ಧನಂಜಯ ನಿರ್ಮಾಣ, ಉಮೇಶ್‌ ಕೆ ಕೃಪ ನಿರ್ದೇಶನದ ‘ಟಗರು ಪಲ್ಯ’ ಸಿನಿಮಾ ಇದೇ ಅಕ್ಟೋಬರ್‌ 27ರಂದು ತೆರೆಕಾಣಲಿದೆ. ನಟ ದರ್ಶನ್‌ ಅವರು ಅಕ್ಟೋಬರ್‌ 18ರಂದು ಚಿತ್ರದ ಟ್ರೈಲರ್‌ ಬಿಡುಗಡೆ ಮಾಡಲಿದ್ದಾರೆ. ನಟ ಪ್ರೇಮ್‌ ಪುತ್ರಿ ಅಮೃತಾ ಮತ್ತು ನಾಗಭೂಷಣ್‌ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

ನಟ ಧನಂಜಯ ನಿರ್ಮಾಣದ ‘ಟಗರು ಪಲ್ಯ’ ಸಿನಿಮಾದ ಬಿಡುಗಡೆ ದಿನಾಂಕ ನಿಗದಿಯಾಗಿದೆ. ಉಮೇಶ್‌ ಕೆ ಕೃಪ ನಿರ್ದೇಶನದ ಈ ಸಿನಿಮಾ ಇದೇ ತಿಂಗಳ 27ಕ್ಕೆ ಥಿಯೇಟರ್‌ಗೆ ಬರಲಿದೆ. ನಟ ‘ನೆನಪಿರಲಿ’ ಪ್ರೇಮ್ ಪುತ್ರಿ ಅಮೃತಾ ಮತ್ತು ನಾಗಭೂಷಣ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಚಿತ್ರವಿದು. ಅಕ್ಟೋಬರ್‌ 18ರಂದು ನಟ ದರ್ಶನ್‌ ಈ ಸಿನಿಮಾದ ಟ್ರೈಲರ್‌ ರಿಲೀಸ್‌ ಮಾಡಲಿದ್ದಾರೆ. ಇದಕ್ಕೆಂದೇ ಚಿತ್ರತಂಡ ಪುಟ್ಟ ಪ್ರೊಮೋವೊಂದನ್ನು ರೂಪಿಸಿದೆ. ರಂಗಾಯಣ ರಘು, ತಾರಾ, ಶರತ್ ಲೋಹಿತಾಶ್ವ ಸೇರಿದಂತೆ ಚಿತ್ರದಲ್ಲಿ ದೊಡ್ಡ ತಾರಾಬಳಗವಿದೆ. ಮಂಡ್ಯ ಗ್ರಾಮೀಣ ಪ್ರದೇಶದಲ್ಲಿನ ವಿಶಿಷ್ಟ ಆಚರಣೆ, ಪದ್ಧತಿ, ಸಂಪ್ರದಾಯಗಳ ಸುತ್ತ ಕತೆ ಸುತ್ತುತ್ತದೆ. ಈಗಾಗಲೇ ಚಿತ್ರದ ಎರಡು ಹಾಡುಗಳು ಬಿಡುಗಡೆಯಾಗಿದ್ದು, ಸಿನಿಪ್ರಿಯರಿಗೆ ಇಷ್ಟವಾಗಿವೆ. ವಾಸುಕಿ ವೈಭವ್ ಸಂಗೀತ ನಿರ್ದೇಶನ, ಎಸ್ ಕೆ ರಾವ್ ಛಾಯಾಗ್ರಹಣ ಚಿತ್ರಕ್ಕಿದೆ. ಈಗಾಗಲೇ ಸಿನಿಮಾ ಪ್ರಚಾರ ಆರಂಭ ಆಗಿದ್ದು, ಹಳ್ಳಿ ಸೊಗಡಿನ ಚಿತ್ರ ತೆರೆಗೆ ಬರಲು ಸಜ್ಜಾಗಿದೆ.

LEAVE A REPLY

Connect with

Please enter your comment!
Please enter your name here