ಕಳೆದ ವಾರ ತೆರೆಕಂಡ ನಾನಿ ಮತ್ತು ಸಾಯಿ ಪಲ್ಲವಿ ಅಭಿನಯದ ‘ಶ್ಯಾಮ್‌ ಸಿಂಗಾ ರಾಯ್‌’ ತೆಲುಗು ಸಿನಿಮಾ ಆಂಧ್ರದಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ನಟಿ ಸಾಯಿ ಪಲ್ಲವಿ ನಿನ್ನೆ ಹೈದರಾಬಾದ್‌ನ ಥಿಯೇಟರ್‌ವೊಂದರಲ್ಲಿ ಬುರ್ಕಾ ತೊಟ್ಟು ಪ್ರೇಕ್ಷಕರೊಂದಿಗೆ ಸಿನಿಮಾ ವೀಕ್ಷಿಸಿದ್ದು, ಈ ವೀಡಿಯೋ ವೈರಲ್‌ ಆಗಿದೆ.

ಪ್ರಸ್ತುತ ದಕ್ಷಿಣ ಭಾರತದ ಖ್ಯಾತ ನಾಯಕನಟಿಯರ ಪಟ್ಟಿಯಲ್ಲಿ ಸಾಯಿ ಪಲ್ಲವಿ ಹೆಸರು ಮುಂಚೂಣಿಯಲ್ಲಿದೆ. ತೆರೆ ಮೇಲೆ ಮಿಂಚುವ ಅವರು ಸೋಷಿಯಲ್‌ ಮೀಡಿಯಾದಲ್ಲೂ ಆಕ್ವೀಟ್‌ ಆಗಿರುತ್ತಾರೆ. ಆಗಿಂದಾಗ್ಗೆ ತಮ್ಮ ಪ್ರವಾಸ, ಡ್ಯಾನ್ಸ್‌ ವೀಡಿಯೋಗಳನ್ನು ಅವರು ಹಾಕುತ್ತಿರುತ್ತಾರೆ. ತಮ್ಮ ಅಭಿಮಾನಿಗಳೊಂದಿಗೆ ಹೀಗೆ ಬೇರೆ ಬೇರೆ ರೀತಿಯಲ್ಲಿ ಕನೆಕ್ಟ್‌ ಆಗುವುದು ಅವರ ನೆಚ್ಚಿನ ಹವ್ಯಾಸ. ನಿನ್ನೆ ಅವರು ಬುರ್ಕಾ ತೊಟ್ಟು ಹೈದರಾಬಾದ್‌ ಮೂಸಾಪೇಟ್‌ನ ಶ್ರೀರಾಮುಲ ಥಿಯೇಟರ್‌ಗೆ ತೆರಳಿ ಪ್ರೇಕ್ಷಕರೊಂದಿಗೆ ಕುಳಿತು ತಮ್ಮ ಸಿನಿಮಾ ವೀಕ್ಷಿಸಿದ್ದಾರೆ. ಚಿತ್ರತಂಡದ ವ್ಯಕ್ತಿಯೊಬ್ಬರೊಂದಿಗೆ ಅವರು ಥಿಯೇಟರ್‌ಗೆ ತೆರಳಿ ಪಾಪ್‌ಕಾರ್ನ್‌ ತಿನ್ನುತ್ತಾ ಪ್ರೇಕ್ಷಕರ ಪ್ರತಿಕ್ರಿಯೆಯನ್ನು ಎಂಜಾಯ್‌ ಮಾಡಿದ್ದಾರೆ. ಸಿನಿಮಾ ಮುಗಿದ ನಂತರ ಕಾರು ಹತ್ತು ಮುನ್ನವೇ ಅವರು ಬುರ್ಕಾ ತೆಗೆದದ್ದು. “ಇದೊಂದು ವಿಶಿಷ್ಟ ಅನುಭವ. ಸಾಮಾನ್ಯ ಪ್ರೇಕ್ಷಕರಲ್ಲೊಬ್ಬರಾಗಿ ಸಿನಿಮಾ ನೋಡಿದೆ. ಪ್ರೇಕ್ಷಕರ ಸಹಜ ಪ್ರತಿಕ್ರಿಯೆಯನ್ನು ಗ್ರಹಿಸಲು ಸಾಧ್ಯವಾಯ್ತು. ತೆಲುಗು ಚಿತ್ರರಂಗದಲ್ಲಿ ನನಗೆ ಈ ಸಿನಿಮಾ ಒಂದು ಮೈಲುಗಲ್ಲು. ವಿಶಿಷ್ಟ ಪಾತ್ರದಲ್ಲಿ ನಟಿಸಿದ ಖುಷಿಯಿದೆ” ಎಂದಿದ್ದಾರೆ ಸಾಯಿ ಪಲ್ಲವಿ. ಅವರ ಬುರ್ಕಾ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

https://youtu.be/mMvSbN8h21U

LEAVE A REPLY

Connect with

Please enter your comment!
Please enter your name here