ನಾಡಿದ್ದು ಜೂನ್‌ 22 ವಿಜಯ್‌ ಹುಟ್ಟುಹಬ್ಬದಂದು ಅವರ ‘ಲಿಯೋ’ ತಮಿಳು ಸಿನಿಮಾದ ‘ನಾ ರೆಡಿ’ ವೀಡಿಯೋ ಸಾಂಗ್‌ ಬರಲಿದೆ. ಇದಕ್ಕೆ ಪೂರ್ವಭಾವಿಯಾಗಿ ಇಂದು ಸಾಂಗ್‌ನ ಪ್ರೋಮೋ ಬಂದಿದ್ದು, ಅಭಿಮಾನಿಗಳು ಖುಷಿಯಾಗಿದ್ದಾರೆ.

ವಿಜಯ್‌ ಅವರ ಬಹುನಿರೀಕ್ಷಿತ ‘ಲಿಯೋ’ ಸಿನಿಮಾದ ‘ನಾ ರೆಡಿ’ ಸಾಂಗ್‌ನ ಪ್ರೋಮೋ ಬಂದಿದೆ. ನಿರ್ದೇಶಕ ಲೋಕೇಶ ಕನಗರಾಜ್‌ ಅವರು ಹೀರೋ ವಿಜಯ್‌ ಅವರಿಂದಲೇ ಈ ಹಾಡನ್ನು ಹಾಡಿಸಿದ್ದಾರೆ. ಸಂಗೀತ ಸಂಯೋಜಕ ಅನಿರುದ್ಧ ರವಿಚಂದ್ರನ್‌ ಮತ್ತು Rapper ಅಸಲ್‌ ಕೊಲಾರು ಅವರು ಹೀರೋ ವಿಜಯ್‌ಗೆ ಜೊತೆಯಾಗಿದ್ದಾರೆ. ವಿಷ್ಣು ಎಡವನ್‌ ರಚನೆಯ ಈ ವೀಡಿಯೋ ಸಾಂಗ್‌ ವಿಜಯ್‌ ಹುಟ್ಟುಹಬ್ಬವಾದ ಜೂನ್‌ 22ರಂದು ರಿಲೀಸ್‌ ಆಗಲಿದೆ. ‘ನಾ ರೆಡಿ’ ಸಾಂಗ್‌ ಟಿಪಿಕಲ್‌ ತಮಿಳು ಶೈಲಿಯಲ್ಲಿದ್ದು ಡ್ಯಾನ್ಸ್‌ಗೆ ಹೇಳಿಮಾಡಿಸಿದಂತಿದೆ. ಈ ಹಾಡಿನಲ್ಲಿ ವಿಜಯ್‌ ಪಾತ್ರದ ಸಂಪೂರ್ಣ ಚಿತ್ರದ ಸಿಗಲಿದೆ ಎಂದಿದ್ದಾರೆ ನಿರ್ದೇಶಕ ಕನಗರಾಜ್‌. ದುಬಾರಿ ಬಜೆಟ್‌ನ ಈ ಸಿನಿಮಾದ ನಾಯಕಿ ತ್ರಿಷಾ. ಬಾಲಿವುಡ್‌ ನಟ ಸಂಜಯ್‌ ದತ್‌, ಅರ್ಜುನ್‌, ಗೌತಮ್‌ ವಾಸುದೇವ ಮೆನನ್‌, ಪ್ರಿಯಾ ಆನಂದ್‌, ಮಿಸ್ಕಿನ್‌, ಮನ್ಸೂರ್‌ ಅಲಿ ಖಾನ್‌, ಮ್ಯಾಥ್ಯೂ ಥಾಮಸ್‌ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಅಕ್ಟೋಬರ್‌ 19ರಂದು ಸಿನಿಮಾ ತೆರೆಕಾಣಲಿದೆ.

Previous articleಮ್ಯಾನೇಜರ್‌ ಕಡೆಯಿಂದ ರಶ್ಮಿಕಾ ಮಂದಣ್ಣ ಅವರಿಗೆ 80 ಲಕ್ಷ ರೂ. ದೋಖಾ ನಿಜವೇ?
Next articleರಾಮಾಯಣ ಮನರಂಜನೆಗಲ್ಲ! | ‘ಆದಿಪುರುಷ್‌’ ಕಾಂಟ್ರೊವರ್ಸಿ ಕುರಿತು ದೀಪಿಕಾ ಚಿಕ್ಲಿಯಾ

LEAVE A REPLY

Connect with

Please enter your comment!
Please enter your name here