ಬಾಲಿವುಡ್‌ ತಾರಾ ಕುಡಿಗಳಾದ ಸುಹಾನಾ ಖಾನ್‌, ಅಗಸ್ತ್ಯ ನಂದಾ, ಖುಷಿ ಕಪೂರ್‌ ಅಭಿನಯದ ‘ದಿ ಆರ್ಚೀಸ್‌’ ಹಿಂದಿ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ನಿರ್ದೇಶಕ ಜೋಯಾ ಅಖ್ತರ್‌ ಇಲ್ಲಿ 60ರ ದಶಕದ ಚಿತ್ರಣ ಕಟ್ಟಿದ್ದು, ಕಾಲ್ಪನಿಕ ಸಿಟಿ Riverdaleನಲ್ಲಿ ನಡೆಯುವ ಕತೆ ಹೇಳಿದ್ದಾರೆ. ಅಂದಿನ ದಿನಮಾನಗಳ ರಾಕ್‌ ಮ್ಯೂಸಿಕ್‌, ಲವ್‌, ಬ್ರೇಕ್‌ ಅಪ್‌ ಇನ್ನಿತರೆ ಅಂಶಗಳು ಟ್ರೈಲರ್‌ನಲ್ಲಿ ಕಾಣಿಸುತ್ತವೆ.

ಜೋಯಾ ಅಖ್ತರ್‌ ನಿರ್ದೇಶನದ ‘ದಿ ಆರ್ಚೀಸ್‌’ ಹಿಂದಿ ಸಿನಿಮಾ ಶುರುವಾದಾಗಿನಿಂದಲೂ ಸುದ್ದಿಯಲ್ಲಿದೆ. ಚಿತ್ರದಲ್ಲಿ ನಟ ಶಾರುಖ್‌ ಪುತ್ರಿ ಸುಹಾನಾ, ನಟಿ ಶ್ರೀದೇವಿ ಪುತ್ರಿ ಖುಷಿ ಮತ್ತು ನಟ ಅಮಿತಾಭ್‌ ಬಚ್ಚನ್‌ ಮೊಮ್ಮಗ ಅಗಸ್ತ್ಯ ನಂದಾ ನಟಿಸಿದ್ದಾರೆ ಎನ್ನುವುದು ಕಾರಣ. ಇದೀಗ ಟ್ರೈಲರ್‌ ಬಿಡುಗಡೆಯಾಗಿದೆ. ಬಾಲಿವುಡ್‌ನ ಪ್ರತಿಭಾವಂತ ಮತ್ತು ಯಶಸ್ವೀ ನಿರ್ದೇಶಕಿ ಎಂದೇ ಗುರುತಿಸಿಕೊಂಡಿರುವ ಜೋಯಾ ಮತ್ತೊಮ್ಮೆ ಗೆಲ್ಲುವ ಸೂಚನೆ ನೀಡಿದ್ದಾರೆ. 1964ರ ಕಾಲಘಟ್ಟದಲ್ಲಿ ಗುಡ್ಡಗಾಡಿನ ಸುಂದರ ಕಾಲ್ಪನಿಕ ನಗರಿ ರಿವರ್‌ಡೇಲ್‌ನಲ್ಲಿ ನಡೆಯುವ ಕತೆಯನ್ನು ನಿರೂಪಿಸಿದ್ದಾರವರು. ಆಗ ಟ್ರೆಂಡಿಂಗ್‌ನಲ್ಲಿದ್ದ ರಾಕ್‌ ಮ್ಯೂಸಿಕ್‌, ಪ್ರೀತಿ, ಪ್ರಣಯ, ವಿದ್ಯಾರ್ಥಿ ಬದುಕಿನ ತಂಟೆ, ತಕರಾರು, ಕಷ್ಟ – ಸುಖಗಳನ್ನು ಹೇಳುತ್ತವೆ ಚಿತ್ರದ ಪಾತ್ರಗಳು. ಮಧುರವಾದ ಹಿನ್ನೆಲೆ ಸಂಗೀತ, ನವಿರಾದ ಸನ್ನಿವೇಶಗಳೊಂದಿಗೆ ಟ್ರೈಲರ್‌ ಆಪ್ತವಾಗುತ್ತದೆ.

ಉತ್ಸಾಹಿ ಯುವ ನಟ, ನಟಿಯರ ಪರಿಚಯದೊಂದಿಗೆ ಟ್ರೈಲರ್‌ ತೆರೆದುಕೊಳ್ಳುತ್ತದೆ. ಅವರು ತೊಟ್ಟ ರೆಟ್ರೋ ಲುಕ್‌ನ ಕಾಸ್ಟ್ಯೂಮ್‌ಗಳು ಆಕರ್ಷಕವೆನಿಸುತ್ತವೆ. ಸುಹಾನಾ, ಖುಷಿ, ಅಗಸ್ತ್ಯ ಅವರೊಂದಿಗೆ ಇತರೆ ಪಾತ್ರಧಾರಿಗಳಾಗಿ ಮಿಹಿರ್‌ ಅಹುಜಾ, ವೇದಾಂಗ್‌ ರೈನಾ, ಯುವರಾಜ್‌ ಮೆಂಡಾ ನಟಿಸಿದ್ದಾರೆ. ಬ್ರೆಝಿಲ್‌ನ Tudum ಇವೆಂಟ್‌ನಲ್ಲಿ ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದೆ. ಈ ವೀಡಿಯೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿರುವ Netflix, ‘You’ve seen the gang in the comics, in books, and even in Riverdale — but this time around, you’ll see them closer to home! Set in the 60’s, The Archies builds a world that’s both familiar and new. Here’s your first look #TUDUM!’ ಎಂದು ಬರೆದಿದೆ.

ಕಳೆದ ವರ್ಷ ಏಪ್ರಿಲ್‌ನಲ್ಲಿ ‘ದಿ ಆರ್ಚೀಸ್‌’ ಶೂಟಿಂಗ್‌ ಶುರುವಾಗಿತ್ತು. ನಿರ್ಮಾಪಕಿ ರೀಮಾ ಕಾಟ್ಗಿ ಮೊದಲ ದಿನದ ಶೂಟಿಂಗ್‌ನ ಫೋಟೊ ಹಂಚಿಕೊಂಡು, ‘Archie’s shoot starts, Tiger Baby’s first solo production #partnerincrime @zoieakhtar @Netflix’ ಎಂದಿದ್ದರು. ಅದಾದ ನಂತರ Netflix ಚಿತ್ರದ ಫಸ್ಟ್‌ ಲುಕ್‌ ಶೇರ್‌ ಮಾಡಿ, ‘The sun is out, the news is out! Come meet your new friends. Presenting to you the cast of The Archies, directed by the fantastic Zoya Akhtar’ ಎಂದು ಬರೆದಿತ್ತು. ಇನ್ನು ನಿರ್ದೇಶಕಿ ಜೋಯಾ ಅಖ್ತರ್‌ ಈ ಚಿತ್ರದ ಬಗ್ಗೆ ಮಾನತಾಡುತ್ತಾ, ‘ನನ್ನ ಬಾಲ್ಯ ಮತ್ತು ಟೀನೇಜ್‌ ದಿನಗಳಲ್ಲಿ ಆರ್ಚೀಸ್‌ ಸರಣಿ ಬದುಕಿನ ಭಾಗವಾಗಿತ್ತು. ಈ ಪಾತ್ರಗಳನ್ನು ತೆರೆಗೆ ಅಳವಡಿಸುವಾಗ ನಾನು ನಿಜಕ್ಕೂ ನರ್ವಸ್‌ ಆಗಿದ್ದೆ! ಅಂದಿನ ನಾಸ್ಟಾಲ್ಜಿಯಾವನ್ನು ತೆರೆಗೆ ತರಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ’ ಎಂದಿದ್ದಾರೆ. ಈ ಸಿನಿಮಾದ ಸ್ಟ್ರೀಮಿಂಗ್‌ ದಿನಾಂಕವಿನ್ನೂ ಘೋಷಣೆಯಾಗಬೇಕಿದೆ.

Previous article‘Valatty: Tale of Tails’ ಟ್ರೈಲರ್‌ | ದೇವನ್‌ ನಿರ್ದೇಶನದ ಮಲಯಾಳಂ Pet ಸಿನಿಮಾ
Next articleಸದ್ಯದಲ್ಲೇ ‘HIDE N SEEK’ ಟ್ರೈಲರ್‌ | ನಟಿ ಶಿಲ್ಪ ಮಂಜುನಾಥ್‌ ದ್ವಿಭಾಷಾ ಸಿನಿಮಾ

LEAVE A REPLY

Connect with

Please enter your comment!
Please enter your name here