‘ತ್ರಿಶೂಲಂ’ ಸಿನಿಮಾಗೆ ಚಿತ್ರೀಕರಣದ ಹಂತದಲ್ಲೇ ಬೇಡಿಕೆ ಬಂದಿದೆ ಎನ್ನುವ ಖುಷಿಯಲ್ಲಿದ್ದಾರೆ ನಿರ್ಮಾಪಕ ಶ್ರೀನಿವಾಸ್‌. ಓಂಪ್ರಕಾಶ್ ರಾವ್ ನಿರ್ದೇಶನದ ಚಿತ್ರದಲ್ಲಿ ರವಿಚಂದ್ರನ್ ಮತ್ತು ಉಪೇಂದ್ರ ನಾಯಕನಟರಾಗಿ ಅಭಿನಯಿಸುತ್ತಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಯಶಸ್ವಿ ಚಿತ್ರಗಳನ್ನು ನೀಡಿರುವ ಆರ್‌.ಎಸ್‌. ಪ್ರೊಡಕ್ಷನ್ಸ್ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ‘ತ್ರಿಶೂಲಂ’ ಸಿನಿಮಾ ಶೂಟಿಂಗ್‌ ಸಮಯದಲ್ಲೇ ಭಾರಿ ಸದ್ದು ಮಾಡುತ್ತಿದೆ. ಚಿತ್ರದ ಬಗ್ಗೆ ತಿಳಿದುಕೊಂಡಿರುವ ವಿದೇಶಿಗರು ಚಿತ್ರದ ವ್ಯಾಪಾರಕ್ಕೆ ಮುಂದೆ ಬಂದಿದ್ದಾರೆ. ಮಾತುಕತೆ ಅಂತಿಮ ಹಂತದಲ್ಲಿದೆ ಎನ್ನುತ್ತಾರೆ ನಿರ್ಮಾಪಕ ಶ್ರೀನಿವಾಸ್. ಇಂಗ್ಲೆಂಡ್‌ನಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡಲು ಈಗಾಗಲೇ ಅಲ್ಲಿನ ನಿವಾಸಿಗಳಿಂದಲೇ ಬೇಡಿಕೆ ಬಂದಿದೆ ಅನ್ನೋದು ಶ್ರೀನಿವಾಸ್ ಅವರ ಮಾತು.

ಇದೇ 26ರಿಂದ ಹೈದರಾಬಾದ್‌ನಲ್ಲಿ ಗಣೇಶ್ ಮಾಸ್ಟರ್ ಅವರ ಸಾರಥ್ಯದಲ್ಲಿ ಭರ್ಜರಿ ಸಾಹಸ ಸನ್ನಿವೇಶವೊಂದರ ಚಿತ್ರೀಕರಣ ನಡೆಯಲಿದೆ. ಉಪೇಂದ್ರ, ರವಿಚಂದ್ರನ್ ಮುಂತಾದವರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ. ಜನವರಿ ವೇಳೆಗೆ ಚಿತ್ರ ತೆರೆಗೆ ಬರಲಿದೆ. ಆರ್.ಶ್ರೀನಿವಾಸ್ ಹಾಗೂ ಬಿ.ಎಸ್. ಕಿರಣ್ ಗೌಡ ನಿರ್ಮಿಸುತ್ತಿರುವ ಚಿತ್ರವನ್ನು ಓಂಪ್ರಕಾಶ್ ರಾವ್ ನಿರ್ದೇಶಿಸುತ್ತಿದ್ದಾರೆ. ಚಂದ್ರಮೌಳಿ ಸಂಭಾಷಣೆ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ರವಿ ಛಾಯಾಗ್ರಹಣ, ಲಕ್ಷ್ಮಣ ರೆಡ್ಡಿ ಸಂಕಲನ ಹಾಗೂ ಡಾ.ರವಿವರ್ಮ, ಗಣೇಶ್ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಶಾನ್ವಿ, ನಿಮಿಕ ರತ್ನಾಕರ್, ಸಾಧುಕೋಕಿಲ, ಪ್ರದೀಪ್ ರಾವತ್, ನಾಗಶೇಖರ್, ರಂಗಾಯಣ ರಘು, ಅಚ್ಯುತರಾವ್, ಸುಧಾ ಬೆಳವಾಡಿ, ಉಗ್ರಂ ಮಂಜು ಮುಂತಾದವರು ಅದ್ಧೂರಿ ತಾರಾಬಳಗ ಚಿತ್ರಕ್ಕಿದೆ‌. ಮುಂಬಯಿ ಬೆಡಗಿ ಅದಿತಿ ಆರ್ಯ ಅತಿಥಿಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here