ಶೇನ್‌ ನಿಗಮ್‌, ಆಂಟೋನಿ ವರ್ಗಿಸ್‌ ಮತ್ತು ನೀರಜ್‌ ಮಾಧವ್‌ ನಟನೆಯ ‘RDX’ ಮಲಯಾಳಂ ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದೆ. ನಹಾಸ್‌ ಹಿದಾಯತ್‌ ಚೊಚ್ಚಲ ನಿರ್ದೇಶನದ ಸಿನಿಮಾ ಆಗಸ್ಟ್‌ 25ರಂದು ತೆರೆಕಾಣಲಿದೆ.

ಶೇನ್ ನಿಗಮ್, ಆಂಟೋನಿ ವರ್ಗೀಸ್, ನೀರಜ್ ಮಾಧವ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘RDX’ ಮಲಯಾಳಂ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ನಹಾಸ್ ಹಿದಾಯತ್ ಚಿತ್ರಕಥೆ ರಚಿಸಿ ನಿರ್ದೇಶಿಸಿದ್ದಾರೆ. RDX ಅಂದರೆ ರಾಬರ್ಟ್, ಡೋನಿ ಮತ್ತು ಕ್ಸಾವಿಯರ್ ಎಂಬ ಮೂವರು ಸ್ನೇಹಿತರು. ಅವರ ಜೀವನದಲ್ಲಿ ಸಂಭವಿಸುವ ಘಟನೆಗಳ ಸುತ್ತ ಕತೆ ಸುತ್ತುತ್ತದೆ. ಸಮರ ಕಲೆಯಲ್ಲಿ(martial arts) ತರಬೇತಿ ಪಡೆದ ಬಿಸಿರಕ್ತದ ಈ ಯುವಕರು ತಮ್ಮ ವಿರುದ್ಧವಾಗಿ ನಿಲ್ಲುವವರನ್ನು ದಿಟ್ಟತನದಿಂದ ಪ್ರಶ್ನಿಸುವ ಛಾತಿ ಇರುವವರು. ಕೊಚ್ಚಿನ್ ಕಾರ್ನಿವಾಲ್‌ ಅನ್ನು ಅವರ ಜೀವನದ ಅವಿಭಾಜ್ಯ ಅಂಗವಾಗಿ ತೋರಿಸಲಾಗಿದೆ. ಟ್ರೈಲರ್ ಎರಡು ಕಾಲಮಾನಗಳ ಸುಳಿವು ನೀಡಿದ್ದು, ಮೂವರು ನಾಯಕರು ಟ್ರೈಲರ್‌ನಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ.

ಚಿತ್ರದಲ್ಲಿ ಮಹಿಮಾ ನಂಬಿಯಾರ್, ಬೈಜು ಸಂತೋಷ್, ಲಾಲ್, ಐಮಾ ಸೆಬಾಸ್ಟಿಯನ್ ಮತ್ತು ಮಾಲಾ ಪಾರ್ವತಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕರೇ ಸ್ಕ್ರಿಪ್ಟ್ ರಚಿಸಿರುವ ಈ ಚಿತ್ರವನ್ನು ‘ಮಿನ್ನಲ್ ಮುರಳಿ’ ಖ್ಯಾತಿಯ ವೀಕೆಂಡ್ ಬ್ಲಾಕ್ ಬಸ್ಟರ್ಸ್ ನಿರ್ಮಿಸಿದೆ. ‘ಕೆಜಿಎಫ್’, ‘ಕೈತಿ’ ಚಿತ್ರಗಳಲ್ಲಿ ಸ್ಟಂಟ್ ಕೊರಿಯೋಗ್ರಾಫರ್ ಆಗಿ ಕೆಲಸ ಮಾಡಿದ್ದ ಅನ್ಬರಿವ್ ಈ ಚಿತ್ರದ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದಾರೆ. ಸ್ಯಾಮ್ ಸಿ ಎಸ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಇದೇ ಆಗಸ್ಟ್ 25ರಂದು ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Previous article‘ಬಾಯ್ಸ್ ಹಾಸ್ಟೆಲ್’ನಲ್ಲಿ ತೆಲುಗು ನಟಿ | ರಮ್ಯಾ ಪಾತ್ರಕ್ಕೆ ರಶ್ಮಿ ಗೌತಮ್
Next articleಧನುಷ್‌ ಜೋಡಿಯಾಗಿ ರಶ್ಮಿಕಾ | ಚಂದ್ರಶೇಖರ್‌ ಕಮ್ಮಲ ನಿರ್ದೇಶನದ ತಮಿಳು ಸಿನಿಮಾ

LEAVE A REPLY

Connect with

Please enter your comment!
Please enter your name here