ಡೇನ್ ಜಾನ್ಸನ್‌, ರಾನ್‌ ರೇನಾಲ್ಡ್ಸ್‌, ಗಾಲ್ ಗ್ಯಾಡೆಟ್‌ ಅಭಿನಯದ ‘ರೆಡ್ ನೋಟಿಸ್‌’ ಇಂಗ್ಲೀಷ್‌ ಸಿನಿಮಾ ನವೆಂಬರ್‌ 12ರಂದು ನೆಟ್‌ಫ್ಲಿಕ್ಸ್‌’ನಲ್ಲಿ ಸ್ಟ್ರೀಮ್ ಆಗಿತ್ತು. ನೆಟ್‌ಫ್ಲಿಕ್ಸ್‌ ಇತಿಹಾಸದಲ್ಲೇ ಈ ಸಿನಿಮಾಗೆ ಬಿಗ್ಗೆಸ್ಟ್ ಓಪನಿಂಗ್‌ ಸಿಕ್ಕಿದೆ. ಚಿತ್ರದ ತಾರೆಯರು ಟ್ವಿಟರ್‌ನಲ್ಲಿ ಈ ಸಂಭ್ರಮ ಹಂಚಿಕೊಂಡಿದ್ದಾರೆ.

ಆಕ್ಷನ್‌ – ಕಾಮಿಡಿ ಸಿನಿಮಾ ‘ರೆಡ್ ನೋಟಿಸ್‌’ ಅಮೆರಿಕಾದ ಕೆಲವು ಥಿಯೇಟರ್‌ಗಳನ್ನು ಹೊರತುಪಡಿಸಿದರೆ ಜಗತ್ತಿನ ಬೇರೆಲ್ಲೂ ಥಿಯೇಟ್ರಿಕಲ್ ರಿಲೀಸ್ ಕಂಡಿಲ್ಲ. ಈ ಸಿನಿಮಾ ನೆಟ್‌ಫ್ಲಿಕ್ಸ್‌’ನಲ್ಲಿ ಮೊನ್ನೆ ನವೆಂಬರ್‌ 12ರಂದು ಸ್ಟ್ರೀಮ್ ಆಗಿತ್ತು. ಡೇನ್ ಜಾನ್ಸನ್‌, ರಾನ್‌ ರೇನಾಲ್ಡ್ಸ್‌, ಗಾಲ್ ಗ್ಯಾಡೆಟ್‌ ಅಭಿನಯದ ಸಿನಿಮಾಗೆ ನೆಟ್‌ಫ್ಲಿಕ್ಸ್‌ ಇತಿಹಾಸದಲ್ಲೇ ಬಿಗ್ಗೆಸ್ಟ್ ಓಪನಿಂಗ್ ಸಿಕ್ಕಿದೆ. ಚಿತ್ರದ ತಾರೆಯರು ಈ ಖುಷಿಯಲ್ಲಿ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ಗಳಲ್ಲಿ ಹಂಚಿಕೊಂಡು ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ. ರಾಸನ್ ಮಾರ್ಷಲ್ ಥರ್ಬರ್ ನಿರ್ದೇಶನದ ಈ ಸಿನಿಮಾ ಕುರಿತಾಗ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆಯೇನೂ ಸಿಕ್ಕಿಲ್ಲ. ‘ದುಬಾರಿ ಬಜೆಟ್‌, ಆಕರ್ಷಕ ಸ್ಟಾರ್‌ಕಾಸ್ಟ್ ಇದ್ದಾಗ್ಯೂ ಮನರಂಜನೆ ನೀಡುವಲ್ಲ ಸಿನಿಮಾ ವಿಫಲವಾಗಿದೆ” ಎನ್ನುವಂತಹ ವಿಮರ್ಶೆಗಳು ವ್ಯಕ್ತವಾಗಿವೆ. ಯೂನಿವರ್ಸಲ್‌ ಪಿಕ್ಚರ್ಸ್‌ ಚಿತ್ರದ ವಿತರಣೆ ಹಕ್ಕು ಪಡೆದುಕೊಂಡಿತ್ತು. ಆದರೆ ಥಿಯೇಟ್ರಿಕಲ್ ರಿಲೀಸ್ ಅಗಲಿಲ್ಲ. ಅಂತಿಮವಾಗಿ ನೆಟ್‌ಫ್ಲಿಕ್ಸ್‌ ಸ್ಟ್ರೀಮಿಂಗ್ ಹಕ್ಕು ಪಡೆದು ಸಿನಿಮಾ ಬಿಡುಗಡೆ ಮಾಡಿದೆ.

Previous articleಟ್ರೈಲರ್ | ಪ್ರತೀಕ್ ಬಬ್ಬರ್ ಲವ್ ಟ್ರಯಾಂಗಲ್ ‘ಕೊಬಾಲ್ಟ್ ಬ್ಲ್ಯೂ’; ಡಿಸೆಂಬರ್‌ 3ರಂದು ನೆಟ್‌ಫ್ಲಿಕ್ಸ್‌ನಲ್ಲಿ
Next articleನಿಧಾನವೇ ಪ್ರಧಾನ; ತೆರೆಯ ಮೇಲೊಂದು ದೃಶ್ಯಕಾವ್ಯ

LEAVE A REPLY

Connect with

Please enter your comment!
Please enter your name here