ರಶ್ಮಿಕಾ ಮಂದಣ್ಣ ಮ್ಯಾನೇಜರ್‌, ನಟಿಗೆ 80 ಲಕ್ಷ ರೂಪಾಯಿ ಮೋಸ ಮಾಡಿದ್ದಾರೆ ಎನ್ನುವ ವದಂತಿ ಹರಡಿತ್ತು. ಇದರಿಂದ ಆಕೆ ಮುಂಬಯಿ ಮೂಲದ ಹೊಸ ಮ್ಯಾನೇಜರ್‌ ನೇಮಿಸಿಕೊಂಡಿದ್ದಾರೆ ಎನ್ನುವ ಸುದ್ದಿಯ ಬಗ್ಗೆ ನಟಿಯ ಆಪ್ತ ವಲಯ ಹೇಳುವುದೇನು?

ವೃತ್ತಿ ಬದುಕಿನ ಆರಂಭದ ದಿನಗಳಿಂದ ತಮ್ಮೊಂದಿಗೆ ಇದ್ದ ಮ್ಯಾನೇಜರ್‌ ಕಡೆಯಿಂದ ರಶ್ಮಿಕಾ ಮಂದಣ್ಣಗೆ ಮೋಸವಾಗಿದೆ ಎನ್ನವು ವದಂತಿ ಹರಡಿತ್ತು. ಸುಮಾರು 80 ಲಕ್ಷ ರೂಪಾಯಿಗಳಷ್ಟು ಹಣಕ್ಕೆ ದೋಖಾ ಆಗಿದೆ, ಇದು ಸಾರ್ವಜನಿಕಗೊಳ್ಳುವ ಮುನ್ನ ಮ್ಯಾನೇಜರ್‌ನನ್ನು ನಟಿ ಹೊರಗೆ ಹಾಕಿದ್ದಾರೆ ಎನ್ನುವ ಸುದ್ದಿಗಳು ಕೇಳಿಬಂದಿದ್ದವು. ಇದೀಗ ರಶ್ಮಿಕಾ ಮಂದಣ್ಣ ಅವರ ಆಪ್ತವಲಯ ನಟಿಗೆ ಯಾವುದೇ ರೀತಿ ಮೋಸವಾಗಿಲ್ಲ ಎಂದಿವೆ. ಅವರಿಗೆ ಯಾವುದೇ ರೀತಿಯ ಹಣಕಾಸಿನ ದೋಖಾ ಆಗಿಲ್ಲ, ನಟಿ ಮತ್ತು ಮ್ಯಾನೇಜರ್‌ ಪರಸ್ಪರ ಮಾತನಾಡಿಕೊಂಡೇ ದೂರವಾಗಿದ್ದಾರೆ ಎನ್ನಲಾಗಿದೆ.

‘ನಟಿಗೆ ಮೋಸಗಾಗಿರೋದು, ಇದರಿಂದ ಆಕೆ ಮ್ಯಾನೇಜರ್‌ನನ್ನು ಪೈರ್‌ ಮಾಡಿರೋದು ಸತ್ಯಕ್ಕೆ ದೂರವಾದದ್ದು. ಅವರೊಂದಿಗಿದ್ದ ಮ್ಯಾನೇಜರ್‌ ತುಂಬಾ ಹಳಬರು. ದಕ್ಷಿಣ ಭಾರತದ ಆತ ನಟಿಯ ವೃತ್ತಿಬದುಕಿನ ಆರಂಭದ ದಿನಗಳಿಂದಲೂ ಹಣಕಾಸಿನ ವ್ಯವಹಾರಗಳನ್ನು ನೋಡಿಕೊಳ್ಳುತಿದ್ದರು. ವೈಯಕ್ತಿಕ ಕಾರಣಗಳಿಗಾಗಿ ನಟಿ ಆತನಿಂದ ಈಗ ದೂರವಾಗಿದ್ದಾರೆ. ಇಬ್ಬರ ಮಧ್ಯೆ ಯಾವುದೇ ವೈಮನಸ್ಸು ಇರಲಿಲ್ಲ. ಪರಸ್ಪರ ಮಾತನಾಡಿಕೊಂಡೇ ದೂರವಾಗಿದ್ದಾರೆ’ ಎಂದು ನಟಿಯ ಆಪ್ತರು ಹೇಳುತ್ತಾರೆ.

ತೆಲುಗು ಚಿತ್ರರಂಗದಲ್ಲಿ ಬಿಝಿಯಾಗಿದ್ದ ನಟಿ ರಶ್ಮಿಕಾ ಈಗ ಬಾಲಿವುಡ್‌ಗೆ ಹಾರಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ಅವರು ಮುಂಬಿಯ ಮೂಲದ ವ್ಯಕ್ತಿಯನ್ನು ತಮ್ಮ ಮ್ಯಾನೇಜರ್‌ ಆಗಿ ನೇಮಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ತೆರೆಕಂಡ ಅಮಿತಾಭ್‌ ಬಚ್ಚನ್‌, ನೀನಾ ಗುಪ್ತಾ ಜೊತೆಗಿನ ‘ಗುಡ್‌ ಬೈ’ ಮತ್ತು ಸಿದ್ದಾರ್ಥ್‌ ಮಲ್ಹೋತ್ರಾ ಅವರ ‘ಮಿಷನ್‌ ಮಜ್ನೂ’ ಹಿಂದಿ ಸಿನಿಮಾಗಳಲ್ಲಿ ತಮ್ಮ ನಟನೆಯ ಮೂಲಕ ಅವರು ಜನರ ಮೆಚ್ಚುಗೆ ಗಳಿಸಿದ್ದಾರೆ. ಸದ್ಯ ಅವರು ಸಂದೀಪ್‌ ರೆಡ್ಡಿ ವಂಗಾ ನಿರ್ದೇಶನದ ‘ಅನಿಮಲ್‌’ ಚಿತ್ರದಲ್ಲಿ ರಣಬೀರ್‌ ಕಪೂರ್‌ ಜೋಡಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ ಆಗಸ್ಟ್‌ 11ರಂದು ತೆರೆಕಾಣಲಿದೆ.

ರಶ್ಮಿಕಾ ಮಂದಣ್ಣ ನಟನೆಯ ‘ಗುಡ್‌ ಬೈ’ ಹಿಂದಿ ಸಿನಿಮಾದ ಟ್ರೈಲರ್‌
Previous article‘ರಾಕಿ ಔರ್‌ ರಾಣಿ ಕಿ ಪ್ರೇಮ್‌ ಕಹಾನಿ’ ಟೀಸರ್‌ | ರಣವೀರ್‌ – ಅಲಿಯಾ ಹಿಂದಿ ಸಿನಿಮಾ
Next article‘ನಾ ರೆಡಿ’ ಸಾಂಗ್‌ ಪ್ರೋಮೊ | ಲೋಕೇಶ್‌ ಕನಗರಾಜ್‌ – ವಿಜಯ್‌ ‘ಲಿಯೋ’ ಸಿನಿಮಾ

LEAVE A REPLY

Connect with

Please enter your comment!
Please enter your name here