ತೆಲಂಗಾಣ ಭಾಗದ ಹೋರಾಟಗಾರರಾದ ಕೊಂಡ ಮುರಳಿ ಮತ್ತು ಕೊಂಡ ಸುರೇಖ ಅವರ ಬದುಕನ್ನು ಆಧರಿಸಿ ಆರ್‌ಜಿವಿ ನಿರ್ದೇಶಿಸಿರುವ ‘ಕೊಂಡ’ ತೆಲುಗು ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ತಿರುಗನ್‌ ಮತ್ತು ಇರಾ ಮೋರ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ನಿರ್ದೇಶಕ ರಾಮ್‌ ಗೊಪಾಲ್‌ ವರ್ಮಾ ‘ಕೊಂಡ’ ತೆಲುಗು ಸಿನಿಮಾದ ಟ್ರೈಲರ್‌ನೊಂದಿಗೆ ಬಂದಿದ್ದಾರೆ. ಇದು ಅವರ ನೆಚ್ಚಿನ ಬಯೋಪಿಕ್‌ ಜಾನರ್‌. “ಕಠಿಣ ಸಂದರ್ಭಗಳು ವ್ಯಕ್ತಿಗಳನ್ನು ಕಠಿಣ ವ್ಯಕ್ತಿತ್ವದವರನ್ನಾಗಿ ರೂಪಿಸುತ್ತವೆ” ಎನ್ನುವ ಕಾರ್ಲ್‌ ಮಾರ್ಕ್ಸ್‌ ಚಿಂತನೆಯ ಮಾತುಗಳೊಂದಿಗೆ ತಮ್ಮದೇ ಧ್ವನಿಯಲ್ಲಿ ಟ್ರೈಲರ್‌ ನಿರೂಪಿಸುತ್ತಾರೆ ವರ್ಮಾ. ಕಾಲೇಜು ದಿನಗಳಲ್ಲೇ ಹೋರಾಟ ನಡೆಸುತ್ತಾ ಬಂದ ಕೊಂಡ ಮುರಳಿ ಮತ್ತು ಕೊಂಡ ಸುರೇಖ ಮುಂದೆ ಸತಿ – ಪತಿಯಾಗಿ ಶೋಷಣೆಯ ವಿರುದ್ಧ ಧ್ವನಿ ಎತ್ತುತ್ತಾರೆ. ಈ ಹೋರಾಟ ಅವರನ್ನು ರಾಜಕೀಯರಂಗಕ್ಕೆ ಕರೆದೊಯ್ಯುತ್ತದೆ. ಅವರ ಈ ಹೋರಾಟದ ಹಾದಿಯೇ ಚಿತ್ರದ ಕಥಾವಸ್ತು. ಟ್ರೈಲರ್‌ನಲ್ಲಿ ರೊಮ್ಯಾಂಟಿಕ್‌ ಹಾಗೂ ಭಾವನಾತ್ಮಕ ಸನ್ನಿವೇಶಗಳು ಕಾಣಿಸುತ್ತವೆ. ತಿರುಗನ್‌ (ಈ ಹಿಂದೆ ಅದಿತ್‌ ಅರುಣ್‌ ಎಂದು ಕರೆಸಿಕೊಂಡಿದ್ದ ನಟ) ಮತ್ತು ಇರಾ ಮೋರ್‌ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಡಿಎಸ್‌ಆರ್‌ ಸಂಗೀತ, ಜೋಷಿ ಛಾಯಾಗ್ರಹಣ, ಮನೀಷ್‌ ಠಾಕೂರ್‌ ಸಂಕಲನ, ಭರತ್‌ ಕುಮಾರ್‌ ಸಂಭಾಷಣೆ ಚಿತ್ರಕ್ಕಿದೆ. ‘ಕೊಂಡ’ ಬಿಡುಗಡೆ ದಿನಾಂಕವನ್ನು ಸದ್ಯದಲ್ಲೇ ಘೋಷಿಸುವುದಾಗಿ ಹೇಳಿದ್ದಾರೆ ಚಿತ್ರದ ನಿರ್ದೇಶಕ ಆರ್‌ಜಿವಿ.

Previous articleವೀಡಿಯೊ | ‘ಶಕ್ತಿಧಾಮ’ ಮಕ್ಕಳೊಂದಿಗೆ ಶಿವರಾಜಕುಮಾರ್‌ ಗಣರಾಜ್ಯೋತ್ಸವ ಆಚರಣೆ
Next articleಟೀಸರ್‌ | ಪ್ರಜ್ವಲ್‌ ದೇವರಾಜ್‌ ‘ಮಾಫಿಯಾ’; ಮೂರು ಭಾಷೆಗಳಲ್ಲಿ ತೆರೆಕಾಣಲಿದೆ ಸಿನಿಮಾ

LEAVE A REPLY

Connect with

Please enter your comment!
Please enter your name here