ಮಲ್ಲಿಕಾ ರಾಮ್ ನಿರ್ದೇಶನದ ‘ಟಿಲ್ಲು ಸ್ಕ್ವೇರ್’ ತೆಲುಗು ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಸಿದ್ದು ಜೊನ್ನಲಗಡ್ಡ ಮತ್ತು ಅನುಪಮಾ ಪರಮೇಶ್ವರನ್‌ ಮುಖ್ಯಪಾತ್ರಗಳಲ್ಲಿ ನಟಿಸಿರುವ ಸಿನಿಮಾ ಮಾರ್ಚ್‌ 29ರಂದು ತೆರೆಕಾಣಲಿದೆ.

ಸಿದ್ದು ಜೊನ್ನಲಗಡ್ಡ ಮತ್ತು ಅನುಪಮಾ ಪರಮೇಶ್ವರನ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಟಿಲ್ಲು ಸ್ಕ್ವೇರ್’ ತೆಲುಗು ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಈ ಸಿನಿಮಾವನ್ನು ಮಲ್ಲಿಕಾ ರಾಮ್‌ ನಿರ್ದೇಶಿಸಿದ್ದಾರೆ. ಟ್ರೇಲರ್‌, ಟಿಲ್ಲು ಕುಟುಂಬದಲ್ಲಿ ಸಂಭಾಷಣೆ ನಡೆಯುತ್ತಿರುವುದರೊಂದಿಗೆ ಆರಂಭವಾಗುತ್ತದೆ. ಟಿಲ್ಲು ಸಂಬಂಧಿಕರು ಅವನನ್ನು ಮದುವೆ ಮಾಡಿಕೊಳ್ಳುವಂತೆ ಒತ್ತಾಯಿಸುತ್ತಿರುತ್ತಾರೆ. ಅವನು ಯಾವ ಹುಡುಗಿಯನ್ನೂ ಒಪ್ಪದ ಕಾರಣ ನೀನೇ ಯಾವುದಾದರೂ ಹುಡುಗಿಯನ್ನು ಪ್ರೀತಿಸಿ ಮದುವೆಯಾಗು ಎಂದು ಸಲಹೆ ನೀಡುತ್ತಿರುತ್ತಾರೆ.

ನಂತರ ಅನುಪಮಾ ಪರಮೇಶ್ವರನ್‌ ಪರಿಚಯವಾಗುತ್ತದೆ. ಪ್ರೀತಿಯಲ್ಲಿ ಬೀಳುವ ಅವರು ಸ್ವತಂತ್ರ ಹಕ್ಕಿಗಳಂತಿರುವುದನ್ನು ಕಾಣಬಹುದು. ಈ comedy – love ಚಿತ್ರವನ್ನು Sithara Entertainments ಬ್ಯಾನರ್‌ ಅಡಿಯಲ್ಲಿ ನಿರ್ಮಿಸಲಾಗುತ್ತಿದ್ದು, ಕಥೆಯಲ್ಲಿ ಟಿಲ್ಲು ಅವರ ತಂದೆಯಾಗಿ ಮುರಳೀಧರ್ ಗೌಡ್ ನಟಿಸಿದ್ದಾರೆ. ಮೆಡೊನ್ನಾ ಸೆಬಾಸ್ಟೀಯನ್‌, ಪ್ರಣೀತ್‌ ರೆಡ್ಡಿ, ಶ್ರೀರಾಮ್‌ ರೆಡ್ಡಿ, ರಾಜ್‌ ತಿರಂದಾಸು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಲನಚಿತ್ರಕ್ಕೆ ರಾಮ್ ಮಿರ್ಯಾಲ ಅವರು ಹಾಡುಗಳನ್ನು ಸಂಯೋಜಿಸುತ್ತಿದ್ದು, ಎಸ್ ಥಮನ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಸಾಯಿ ಪ್ರಕಾಶ್ ಉಮ್ಮಡಿಸಿಂಗು ಛಾಯಾಗ್ರಾಹಣ, ನವೀನ್ ನೂಲಿ ಸಂಕಲನ ನಿರ್ವಹಿಸಿದ್ದಾರೆ. ಮಾರ್ಚ್‌ 29ರಂದು ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here