ಚಂದನ್‌ ಶೆಟ್ಟಿ ಗೀತೆ ರಚಿಸಿ, ಸಂಗೀತ ಸಂಯೋಜಿಸಿ ಹಾಡಿರುವ ‘ಲಕ ಲಕ ಲಂಬರ್ಗಿನಿ’ ಮ್ಯೂಸಿಕ್‌ ವೀಡಿಯೋ ಬಿಡುಗಡೆಯಾಗಿದೆ. ನಂದಕಿಶೋರ್‌ ನಿರ್ದೇಶಿಸಿದ್ದು, ನಟಿ ರಚಿತಾ ರಾಮ್‌ ಅವರಿಗೆ ಇದು ಮೊದಲ ಮ್ಯೂಸಿಕ್‌ ವೀಡಿಯೋ.

ಗಾಯಕ, ಸಂಗೀತ ಸಂಯೋಜಕ ಚಂದನ್‌ ಶೆಟ್ಟಿ ಅವರ ನೂತನ ಮ್ಯೂಸಿಕ್‌ ಆಲ್ಬಂ ‘ಲಕ ಲಕ ಲಂಬರ್ಗಿನಿ’ ಇಂದು ಬಿಡುಗಡೆಯಾಗಿದೆ. ಈ ಬಾರಿ ಅವರಿಗೆ ನಟಿ ರಚಿತಾ ರಾಮ್‌ ಜೊತೆಯಾಗಿದ್ದಾರೆ. “ನನ್ನ ವೃತ್ತಿ ಬದುಕಿನಲ್ಲೇ ಇದು ದುಬಾರಿ ವೀಡಿಯೋ ಸಾಂಗ್‌. ಈ ಹಿಂದಿನ ನನ್ನ ಸಾಂಗ್‌ಗಳೆಲ್ಲವನ್ನೂ ಲೊಕೇಶನ್‌ಗಳಲ್ಲಿ ಚಿತ್ರಿಸಲಾಗಿತ್ತು. ಈ ಗ್ಲಾಮರಸ್‌ ಹಾಡನ್ನು ಮೂರು ಅದ್ಧೂರಿ ಸೆಟ್‌ ಹಾಕಿ ಚಿತ್ರಿಸಿದ್ದೇವೆ. ಮುರಳಿ ಮಾಸ್ಟರ್‌ ಕೊರಿಯಾಗ್ರಫಿ ಮಾಡಿದ್ದು, ತುಂಬಾ ಡೀಟೇಲಿಂಗ್‌ ಆಗಿ ಶೂಟ್‌ ಮಾಡಿದ್ದೇವೆ” ಎನ್ನುತ್ತಾರೆ ಚಂದನ್‌. ನಟಿ ರಚಿತಾ ರಾಮ್‌ ಅವರಿಗೆ ಇದು ಮೊದಲ ಮ್ಯೂಸಿಕ್‌ ಆಲ್ಬಂ. ‘ಪೊಗರು’ ಖ್ಯಾತಿ ನಿರ್ದೇಶಕ ಈ ಸಾಂಗ್‌ ನಿರ್ದೇಶಿಸಿದ್ದು, ಶೇಖರ್‌ ಚಂದ್ರ ಛಾಯಾಗ್ರಹಣ ಮಾಡಿದ್ದಾರೆ. ಆರ್‌.ಕೇಶವ್‌ ನಿರ್ಮಾಣ, ಕೆ.ಎಂ.ಪ್ರಕಾಶ್‌ ಸಂಕಲನ, ಮೋಹನ್‌ ಬಿ ಕೆರೆ ಕಲಾ ನಿರ್ದೇಶನದ ಸಾಂಗ್‌ ಅದ್ಧೂರಿಯಾಗಿದೆ. ಸೋಷಿಯಲ್‌ ಮೀಡಿಯಾದಲ್ಲಿ ಹಾಡಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವರು ಮೆಚ್ಚಿದ್ದರೆ, ಮತ್ತೆ ಕೆಲವರು “ಹಳೆಯ ಚಂದನ್‌ ಶೆಟ್ಟಿ ಕಳೆದುಹೋಗಿದ್ಧಾರೆ. ನಿರಾಸೆಯಾಗಿದೆ” ಎಂದಿದ್ದಾರೆ.

LEAVE A REPLY

Connect with

Please enter your comment!
Please enter your name here