‘ಬ್ರಹ್ಮಾಸ್ತ್ರ 2’ ಹಿಂದಿ ಚಿತ್ರದಲ್ಲಿ ರಣವೀರ್ ಸಿಂಗ್ ‘ದೇವ್’ ಪಾತ್ರ ನಿರ್ವಹಿಸಲಿದ್ದಾರೆ. ‘ಬ್ರಹ್ಮಾಸ್ತ್ರ: ಭಾಗ ಒಂದು – ಶಿವ’ (2022) ಸಿನಿಮಾ ಬಿಡುಗಡೆಯಾದಾಗಿನಿಂದ Part 2ನಲ್ಲಿ ಶಿವನ ತಂದೆಯಾಗಿ ಯಾರು ನಟಿಸಲಿದ್ದಾರೆ ಎನ್ನುವ ಚರ್ಚೆ ಶುರುವಾಗಿತ್ತು. ಇದೀಗ ರಣವೀರ್ ಸಿಂಗ್ ನಟಿಸುವುದು ಖಚಿತವಾಗಿದೆ.
ಅಯಾನ್ ಮುಖರ್ಜಿ ನಿರ್ದೇಶನದಲ್ಲಿ ರಣಬೀರ್ ಕಪೂರ್ ನಟಿಸಲಿರುವ ‘ಬ್ರಹ್ಮಾಸ್ತ್ರ 2’ ಹಿಂದಿ ಚಿತ್ರದಲ್ಲಿ ರಣವೀರ್ ಸಿಂಗ್ ‘ದೇವ್’ ಪಾತ್ರದಲ್ಲಿ ನಟಿಸಲಿದ್ದಾರೆ. ‘ಬ್ರಹ್ಮಾಸ್ತ್ರ: ಭಾಗ ಒಂದು – ಶಿವ’ (2022) ಸಿನಿಮಾ ಬಿಡುಗಡೆಯಾದಾಗಿನಿಂದ ಸಿನಿಮಾದ ಭಾಗ ಎರಡರಲ್ಲಿ ಶಿವನ ತಂದೆಯಾಗಿ ಹೃತಿಕ್ ರೋಷನ್ ಅಥವಾ ಯಶ್ ಕಾಣಿಸಿಕೊಳ್ಳುತ್ತಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಆದರೆ ಈಗ ಮಾಹಿತಿ ಅಧಿಕೃತವಾಗಿದೆ. ಶಿವನ ತಂದೆ ದೇವ್ ಪಾತ್ರದಲ್ಲಿ ಅಂದರೆ ರಣವೀರ್ ಸಿಂಗ್ ಅವರು ರಣಬೀರ್ ಕಪೂರ್ ಅವರ ತಂದೆಯ ಪಾತ್ರವನ್ನು ನಿರ್ವಹಿಸಲಿದ್ದಾರೆ. ರಣವೀರ್ ಈ ಬಹು ನಿರೀಕ್ಷಿತ ಪಾತ್ರವನ್ನು ನಿರ್ವಹಿಸಲು ಒಪ್ಪಿಗೆ ಸೂಚಿಸಿದ್ದಾರೆ.
ಈ ಸಿನಿಮಾದ ಭಾಗ ಒಂದರಲ್ಲಿ ಶಾರುಖ್ ಖಾನ್, ಅಮಿತಾಬ್ ಬಚ್ಚನ್, ಅಲಿಯಾ ಭಟ್, ಅಕ್ಕಿನೇನಿ ನಾಗಾರ್ಜುನ ಕಾಣಿಸಿಕೊಂಡಿದ್ದರು. ಚಿತ್ರದ ಕೊನೆಯಲ್ಲಿ ದೇವ್ನನ್ನು ಎದುರಾಳಿಯಾಗಿ ಪರಿಚಯಿಸಲಾಗಿತ್ತು. ಚಿತ್ರದ ಎರಡನೇ ಭಾಗದ ಸ್ಕ್ರಿಪ್ಟಿಂಗ್ ಇನ್ನೂ ಪ್ರಗತಿಯಲ್ಲಿರುವ ಕಾರಣ ಚಿತ್ರವು 2025ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಪ್ರಸ್ತುತ, ಅಯಾನ್ ಮುಖರ್ಜಿ ಅವರು ‘War 2’ ಚಿತ್ರದಲ್ಲಿ ನಿರತರಾಗಿದ್ದಾರೆ. ಮತ್ತು ರಣವೀರ್ ಈ ವರ್ಷ ‘ಬೈಜು ಬಾವ್ರಾ’ ಸಿನಿಮಾದ ಚಿತ್ರೀಕರಣ ಪ್ರಾರಂಭಿಸಲಿದ್ದಾರೆ.