ಪ್ರತಿಷ್ಠಿತ ಮೆಲ್ಬೋರ್ನ್‌ ಇಂಡಿಯನ್‌ ಫಿಲ್ಮ್‌ ಫೆಸ್ಟಿವಲ್‌ ಪ್ರಶಸ್ತಿಗಳಿಗಾಗಿ ನಟ ರಿಷಭ್‌ ಶೆಟ್ಟಿ, ನಟಿ ಅಕ್ಷತಾ ಪಾಂಡವಪುರ ನಾಮಿನೇಟ್‌ ಆಗಿದ್ದಾರೆ. ಅತ್ಯುತ್ತಮ ಸಿನಿಮಾ ವಿಭಾಗದಲ್ಲಿ ‘ಕಾಂತಾರ’ ಸ್ಪರ್ಧೆಯಲ್ಲಿದೆ. ಅತ್ಯುತ್ತಮ Indie ಫಿಲ್ಮ್‌ ವಿಭಾಗದಲ್ಲಿ ‘ಹದಿನೇಳೆಂಟು’ ನಾಮಿನೇಟ್‌ ಆಗಿದ್ದರೆ, ಈ ಚಿತ್ರದ ನಿರ್ದೇಶಕ ಪೃಥ್ವಿ ಕೊಣನೂರು ಅವರು ಅತ್ಯುತ್ತಮ ನಿರ್ದೇಶನ ವಿಭಾಗದಲ್ಲಿ ನಾಮಿನೇಟ್‌ ಆಗಿದ್ದಾರೆ.

ಹದಿನಾಲ್ಕನೇ ಮೆಲ್ಬೋರ್ನ್‌ ಸಿನಿಮೋತ್ಸವ ಸಿನಿಮಾ ಮತ್ತು ವೆಬ್‌ ಸರಣಿಗಳ ಪ್ರಶಸ್ತಿಗಾಗಿ ನಾಮಿನೇಷನ್ಸ್‌ ಘೋಷಿಸಿದೆ. ಅತ್ಯುತ್ತಮ ಸಿನಿಮಾ ವಿಭಾಗದಲ್ಲಿ ‘ಕಾಂತಾರ’ ನಾಮನಿರ್ದೇಶನಗೊಂಡಿದೆ. ಈ ಸಿನಿಮಾದ ಅತ್ಯುತ್ತಮ ನಟನೆಗೆ ರಿಷಭ್‌ ಶೆಟ್ಟಿ ನಾಮಿನೇಟ್‌ ಆಗಿದ್ದರೆ, ‘ಕೋಳಿ ಎಸ್ರು’ ಚಿತ್ರದ ನಾಯಕನಟಿ ಅಕ್ಷತಾ ಪಾಂಡವಪುರ ಅವರು ಅತ್ಯುತ್ತಮ ನಟಿ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದಾರೆ. ಅತ್ಯುತ್ತಮ Indie ಫಿಲ್ಮ್‌ ವಿಭಾಗದಲ್ಲಿ ‘ಹದಿನೇಳೆಂಟು’ ನಾಮಿನೇಟ್‌ ಆಗಿದ್ದರೆ, ಈ ಚಿತ್ರದ ನಿರ್ದೇಶಕ ಪೃಥ್ವಿ ಕೊಣನೂರು ಅವರು ಅತ್ಯುತ್ತಮ ನಿರ್ದೇಶನ ವಿಭಾಗದಲ್ಲಿ ನಾಮಿನೇಟ್‌ ಆಗಿದ್ದಾರೆ.

‘ನೀನಾ ಗುಪ್ತಾ, ಕಾಜೋಲ್‌, ರಾಣಿ ಮುಖರ್ಜಿ, ಐಶ್ವರ್ಯಾ ರೈ ಅವರ ಸಿನಿಮಾ, ಪಾತ್ರಗಳನ್ನು ನೋಡಿಕೊಂಡು ಬೆಳೆದವಳು ನಾನು. ಕಾಜೋಲ್‌ ಮತ್ತು ರಾಣಿ ಮುಖರ್ಜಿ ಅವರ ಅಭಿಮಾನಿ. ಈಗ ಚಿತ್ರೋತ್ಸವದಲ್ಲಿ ಅವರೊಂದಿಗೆ ಪ್ರಶಸ್ತಿಗೆ ನಾಮಿನೇಟ್‌ ಆಗಿರುವುದು ಸೋಜಿಗದ ಜೊತೆ ಅಪಾರ ಸಂತಸ ತಂದಿದೆ’ ಎನ್ನುತ್ತಾರೆ ನಟಿ ಅಕ್ಷತಾ ಪಾಂಡವಪುರ. ಚಂಪಾ ಶೆಟ್ಟಿ ನಿರ್ದೇಶನದ ‘ಕೋಳಿ ಎಸ್ರು’ ಚಿತ್ರದ ಉತ್ತಮ ನಟನೆಗೆ ಅವರು ನಾಮಿನೇಟ್‌ ಆಗಿದ್ದಾರೆ. ಇದೇ ಸಿನಿಮಾದ ಉತ್ತಮ ನಟನೆಗಾಗಿ ಇತ್ತೀಚೆಗೆ ಅವರು ottawa ಸಿನಿಮೋತ್ಸವ ಮತ್ತು ಔರಂಗಾಬಾದ್‌ ಇಂಡಿಯನ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಪ್ರಶಸ್ತಿ ಪಡೆದಿದ್ದಾರೆ. ಮೆಲ್ಬೋರ್ನ್‌ ಚಿತ್ರೋತ್ಸವದಲ್ಲಿ ಕನ್ನಡ ಚಿತ್ರಗಳು ನಾಮಿನೇಟ್‌ ಆಗಿರುವ ಸಂದರ್ಭಗಳು ಕಡಿಮೆ. ಅದರಲ್ಲೂ ಅತ್ಯುತ್ತಮ ನಟ, ನಟಿ ವಿಭಾಗದಲ್ಲಿ ಆಯ್ಕೆಯಾಗುವುದು ಹೆಮ್ಮೆಯ ಸಂಗತಿ. ಈ ಸಂದರ್ಭದಲ್ಲಿ ಅಕ್ಷತಾ ತಮ್ಮ ಚಿತ್ರದ ನಿರ್ದೇಶಕಿ ಚಂಪಾ ಶೆಟ್ಟಿ ಅವರನ್ನು ಸ್ಮರಿಸುತ್ತಾರೆ. ‘ಕಾಂತಾರ’ಕ್ಕೆ ಸಿಕ್ಕ ಗೌರವದ ಬಗ್ಗೆ ಹೊಂಬಾಳೆ films ಟ್ವಿಟರ್‌ ಖಾತೆಯಲ್ಲಿ ಪೋಸ್ಟ್‌ ಹಾಕಿದೆ.

Melbourne Hamer Hallನಲ್ಲಿ ಆಗಸ್ಟ್‌ ತಿಂಗಳಲ್ಲಿ ಚಿತ್ರೋತ್ಸವದ ಪ್ರಶಸ್ತಿ ಸಮಾರಂಭ ನಡೆಯಲಿದೆ. Oscar ಪುರಸ್ಕೃತ ಆಸ್ಟ್ರೇಲಿಯಾ ಚಿತ್ರನಿರ್ದೇಶಕ Bruce Beresford ಸೇರಿದಂತೆ ಖ್ಯಾತನಾಮರು ಚಿತ್ರೋತ್ಸವದ Jury ವಿಭಾಗದಲ್ಲಿದ್ದಾರೆ. ಅತ್ಯುತ್ತಮ ಸಿನಿಮಾ ವಿಭಾಗದಲ್ಲಿ ಪಠಾಣ್‌, ಪೊನ್ನಿಯಿನ್‌ ಸೆಲ್ವನ್‌, ಮೊನಿಕಾ ಓ ಮೈ ಡಾರ್ಲಿಂಗ್‌, ಸೀತಾ ರಾಮಂ, ಡಾರ್ಲಿಂಗ್ಸ್‌ ಮುಂತಾದ ಚಿತ್ರಗಳಿವೆ. ವೆಬ್‌ ಸರಣಿ ವಿಭಾಗದಲ್ಲಿ ದಹಾದ್‌, ದೆಲ್ಹಿ ಕ್ರೈಂ ಸೀಸನ್‌ 2, ಜುಬಿಲೀ ಹಾಗೂ ಇನ್ನಿತರೆ ಸರಣಿಗಳಿವೆ. ಅತ್ಯುತ್ತಮ ನಟ, ನಟಿ ವಿಭಾಗದಲ್ಲಿ ಮನೋಜ್‌ ಭಾಜಪೈ, ಕಪಿಲ್‌ ಶರ್ಮಾ, ರಾಜಕುಮಾರ್‌ ರಾವ್‌, ವಿಕ್ರಂ, ಐಶ್ವರ್ಯಾ ರೈ, ಅಲಿಯಾ ಭಟ್‌, ರಾಣಿ ಮುಖರ್ಜಿ, ನೀನಾ ಗುಪ್ತಾ ಮುಂತಾದವರು ನಾಮಿನೇಟ್‌ ಆಗಿದ್ದಾರೆ. ನಿರ್ದೇಶಕರ ಪಟ್ಟಿಯಲ್ಲಿ ಮಣಿರತ್ನಂ, ಅನುರಾಗ್‌ ಕಶ್ಯಪ್‌, ಸಿದ್ದಾರ್ಥ್‌ ಆನಂದ್‌ ಇದ್ದಾರೆ.

Previous article‘ಶಿವಮ್ಮ’ ಚಿತ್ರಕ್ಕೆ ಅಂತಾರಾಷ್ಟ್ರೀಯ ಮನ್ನಣೆ | ಟ್ವೀಟ್‌ ಮಾಡಿದ ನಿರ್ಮಾಪಕ ರಿಷಭ್‌ ಶೆಟ್ಟಿ
Next article‘BAD’ ಮಾನ್ವಿತಾ ಫಸ್ಟ್‌ಲುಕ್‌ | ಪಿ ಸಿ ಶೇಖರ್‌ ಸಿನಿಮಾದ ಬೋಲ್ಡ್‌ ಪಾತ್ರದಲ್ಲಿ ನಟಿ

LEAVE A REPLY

Connect with

Please enter your comment!
Please enter your name here