ಸಂದೀಪ್‌ ರೆಡ್ಡಿ ವಂಗ ನಿರ್ದೇಶನದ ‘ಅನಿಮಲ್‌’ ಹಿಂದಿ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ರಣಬೀರ್‌ ಕಪೂರ್‌, ರಶ್ಮಿಕಾ ಮಂದಣ್ಣ, ಅನಿಲ್‌ ಕಪೂರ್‌, ಬಾಬ್ಬಿ ಡಿಯೋಲ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಆಕ್ಷನ್‌ – ಥ್ರಿಲ್ಲರ್‌ ಚಿತ್ರವಿದು. ಡಿಸೆಂಬರ್‌ 1ರಂದು ಸಿನಿಮಾ ತೆರೆಕಾಣಲಿದೆ.

ರಣಬೀರ್ ಕಪೂರ್, ಅನಿಲ್ ಕಪೂರ್, ರಶ್ಮಿಕಾ ಮಂದಣ್ಣ, ಬಾಬ್ಬಿ ಡಿಯೋಲ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ಬಹುನಿರೀಕ್ಷಿತ ‘ಅನಿಮಲ್‌’ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ಚಲನಚಿತ್ರವನ್ನು ಸಂದೀಪ್ ರೆಡ್ಡಿ ವಂಗ ಚಿತ್ರಕಥೆ, ಸಂಭಾಷಣೆ ರಚಿಸಿ ನಿರ್ದೇಶಿಸಿದ್ದಾರೆ. ರಶ್ಮಿಕಾ ಮಂದಣ್ಣ ಅವರ ಗೀತಾಂಜಲಿ ಪಾತ್ರದೊಂದಿಗೆ ರಣಬೀರ್ ಕಪೂರ್ ತನ್ನ ತಂದೆಯ ಬಗ್ಗೆ ಮಾತನಾಡುವ ಮೂಲಕ ಟೀಸರ್ ಆರಂಭವಾಗುತ್ತದೆ. ‘ನನ್ನ ಅಪ್ಪ World’s Best ಅಪ್ಪ’ ಎಂದು ಕೋಪದಿಂದ ರಣಬೀರ್‌, ರಶ್ಮಿಕಾಗೆ ಹೇಳುತ್ತಾನೆ. ಅನಿಲ್‌ ಕಪೂರ್‌ ಒಂದೆಡೆ ರಣಬೀರ್‌ಗೆ ಕಠಿಣವಾಗಿ ಶಿಕ್ಷಿಸುವುದನ್ನು ಸಹ ಕಾಣಬಹುದು. ಅನಿಲ್‌ ಕಪೂರ್‌ ರಣಬೀರ್‌ ತಂದೆಯಾಗಿ ಕಾಣಿಸಿಕೊಂಡಿದ್ದು, ಚಿತ್ರದಲ್ಲಿ ತಂದೆ – ಮಗನ ಬಾಂಧವ್ಯವು ಪ್ರಮುಖಾಂಶವಾಗಿ ಮೂಡಿಬಂದಿದೆ.

ಆಕ್ಷನ್‌ ಥ್ರಿಲ್ಲರ್‌ ಜಾನರ್‌ ಚಿತ್ರದಲ್ಲಿ ರಣಬೀರ್‌ ದೈತ್ಯ ಬಂದೂಕುಗಳನ್ನು ಹಿಡಿದು ಎದುರಾಳಿಗಳೊಂದಿಗೆ ಹೊಡೆದಾಡುವ ದೃಶ್ಯಗಳೂ ಸಹ ಟೀಸರ್‌ನಲ್ಲಿವೆ. ಚಿತ್ರದಲ್ಲಿ ರಣಬೀರ್ ಕಪೂರ್ ಹಿಂದೆಂದೂ ನೋಡಿರದ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. T-Series, A T-Series Films, St Film Ltd ಮತ್ತು Bhadrakali Pictures Production ಬ್ಯಾನರ್‌ ಅಡಿಯಲ್ಲಿ ಭೂಷಣ್ ಕುಮಾರ್, ಪ್ರಣಯ್ ರೆಡ್ಡಿ ವಂಗ, ಮುರಾದ ಖೇತಾನಿ, ಕೃಷ್ಣ ಕುಮಾರ್ ನಿರ್ಮಿಸಿದ್ದಾರೆ. ತೃಪ್ತಿ ಡಿಮ್ರಿ ಮತ್ತು ಶಕ್ತಿ ಕಪೂರ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮೂಲ ಹಿಂದಿ ಸೇರಿದಂತೆ ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಡಿಸೆಂಬರ್ 1, 2023ರಂದು ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here