುದೀಪ್‌ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ತಂದೆ – ಮಗಳ ಬಾಂಧವ್ಯದ ಕತೆಯ ಈ ಸಿನಿಮಾ ವರ್ಷಾಂತ್ಯಕ್ಕೆ ತೆರೆಕಾಣಲಿದೆ. ಮೃಣಾಲ್‌ ಠಾಕೂರ್‌ ಚಿತ್ರದ ನಾಯಕಿ.

ನಾನಿ ಮತ್ತು ಮೃಣಾಲ್‌ ಠಾಕೂರ್‌ ಮುಖ್ಯಭೂಮಿಕೆಯಲ್ಲಿ ನಟಸಿರುವ ‘ಹಾಯ್‌ ನಾನ್ನ’ ಚಿತ್ರದ ಕನ್ನಡ ಅವತರಣಿಕೆಯ ಗೀತೆಯನ್ನು ನಟ ಸುದೀಪ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಇದು ಬಿಡುಗಡೆಯಾಗುತ್ತಿರುವ ಚಿತ್ರದ ಎರಡನೇ ಸಾಂಗ್‌. ”ಸಹೋದರ ನಾನಿ ಹಾಗೂ ಇಡೀ ತಂಡಕ್ಕೆ ಶುಭವಾಗಲಿ. ‘ಮಗಳಲ್ಲ..’ ಹಾಡನ್ನು ಪ್ರಸ್ತುತ ಪಡಿಸುತ್ತಿದ್ದೇನೆ” ಎಂದು ಸುದೀಪ್ Twitterನಲ್ಲಿ ಬರೆದುಕೊಂಡಿದ್ದಾರೆ. ಇದಕ್ಕೆ ಮರು ಉತ್ತರಿಸಿರುವ ನಾನಿ, ಧನ್ಯವಾದ ಅರ್ಪಿಸಿದ್ದಾರೆ. ಸುದೀಪ್ ಮತ್ತು ನಾನಿ ಮಧ್ಯೆ ಉತ್ತಮ ಸ್ನೇಹ ಸಂಬಂಧವಿದೆ. ಎಸ್ ​​ಎಸ್​ ರಾಜಮೌಳಿ ನಿರ್ದೇಶನದ ‘ಈಗ’ ಸಿನಿಮಾದಲ್ಲಿ ನಾನಿ ಮತ್ತು ಸುದೀಪ್ ಒಟ್ಟಾಗಿ ನಟಿಸಿದ್ದರು. ಅಂದಿನಿಂದ ಇಂದಿನವರೆಗೂ ಇವರ ಸ್ನೇಹ ಹಾಗೆಯೇ ಮುಂದುವರಿದಿದೆ. ನಾನಿ ಭಿನ್ನ ಪಾತ್ರಗಳನ್ನು ಮಾಡುತ್ತಿರುತ್ತಾರೆ. ಒಂದು ಚಿತ್ರದಿಂದ ಮತ್ತೊಂದು ಚಿತ್ರಕ್ಕೆ ಹೊಸ ರೀತಿಯ ಪಾತ್ರಗಳನ್ನು ಒಪ್ಪಿಕೊಳ್ಳುತ್ತಾರೆ. ಈಗ ಅವರು ‘ಹಾಯ್ ನಾನ್ನ’ ಚಿತ್ರದಲ್ಲಿ ತಂದೆ ಮಗಳ ಬಾಂಧವ್ಯದ ಕಥಾಹಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ‘ಓ ಮಧು’ ಗೀತೆ ಈಗಾಗಲೇ ಬಿಡುಗಡೆಯಾಗಿ ಗಮನ ಸೆಳೆಯುತ್ತಿದ್ದು, ವರ್ಷಾಂತ್ಯಕ್ಕೆ ಈ ಸಿನಿಮಾ ಬಿಡುಗಡೆಯಾಗಲಿದೆ.

https://x.com/KicchaSudeep/status/1710168295910109546?s=20

LEAVE A REPLY

Connect with

Please enter your comment!
Please enter your name here