ರವೀನಾ ಟಂಡನ್‌ ಮೊದಲ ಬಾರಿಗೆ OTTಗೆ ಪದಾರ್ಪಣೆ ಮಾಡಿದ್ದಾರೆ. ವಿನಯ್‌ ವಾಯಿಕುಲ್‌ ನಿರ್ದೇಶನದ ‘ಅರಣ್ಯಕ್‌’ ವೆಬ್‌ ಸರಣಿಯಲ್ಲಿ ದಿಟ್ಟ ಪೊಲೀಸ್‌ ಪಾತ್ರದಲ್ಲಿ ಅವರು ಮಿಂಚಿದ್ದಾರೆ. ಈ ಮೂಲಕ 90ರ ದಶಕದ ಮತ್ತೊಬ್ಬ ನಾಯಕನಟಿ ನೆಟ್‌ಫ್ಲಿಕ್ಸ್‌ ಪ್ರವೇಶಿಸಿದಂತಾಗಿದೆ.

90ರ ದಶಕದ ದೊಡ್ಡ ನಾಯಕನಟಿಯರ ಸಾಲಿನಲ್ಲಿ ರವೀನಾ ಟಂಡನ್‌ ಕೂಡಾ ಒಬ್ಬರು. ಸೈಫ್‌ ಅಲಿಖಾನ್‌, ಅಭಿಷೇಕ್‌ ಬಚ್ಚನ್‌, ಕರಿಷ್ಮಾಕಪೂರ್‌ ನಂತರ ರವೀನಾ ವೆಬ್‌ ಸರಣಿಯಲ್ಲಿ ಬಣ್ಣ ಹಚ್ಚಿದ್ದಾರೆ. “ನೆಟ್‌ಫ್ಲಿಕ್ಸ್‌ನ ವೆಬ್‌ ಸರಣಿಯಲ್ಲಿ ಆಕ್ಟ್‌ ಮಾಡುತ್ತಿರುವುದು ನನಗೆ ತುಂಬಾ ಖುಷಿಕೊಟ್ಟಿದೆ. ಈ ವಿಷಯವಾಗಿ ನನ್ನ ಮಕ್ಕಳು ತುಂಬಾನೇ ಎಕ್ಸೈಟ್‌ ಆಗಿದ್ದಾರೆ” ಎಂದು ರವೀನಾ ಹೇಳಿಕೊಂಡಿದ್ದಾರೆ. ಇನ್ನು ‘ಅರಣ್ಯಕ್‌ʼ ಬಗ್ಗೆ ಹೇಳುವುದಾದರೆ ಕ್ರೈಮ್‌ ಜೊತೆಗೆ ಥ್ರಿಲ್ ಮತ್ತು ಸಸ್ಪೆನ್ಸ್‌ಹಿನ್ನೆಲೆ ಇರುವ ಪತ್ತೆದಾರಿ ಸರಣಿ ಎನ್ನಬಹುದು. ಇದರ ಟ್ರೈಲರ್‌ ಬಿಡುಗಡೆಯಾಗಿದ್ದು, ರವೀನಾರ ಪೊಲೀಸ್‌ ಪಾತ್ರದ ಜೊತೆಗೆ ಸರಣಿಯ ಕುರಿತಾಗಿ ಕುತೂಹಲ ಹೆಚ್ಚಿಸಿದೆ. ಹಿಮಾಲಯ ನೋಡಲು ಬಂದ ಯುವಪ್ರವಾಸಿಗರೊಬ್ಬರ ಕೊಲೆ ಆಗಿದ್ದು, ಆ ಕೊಲೆ ಕೇಸ್‌ ಅನ್ನು ಭೇದಿಸುವುದೇ ಸರಣಿಯ ಒನ್‌ ಲೈನ್‌ ಸ್ಟೋರಿ. ಅಲ್ಲಿನ ಲೋಕಲ್‌ ಪೊಲೀಸ್‌ ರವಿನಾ ಟಂಡನ್‌ ಕೊಲೆ ಹಿಂದಿನ ರಹಸ್ಯ ಭೇದಿಸುವಾಗ ಎದುರಿಸಬೇಕಾದ ಸವಾಲುಗಳನ್ನು ಸರಣಿಯಲ್ಲಿ ಕುತೂಹಲಕಾರಿಯಾಗಿ ತೋರಿಸಲಾಗಿದೆ.

‘ಅರಣ್ಯಕ್‌ʼನಲ್ಲಿ ಆಶುತೋಷ್‌ ರಾಣಾ, ಮೇಘನಾ ಮಲ್ಲಿಕ್‌, ಜಾಕಿರ್‌ ಹುಸೇನ್‌ ನಟನೆ ಮಾಡಿದ್ದಾರೆ. ರಾಯ್‌ ಕಪೂರ್‌ ಫಿಲಂಸ್‌ ಮತ್ತು ರಮೇಶ್‌ ಸಿಪ್ಪಿ ಎಂಟರ್‌ಟೈನ್‌ಮೆಂಟ್‌ ಹೌಸ್‌ನಿಂದ ಸರಣಿ ನಿರ್ಮಾಣಗೊಂಡಿದೆ. ರವಿನಾ ಟಂಡನ್‌ ಈ ಮೂಲಕ ವೆಬ್‌ ಸರಣಿಗೆ ಕಾಲಿಟ್ಟಿದ್ದು, ಮುಂದೆ ಒಳ್ಳೆಯ ಸ್ಕ್ರಿಪ್ಟ್‌ ಮತ್ತು ಇದೇ ತರಹದ ಚಾಲೆಂಜಿಂಗ್‌ ಪಾತ್ರಗಳು ಬಂದರೆ ವೆಬ್‌ಸರಣಿಯಲ್ಲಿನ ನಟನೆ ಮುಂದುವರೆಸುವುದಾಗಿ ಹೇಳಿಕೊಂಡಿದ್ದಾರೆ.

LEAVE A REPLY

Connect with

Please enter your comment!
Please enter your name here