ಚಂದ್ರಶೇಖರ್‌ ಕಮ್ಮಲ ನಿರ್ದೇಶನದ ನೂತನ ತಮಿಳು ಚಿತ್ರದಲ್ಲಿ ಧನುಷ್‌ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಲಿದ್ದಾರೆ. ನಟಿ ರಶ್ಮಿಕಾ ವಿಶೇಷ ವೀಡಿಯೋ ಮೂಲಕ ಈ ವಿಷಯವನ್ನು ತಮ್ಮ social media ಹ್ಯಾಂಡಲ್‌ಗಳಲ್ಲಿ ಹಂಚಿಕೊಂಡು, ‘Beginning of a new journey’ ಎಂದು ಬರೆದಿದ್ದಾರೆ.

ಧನುಷ್‌ ಅಭಿನಯದ ನೂತನ ತಮಿಳು ಚಿತ್ರದ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಆಯ್ಕೆಯಾಗಿದ್ದಾರೆ. ವಿಶೇಷ ಪೋಸ್ಟರ್‌ ಮೂಲಕ ಚಿತ್ರತಂಡ ನಟಿಯನ್ನು ಸ್ವಾಗತಿಸಿದೆ. ನಟಿ ರಶ್ಮಿಕಾ ವೀಡಿಯೋ ಮೂಲಕ ಈ ಮಾಹಿತಿಯನ್ನು ತಮ್ಮ ಸೋಷಿಯಲ್‌ ಮೀಡಿಯಾ ಹ್ಯಾಂಡಲ್‌ಗಳಲ್ಲಿ ಹಂಚಿಕೊಂಡಿದ್ದಾರೆ. ಇದು ಧನುಷ್‌ ಅಭಿನಯದ 51ನೇ ಸಿನಿಮಾ. ರಶ್ಮಿಕಾ ಈ ಮೊದಲು ಕಾರ್ತಿ ನಟನೆಯ ‘ಸುಲ್ತಾನ್‌’, ವಿಜಯ್‌ ಅವರ ‘ವಾರಿಸು’ ತಮಿಳು ಚಿತ್ರಗಳಲ್ಲಿ ನಟಿಸಿದ್ದರು. ಈಗ ಧನುಷ್‌ ಸಿನಿಮಾದೊಂದಿಗೆ ಕಾಲಿವುಡ್‌ಗೆ ಮರಳಿದ್ದಾರೆ. ನಟಿ ತಮ್ಮ Instagram ಖಾತೆಯಲ್ಲಿ ವಿಡಿಯೋ ಮೂಲಕ ‘D51’ ಚಿತ್ರದಲ್ಲಿ ನಟಿಸುತ್ತಿರುವ ಮಾಹಿತಿಯನ್ನು ಹಂಚಿಕೊಂಡು, ‘Beginning of a new journey’ ಎಂದು ಬರೆದಿದ್ದಾರೆ. ರಶ್ಮಿಕಾ ಅಭಿಮಾನಿಗಳಿಗೆ ಈ ವಿಷಯ ಖುಷಿ ತಂದಿದ್ದು, ತಮ್ಮ ನೆಚ್ಚಿನ ನಟಿಗೆ ಅವರು ಅಭಿನಂದನೆ ಹೇಳುತ್ತಿದ್ದಾರೆ.

ಧನುಷ್‌ ಪ್ರಸ್ತುತ ‘ಕ್ಯಾಪ್ಟನ್‌ ಮಿಲ್ಲರ್‌’ ಚಿತ್ರದ ಪ್ರಚಾರದಲ್ಲಿ ನಿರತರಾಗಿದ್ದು, ಈ ಚಿತ್ರದ ಬಳಿಕ ‘D50’ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ. ಇದಾದ ಬಳಿಕ ‘D51’ ಸೆಟ್ಟೇರಲಿದೆ. ಶ್ರೀ ವೆಂಕಟೇಶ್ವರ ಸಿನಿಮಾಸ್‌ ಮತ್ತು ಒಮಿಗೊಸ್‌ ಕ್ರಿಯೇಶನ್ಸ್‌ ಸಹಯೋಗದಲ್ಲಿ ತಯಾರಾಗುತ್ತಿರುವ ಚಿತ್ರವನ್ನು ಚಂದ್ರಶೇಖರ್‌ ಕಮ್ಮಲ ನಿರ್ದೇಶಿಸಲಿದ್ದಾರೆ. ಚಿತ್ರದ ಇತರೆ ಕಲಾವಿದರು ಹಾಗೂ ತಂತ್ರಜ್ಞರ ಕುರಿತು ಸದ್ಯದಲ್ಲೇ ಮಾಹಿತಿ ಹೊರಬೀಳಲಿದೆ. ರಶ್ಮಿಕಾ ‘ಅನಿಮಲ್‌’ ಹಿಂದಿ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸಿನಿಮಾ ಇದೇ ವರ್ಷ ಡಿಸೆಂಬರ್‌ 1ರಂದು ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here