ಬಾಲಿವುಡ್ ನಟ ಪ್ರತೀಕ್ ಬಬ್ಬರ್ ಅಭಿನಯದ ‘ಕೊಬಾಲ್ಟ್ ಬ್ಲ್ಯೂ’ ಹಿಂದಿ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಸಚಿನ್ ಕುಂದಲ್ಕರ್‌ ಕೃತಿಯನ್ನು ಆಧರಿಸಿದ ಸಿನಿಮಾ ನೆಟ್‌ಫ್ಲಿಕ್ಸ್‌’ನಲ್ಲಿ ಡಿಸೆಂಬರ್‌ 3ರಂದು ಸ್ಟ್ರೀಮ್ ಆಗಲಿದೆ.

ಒಡಹುಟ್ಟಿದ ಅಣ್ಣ – ತಂಗಿ ಇಬ್ಬರೂ ಯುವಕನೊಬ್ಬನಲ್ಲಿ ಅನುರಕ್ತರಾಗುವ ಅಪರೂಪದ ಕಥಾಹಂದರದ ಸಿನಿಮಾ ‘ಕೊಬಾಲ್ಟ್‌ ಬ್ಲ್ಯೂ’. ಇದೇ ಶೀರ್ಷಿಕೆಯ ತಮ್ಮ ಜನಪ್ರಿಯ ಕೃತಿಯನ್ನು ಆಧರಿಸಿ ಸಚಿನ್ ಕುಂದಲ್ಕರ್ ಸಿನಿಮಾ ನಿರ್ದೇಶಿಸಿದ್ದಾರೆ. ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಡಿಸೆಂಬರ್‌ 3ರಿಂದ ಸಿನಿಮಾ ನೆಟ್‌ಫ್ಲಿಕ್ಸ್‌’ನಲ್ಲಿ ಸ್ಟ್ರೀಮ್ ಆಗಲಿದೆ. ಪ್ರತೀಕ್ ಬಬ್ಬರ್‌, ನೀಲೆ ಮೆಹಂದಲೆ, ಅಂಜಲಿ ಶಿವರಾಮನ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಎರಡು ನಿಮಿಷಗಳ ಟ್ರೈಲರ್‌ನಲ್ಲಿ ಚಿತ್ರದ ಮೂರು ಪ್ರಮುಖ ಪಾತ್ರಗಳ ಪರಿಚಯವಿದೆ. ಸಂಪ್ರದಾಯಸ್ಥ ಕುಟುಂಬದೊಳಗೆ ಆಕರ್ಷಕ ಯುವಕನೊಬ್ಬ (ಪ್ರತೀಕ್ ಬಬ್ಬರ್‌) ಪೇಯಿಂಗ್ ಗೆಸ್ಟ್‌ ಆಗಿ ಬರುತ್ತಾನೆ. ಈ ಕುಟುಂಬದಲ್ಲಿನ ಅಣ್ಣ – ತಂಗಿ ಇಬ್ಬರೂ ಆತನಲ್ಲಿ ಅನುರಕ್ತರಾಗುವ, ಈ ವಿಲಕ್ಷಣ ಆಲೋಚನೆಯಿಂದ ಆ ಕುಟುಂಬದಲ್ಲಿ ಎದುರಾಗುವ ತಳಮಳಗಳನ್ನು ನಿರ್ದೇಶಕರು ಟ್ರೈಲರ್‌ನಲ್ಲಿ ಸೂಚ್ಯವಾಗಿ ಹಿಡಿದಿಟ್ಟಿದ್ದಾರೆ. ಡಿಸೆಂಬರ್‌ 3ರಿಂದ ನೆಟ್‌ಫ್ಲಿಕ್ಸ್‌’ನಲ್ಲಿ ‘ಕೊಬಾಲ್ಟ್‌ ಬ್ಲ್ಯೂ’ ಸ್ಟ್ರೀಮ್‌ ಆಗಲಿದೆ.

LEAVE A REPLY

Connect with

Please enter your comment!
Please enter your name here