Bigg Boss ಕನ್ನಡ OTT ವರ್ಷನ್‌ ಶುರುವಾಗುತ್ತಿದೆ. ನಟ ಸುದೀಪ್‌ ಅವರು ನಿರೂಪಿಸುತ್ತಿದ್ದು, ಆಗಸ್ಟ್‌ 6ರಿಂದ Vootನಲ್ಲಿ ಶೋ ಸ್ಟ್ರೀಮ್‌ ಆಗಲಿದೆ.

ಕಳೆದ ವರ್ಷ ಹಿಂದಿಯಲ್ಲಿ Bigg Boss OTT ವರ್ಷನ್‌ ಮೂಡಿಬಂದಿತ್ತು. ಇದೀಗ ಕನ್ನಡದಲ್ಲಿ OTT ಮೊದಲ ಸೀಸನ್‌ ಶುರುವಾಗುತ್ತಿದೆ. ಈ ಹಿಂದೆ TV ವರ್ಷನ್‌ ನಿರೂಪಿಸುತ್ತಿದ್ದ ನಟ ಸುದೀಪ್‌ ಅವರೇ ಓಟಿಟಿ ಅವತರಣಿಕೆಯ ಸಾರಥ್ಯ ವಹಿಸುತ್ತಿದ್ದಾರೆ. Voot ಪ್ರೋಮೊ ರಿಲೀಸ್‌ ಮಾಡಿದ್ದು ಆಗಸ್ಟ್‌ 6ರಿಂದ ಶೋ ಸ್ಟ್ರೀಮ್‌ ಆಗಲಿದೆ. “Kiccha is here and we can’t keep calm! Join us for Season N̶I̶N̶E̶ ONE of Bigg Boss OTT (Kannada) 🤩 Grand Premiere Aug 6 | 7 Pm on @voot.” ಎನ್ನುವ ಸಂದೇಶದೊಂದಿಗೆ Voot ಪ್ರೋಮೊ ಟ್ವೀಟ್‌ ಮಾಡಿದೆ. ಆರು ವಾರಗಳ ಕಾಲ ನಡೆಯಲಿರುವ ಶೋ ವೀಕ್ಷಕರಿಗೆ 24/7 ಲಭ್ಯವಿರಲಿದೆ!

ಈ ಬಗ್ಗೆ ಮಾತನಾಡಿರುವ ಸುದೀಪ್‌, “ಮೊದಲ OTT ಸೀಸನ್‌ ಕುರಿತಾಗಿ ವೀಕ್ಷಕರಲ್ಲಿ ಸಾಕಷ್ಟು ನಿರೀಕ್ಷೆಗಳಿವೆ. ಇದೀಗ ಪ್ರೋಮೊ ಬಿಡುಗಡೆಯಾಗಿದ್ದು ಬಿಗ್‌ಬಾಸ್‌ ಪ್ರೇಮಿಗಳು ಈ ಫಾರ್ಮ್ಯಾಟ್‌ ಬಗ್ಗೆ ಉತ್ಸುಕರಾಗಿದ್ದಾರೆ. 24/7 Live ನಲ್ಲಿ ಸ್ಪರ್ಧಿಗಳ ಆಕ್ಷನ್‌, ಎಂಟರ್‌ಟೇನ್‌ಮೆಂಟ್‌, ಡ್ರಾಮಾ ವೀಕ್ಷಿಸಬಹುದು. Stay tuned!” ಎಂದಿದ್ದಾರೆ. ಸುದೀಪ್‌ ಸದ್ಯ ತಮ್ಮ ಪ್ಯಾನ್‌ ಇಂಡಿಯಾ ಸಿನಿಮಾ ‘ವಿಕ್ರಾಂತ್‌ ರೋಣ’ ಪ್ರೊಮೋಷನ್‌ನಲ್ಲಿ ನಿರತರಾಗಿದ್ದಾರೆ.

LEAVE A REPLY

Connect with

Please enter your comment!
Please enter your name here