ಹಿಂದಿ ಚಿತ್ರನಿರ್ದೇಶಕ ಸಂಜಯ್‌ ಗಧ್ವಿ ಹೃದಯಾಘಾತದಿಂದ ಅಗಲಿದ್ದಾರೆ. ‘ತೇರೆ ಲಿಯೇ’ ಹಿಂದಿ ಚಿತ್ರದೊಂದಿಗೆ ಸ್ವತಂತ್ರ್ಯ ನಿರ್ದೇಶಕರಾಗಿ ಪರಿಚಯವಾದ ಸಂಜಯ್‌ ಅವರಿಗೆ ‘ಧೂಮ್‌’ ಸರಣಿ ಚಿತ್ರಗಳು ಹೆಸರು ತಂದುಕೊಟ್ಟಿದ್ದವು.

ಬಾಲಿವುಡ್‌ನ ‘ಧೂಮ್‌’ ಸರಣಿ ಚಿತ್ರಗಳ ನಿರ್ದೇಶಕ ಸಂಜಯ್ ಗಧ್ವಿ (56) ಭಾನುವಾರ (ನವೆಂಬರ್‌ 19) ಹೃದಯಾಘಾತದಿಂದ ನಿಧನರಾಗಿದ್ದಾರೆ. Yash Raj Films ನಿರ್ಮಾಣದಲ್ಲಿ ಬಾಲಿವುಡ್‌ನ ಜನಪ್ರಿಯ ಚಿತ್ರಗಳಾದ ‘ಧೂಮ್‌’ (2004) ಮತ್ತು ‘ಧೂಮ್ -2’ (2006) ಸಿನಿಮಾಗಳನ್ನು ಗಧ್ವಿ ನಿರ್ದೇಶಿಸಿದ್ದರು. ಈ ಯಶಸ್ವೀ ಚಿತ್ರಗಳಲ್ಲಿ ಅಭಿಷೇಕ್‌ ಬಚ್ಚನ್, ಪ್ರಿಯಾಂಕ ಚೋಪ್ರಾ, ಹೃತಿಕ್ ರೋಷನ್, ಐಶ್ವರ್ಯ ರೈ ಬಚ್ಚನ್ ಮತ್ತು ಬಿಪಾಶಾ ಬಸು ನಟಿಸಿದ್ದಾರೆ. 2000ರ ದಶಕದ ಆರಂಭದಲ್ಲಿ ಭಾರತೀಯ ಯುವಕರಲ್ಲಿ ಮೋಟಾರ್ ಬೈಕಿಂಗ್ ಬಗ್ಗೆ ಈ ಸಿನಿಮಾ ಟ್ರೆಂಡ್‌ ಸೃಷ್ಟಿಸಿತ್ತು. ಗಾಧ್ವಿ 2000ರಲ್ಲಿ ‘ತೇರೆ ಲಿಯೇ’ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದರು. ನಂತರ 2002ರಲ್ಲಿ Yash Raj Films ಬ್ಯಾನರ್‌ ಅಡಿಯಲ್ಲಿ ‘ಮೇರೆ ಯಾರ್ ಕಿ ಶಾದಿ ಹೈ’ ಸಿನಿಮಾ ನಿರ್ದೇಶಿಸಿದ್ದರು. ‘ಕಿಡ್ನ್ಯಾಪ್’ (2008), ‘ಅಜಬ್ ಗಜಬ್ ಲವ್ʼ (2012), ‘ಆಪರೇಷನ್ ಪರಿಂದೆ’ (2020) ಅವರ ನಿರ್ದೇಶನದ ಇತರೆ ಕೆಲವು ಪ್ರಮುಖ ಸಿನಿಮಾಗಳು. ಸಂಜಯ್ ಗಧ್ವಿ ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

LEAVE A REPLY

Connect with

Please enter your comment!
Please enter your name here