ಭಾಸ್ಕರ್‌ ನೀನಾಸಂ ನಿರ್ದೇಶನದ ‘ಸದ್ದು ವಿಚಾರಣೆ ನಡೆಯುತ್ತಿದೆ’ ಸಿನಿಮಾದ ಫಸ್ಟ್‌ಲುಕ್‌ ಅನ್ನು ನಟ ಧನಂಜಯ ರಿಲೀಸ್‌ ಮಾಡಿದ್ದಾರೆ. ರಾಕೇಶ್‌ ಮಯ್ಯ ಮತ್ತು ಪಾವನಾ ಗೌಡ ಪ್ರಮುಖ ಪಾತ್ರಗಳಲ್ಲಿರುವ ಸಸ್ಪೆನ್ಸ್‌ – ಥ್ರಿಲ್ಲರ್‌ ಕತೆಯಿದು.

ಸದ್ದು ವಿಚಾರಣೆ ನಡೆಯುತ್ತಿದೆ! ಹೀಗೊಂದು ಆಕರ್ಷಕ ಶೀರ್ಷಿಕೆಯೊಂದಿಗೆ ಸಸ್ಪೆನ್ಸ್ ಥ್ರಿಲ್ಲರ್ ಕಥೆ ಹೇಳೋದಿಕ್ಕೆ ಉತ್ಸಾಹಿ ಕಲಾವಿದರ ತಂಡ ಸಜ್ಜಾಗಿದೆ. ಕೊರೊನಾ ಹಾವಳಿ ಇಲ್ಲದೇ ಹೋಗಿದ್ದರೆ ಇಷ್ಟರಲ್ಲಾಗಲೇ ಸದ್ದು ವಿಚಾರಣೆ ನಡೆಯುತ್ತಿದೆ ಸಿನಿಮಾ ತೆರೆಗೆ ಬರಬೇಕಿತ್ತು. ಸದ್ಯ ಸಿನಿಮಾದ ಶೂಟಿಂಗ್‌ ಪೂರ್ಣಗೊಂಡಿದೆ. ನಟ ಧನಂಜಯ್ ಅವರಿಂದ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿಸಲಾಗಿದೆ. ‘ಮಗಳು ಜಾನಕಿ’ ಸೀರಿಯಲ್ ಮೂಲಕ ಕನ್ನಡಿಗರಿಗೆ ಪರಿಚಯವಾದ ರಾಕೇಶ್‌ ಮಯ್ಯ ಈ ಸಿನಿಮಾದಲ್ಲಿ ಹೀರೋ. ಅವರಿಗೆ ಜೋಡಿಯಾಗಿ ‘ಗೊಂಬೆಗಳ ಲವ್‌’ ಸಿನಿಮಾ ಖ್ಯಾತಿಯ ಪಾವನಾ ಗೌಡ ನಟಿಸಿದ್ದಾರೆ. ಉಳಿದಂತೆ ಅಚ್ಯುತ ಕುಮಾರ್ , ಕೃಷ್ಣ ಹೆಬ್ಬಾಳೆ, ಮಧು ನಂದನ್ , ಜಹಾಂಗೀರ್, ರಾಘು ಶಿವಮೊಗ್ಗ ,ರೋಹಿಣಿ ರಘುನಂದನ್ ಮುಂತಾದವರು ನಟಿಸಿದ್ದಾರೆ.

‘ಶ್ರೀಮಾನ್ ಶ್ರೀಮತಿ’ ಸೀರಿಯಲ್ ಹಾಗೂ ‘ಲೌಡ್ ಸ್ಪೀಕರ್’, ‘ಕೃಷ್ಣ ಗಾರ್ಮೆಂಟ್ಸ್‌’, ‘ಫೋರ್ ವಾಲ್ಸ್’ ಸಿನಿಮಾಗಳಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಭಾಸ್ಕರ್ ಆರ್. ನೀನಾಸಂ ‘ಸದ್ದು ವಿಚಾರಣೆ ನಡೆಯುತ್ತಿದೆ’ ಮೂಲಕ ನಿರ್ದೇಶಕರಾಗಿದ್ದಾರೆ. ಇದು ಅವರು ನಿರ್ದೇಶನದ ಚೊಚ್ಚಲ ಸಿನಿಮಾ. ಅಶ್ವಿನಿ ಕೆ.ಎನ್. ಕತೆ, ದಕ್ಷಿಣ ಮೂರ್ತಿ ಸಂಭಾಷಣೆ , ರಾಜ್ ಕಾಂತ ಛಾಯಾಗ್ರಹಣ, ಸಚಿನ್‌ ಬಸ್ರೂರ್ ಸಂಗೀತ, ಶಶಿಧರ್‌ ಪಿ. ಸಂಕಲನ, ಗಂಗಮ್ ರಾಜ್ ಕೊರಿಯೋಗ್ರಾಫಿ, ಅರ್ಜುನ್ ರಾಜ್ ಸಾಹಸ, ಅಶ್ವಿನಿ ಕೆ.ಎನ್. ಮತ್ತು ಪ್ರಮೋದ್ ಮರವಂತೆ ಸಾಹಿತ್ಯ ಚಿತ್ರಕ್ಕಿದೆ. ಸುರಭಿ ಲಕ್ಷ್ಮಣ್ ನಿರ್ಮಾಪಕರು.

LEAVE A REPLY

Connect with

Please enter your comment!
Please enter your name here