ಜಯಂ ಮೋಹನ್‌ ರಾಜಾ ನಿರ್ದೇಶನದಲ್ಲಿ ಚಿರಂಜೀವಿ ನಟಿಸುತ್ತಿರುವ ‘ಗಾಡ್‌ಫಾದರ್‌’ ತೆಲುಗು ಚಿತ್ರದೊಂದಿಗೆ ನಟ ಸಲ್ಮಾನ್‌ ಖಾನ್‌ ಟಾಲಿವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಇದು ‘ಲೂಸಿಫರ್‌’ ಮಲಯಾಳಂ ಸಿನಿಮಾದ ರೀಮೇಕ್‌. ಅಲ್ಲಿ ಪೃಥ್ವಿರಾಜ್‌ ನಟಿಸಿದ್ದ ಪಾತ್ರದಲ್ಲಿ ಸಲ್ಲೂ ನಟಿಸುತ್ತಿದ್ದಾರೆ.

ಚಿರಂಜೀವಿ ಅವರ ‘ಗಾಡ್‌ಫಾದರ್‌’ ಚಿತ್ರತಂಡಕ್ಕೆ ಸೇರ್ಪಡೆಗೊಂಡಿದ್ದಾರೆ ಬಾಲಿವುಡ್‌ ಹೀರೋ ಸಲ್ಮಾನ್‌ ಖಾನ್‌. ಇದು ಮಲಯಾಳಂ ಸೂಪರ್‌ಹಿಟ್‌ ‘ಲೂಸಿಫರ್‌’ ರೀಮೇಕ್‌. ಮೂಲ ಮಲಯಾಳಂನಲ್ಲಿ ಪೃಥ್ವಿರಾಜ್‌ ಸುಕುಮಾರನ್‌ ನಟಿಸಿದ್ದ ಪಾತ್ರದಲ್ಲಿ ಸಲ್ಮಾನ್‌ ಕಾಣಿಸಿಕೊಳ್ಳುತ್ತಿದ್ದಾರೆ. ಬಾಲಿವುಡ್‌ನ ಜನಪ್ರಿಯ ನಟನನ್ನು ತಮ್ಮ ಚಿತ್ರತಂಡಕ್ಕೆ ಬರಮಾಡಿಕೊಂಡಿರುವ ಚಿರಂಜೀವಿ, “Welcome aboard #Godfather, Bhai @BeingSalmanKhan! Your entry has energized everyone & the excitement has gone to next level. Sharing screen with you is an absolute joy. Your presence will no doubt give that magical #KICK to the audience.” ಎನ್ನುವ ಸಂದೇಶದೊಂದಿಗೆ ಸಲ್ಲೂ ಜೊತೆಗಿನ ಫೋಟೊ ಟ್ವೀಟ್‌ ಮಾಡಿದ್ದಾರೆ.

ಮುಂಬಯಿ ಸ್ಟುಡಿಯೋವೊಂದರಲ್ಲಿ ಹಾಕಿರುವ ಬೃಹತ್‌ ಸೆಟ್‌ನಲ್ಲಿ ಚಿತ್ರೀಕರಣ ನಡೆದಿದ್ದು, ಸಲ್ಮಾನ್‌ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆ. ಜಯಂ ಮೋಹನ್‌ ರಾಜಾ ನಿರ್ದೇಶನದ ಈ ಸಿನಿಮಾದ ನಾಯಕಿಯಾಗಿ ನಯನತಾರಾ ಇದ್ದಾರೆ. ಸತ್ಯ ದೇವ್‌ ಅವರಿಗೆ ಪ್ರಮುಖ ಪಾತ್ರವಿದೆ. ರಾಮ್‌ ಚರಣ್‌, ಆರ್‌.ಬಿ.ಚೌಧರಿ, ಎನ್‌.ವಿ.ಪ್ರಸಾದ್‌ ಅವರು ಕೊನಿಡೇಲಾ ಪ್ರೊಡಕ್ಷನ್ ಕಂಪನಿ ಮತ್ತು ಸೂಪರ್‌ ಗುಡ್‌ ಫಿಲ್ಮ್ಸ್‌ ಬ್ಯಾನರ್‌ಗಳಡಿ ಸಿನಿಮಾ ನಿರ್ಮಿಸುತ್ತಿದ್ದಾರೆ. ಇನ್ನು ಚಿರಂಜೀವಿ ಅವರ ‘ಆಚಾರ್ಯ’ ಸದ್ಯದಲ್ಲೇ ತೆರೆಕಾಣಲಿದೆ. ಕೆ.ಎಸ್‌.ರವೀಂದ್ರ ನಿರ್ದೇಶನದ ‘ಭೋಳಾ ಶಂಕರ್‌’ ಮತ್ತು ವೆಂಕಿ ಕುದುಮುಲ ನಿರ್ದೇಶನದ ಚಿತ್ರಗಳಲ್ಲಿ ಚಿರಂಜೀವಿ ತೊಡಗಿಸಿಕೊಂಡಿದ್ದಾರೆ.

Previous article‘ತಾಜ್‌ ಮಹಲ್‌ 2’ ಆಡಿಯೋ ರಿಲೀಸ್‌ ಮಾಡಿದ ಶ್ರೀಮುರಳಿ; ಜೂನ್‌ನಲ್ಲಿ ಸಿನಿಮಾ ತೆರೆಗೆ
Next article‘ಅಭಯ್‌’ ಸೀಸನ್‌ 3 ಟ್ರೈಲರ್‌ | ZEE5ನಲ್ಲಿ ಕುನಾಲ್‌ ಖೇಮು ವೆಬ್‌ ಸರಣಿ

LEAVE A REPLY

Connect with

Please enter your comment!
Please enter your name here