Septimius ಪ್ರಶಸ್ತಿಯ Best Asian Actress ವಿಭಾಗದಲ್ಲಿ ರಶ್ಮಿಕಾ ಮಂದಣ್ಣ ನಾಮನಿರ್ದೇಶನದ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ವಿಭಾಗದಲ್ಲಿ ಭಾರತೀಯ ನಟಿಯರು ಸೇರಿದಂತೆ ಏಷ್ಯಾದ ಇತರೆ ದೇಶಗಳ ಎಂಟು ನಟಿಯರು ಸ್ಪರ್ಧೆಯಲ್ಲಿದ್ದಾರೆ. Best Asian Actor ವಿಭಾಗದಲ್ಲಿ ಮಲಯಾಳಂನ ಯುವ ನಟ ಟೊವಿನೋ ಥಾಮಸ್ ನಾಮಿನೇಟ್‌ ಆಗಿದ್ದಾರೆ.

ಪ್ರತಿಷ್ಠಿತ Septimius ಪ್ರಶಸ್ತಿಗೆ ಭಾರತೀಯ ಸಿನಿಮಾರಂಗದ ವಿವಿಧ ವಿಭಾಗಗಳ ಸಾಧಕರು ನಾಮನಿರ್ದೇಶನಗೊಂಡಿದ್ದಾರೆ. Best Asian Actress ವಿಭಾಗದಲ್ಲಿ ರಶ್ಮಿಕಾ ಮಂದಣ್ಣ ಮತ್ತು ನಮಿತಾ ಲಾಲ್ ಅವರು ನಾಮನಿರ್ದೇಶನಗೊಂಡಿದ್ದಾರೆ. ನಟಿ, ನಿರ್ಮಾಪಕಿಯಾಗಿ ನಮಿತಾ ಅವರು ‘Before Life After Life’ ವೆಬ್ ಸರಣಿಯಲ್ಲಿ ಗುರುತಿಸಿಕೊಂಡಿದ್ದಾರೆ. ಈ ವಿಭಾಗದಲ್ಲಿ ಭಾರತೀಯ ನಟಿಯರು ಸೇರಿದಂತೆ ಏಷ್ಯಾದ ಇತರೆ ದೇಶಗಳ ಎಂಟು ನಟಿಯರು ಸ್ಪರ್ಧೆಯಲ್ಲಿದ್ದು, ರಶ್ಮಿಕಾ ಮತ್ತು ನಮಿತಾ ಅವರಿಗೆ ಕಠಿಣ ಸ್ಪರ್ಧೆ ಇರಲಿದೆ. Best Asian Actor ವಿಭಾಗದಲ್ಲಿ ಮಲಯಾಳಂನ ಯುವ ನಟ ಟೊವಿನೋ ಥಾಮಸ್ ನಾಮನಿರ್ದೇಶನಗೊಂಡಿದ್ದಾರೆ. ವಿಶೇಷವೆಂದರೆ ಜನಪ್ರಿಯ ಹಿಂದಿ ಯೂಟ್ಯೂಬರ್ ಭುವನ್ ಬಾಮ್ ಸಹ ಇದೇ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದಾರೆ.

Best Asian Films ಪಟ್ಟಿಯಲ್ಲಿ ಮಲಯಾಳಂನ ‘2018’ ಸಿನಿಮಾ ಸಹ ಆಯ್ಕೆಯಾಗಿದ್ದು,‌ ಚಿತ್ರತಂಡದವರು ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ರಶ್ಮಿಕಾ ಮಂದಣ್ಣ ಪ್ರಸ್ತುತ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ‘ಪುಷ್ಪ2’ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದು, ಇತ್ತೀಚೆಗಷ್ಟೇ ರಣ್​ಬೀರ್ ಕಪೂರ್ ಜೊತೆಗಿನ ‘ಅನಿಮಲ್’ ಸಿನಿಮಾ ಚಿತ್ರೀಕರಣ ಮುಗಿಸಿದ್ದಾರೆ. ‘ರೇನ್​ಬೋ’ ಹೆಸರಿನ ಮತ್ತೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಧನುಶ್ ಜೊತೆ ತಮಿಳು ಸಿನಿಮಾ, ನಿತಿನ್ ಜೊತೆ ಹೊಸದೊಂದು ತೆಲುಗು ಸಿನಿಮಾಕ್ಕೂ ಅವರು ಸಹಿ ಹಾಕಿದ್ದಾರೆ. ಕನ್ನಡ, ಹಿಂದಿ, ತೆಲುಗು ಹಾಗೂ ತಮಿಳು ಚಿತ್ರರಂಗದ ಬಹುಬೇಡಿಕೆಯ ನಟಿಯರಲ್ಲೊಬ್ಬರಾಗಿದ್ದಾರೆ ರಶ್ಮಿಕಾ.

https://www.instagram.com/reel/Cwgu64rI_T6/?utm_source=ig_web_copy_link

LEAVE A REPLY

Connect with

Please enter your comment!
Please enter your name here