ನಟ ಅಮೀರ್‌ ಖಾನ್‌ ‘ದಂಗಲ್‌’ ಹಿಂದಿ ಸಿನಿಮಾ ನಟಿ ಫಾತಿಮಾ ಸನಾ ಶೇಖ್‌ರನ್ನು ವರಿಸಿದ್ದಾರೆ ಎನ್ನುವ ಸುದ್ದಿ ಕಳೆದೆರೆಡು ದಿನಗಳಿಂದ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅಮೀರ್‌ ಮತ್ತು ಫಾತಿಮಾ ಜೊತೆಗಿರುವ ಫೋಟೊದೊಂದಿಗೆ ಹರಡಿರುವ ಈ ಸುದ್ದಿಯ ಸತ್ಯಾಸತ್ಯತೆ ಇಲ್ಲಿದೆ.

ಬಾಲಿವುಡ್‌ ನಟ ಅಮೀರ್‌ ಖಾನ್‌ ಮತ್ತು ಕಿರಣ್‌ ರಾವ್‌ ಮೊನ್ನೆ ಜುಲೈ ತಿಂಗಳಲ್ಲಿ ದಾಂಪತ್ಯಕ್ಕೆ ವಿದಾಯ ಹೇಳಿ ಬೇರ್ಪಟ್ಟರು. ಕಿರಣ್‌ ಅವರು ಅಮೀರ್‌ಗೆ ಎರಡನೇ ಪತ್ನಿಯಾಗಿದ್ದವರು. ಪರಸ್ಪರ ಒಪ್ಪಿಗೆಯ ಮೇರೆಗೆ ತಾವು ಬೇರೆಯಾಗುತ್ತಿರುವುದಾಗಿ ಇಬ್ಬರೂ ಹೇಳಿಕೊಂಡಿದ್ದು ಸರಿಯಷ್ಟೆ. ಈ ವಿಚ್ಛೇದನೆಯ ಜೊತೆಗೇ ಅಮೀರ್‌ ಮೂರನೇ ಮದುವೆ ಕುರಿತಂತೆ ಆಗ ವದಂತಿಗಳು ಹರಡಿದ್ದವು. ತಮ್ಮ ಯಶಸ್ವೀ ಸಿನಿಮಾ ‘ದಂಗಲ್‌’ ನಟಿ ಫಾತಿಮಾ ಸನಾ ಶೇಖ್‌ ಅವರನ್ನು ಅಮೀರ್‌ ವರಿಸುತ್ತಾರೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಅದಕ್ಕೆ ಸರಿಯಾಗಿ ಕಳೆದೆರೆಡು ದಿನಗಳಿಂದ ಅಮೀರ್‌ ಮತ್ತು ಫಾತಿಮಾ ಜೊತೆಗಿರುವ ಫೋಟೊವೊಂದು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಕೆಲವರು ಈ ಫೋಟೊ ಜೊತೆಗೆ ಅಮೀರ್‌ ಮತ್ತು ಫಾತಿಮಾ ವಿವಾಹದ ಸುದ್ದಿಯನ್ನು ಹರಿಬಿಟ್ಟರು. ‘ದಂಗಲ್‌ ಚಿತ್ರದಲ್ಲಿ ಪುತ್ರಿಯ ಪಾತ್ರ ಮಾಡಿದ್ದ ಫಾತಿಮಾ ಸನಾ ಶೇಖ್‌ ಜೊತೆ ಅಮೀರ್‌ ಗೌಪ್ಯವಾಗಿ ಮೂರನೇ ಮದುವೆಯಾಗಿದ್ದಾರೆ’ ಎನ್ನುವ ಕಾಮೆಂಟ್‌ಗಳೂ ಬಂದವು. ಈ ಫೋಟೊ ಮೂಲ ಹುಡುಕಿದಾಗ, ವದಂತಿಗಳು ಹುರುಳಿಲ್ಲದ್ದು ಎನ್ನುವ ಅಂಶ ತಿಳಿದುಬಂದಿದೆ. ಒರಿಜಿನಲ್‌ ಫೋಟೊದಲ್ಲಿ ಅಮೀರ್‌ ಜೊತೆಗಿರುವುದು ಅವರ ಎರಡನೇ ಪತ್ನಿ ಕಿರಣ್‌ ರಾವ್‌. ಹಿಂದೊಮ್ಮೆ ಈ ದಂಪತಿ ಆಕಾಶ್‌ ಅಂಬಾನಿ ಮತ್ತು ಶ್ಲೋಕಾ ಮೆಹ್ತಾ ಅವರ ಆರತಕ್ಷತೆಗೆ ಹೋದಾಗ ಸೆರೆಯಾದ ಫೋಟೊ ಇದು. ಕಿಡಿಗೇಡಿಗಳು ಫೋಟೊದಲ್ಲಿ ಕಿರಣ್‌ ರಾವ್‌ ಅವರ ಮುಖಕ್ಕೆ ಫಾತಿಮಾ ಮುಖವನ್ನು ಮಾರ್ಫ್‌ ಮಾಡಿದ್ದಾರೆ. ಈ ಮಾರ್ಫ್‌ ಮಾಡಿರುವ ಫೋಟೊ ಜಾಲತಾಣದಲ್ಲಿ ಹರಿದಾಡಿದೆ. ಈ ವದಂತಿಗಳ ಕುರಿತಂತೆ ಅಮೀರ್‌ ಖಾನ್‌, ಫಾತಿಮಾ ಅವರಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

ಅಮೀರ್‌ ಖಾನ್‌ ಮತ್ತು ಕಿರಣ್‌ ರಾವ್‌ (ಒರಿಜಿನಲ್‌ ಫೊಟೊ)
Previous articleಟೀಸರ್‌ | ಮಹೇಶ್‌ ಭಟ್‌ ‘ರಂಜಿ‌ಷ್‌ ಹಿ ಸಹೀ’; Voot Select ವೆಬ್‌ ಸರಣಿ
Next articleರಂಗೋಲಿ ಕೆಳಗೆ ನೋಟು ಎಣಿಸುವವರು

LEAVE A REPLY

Connect with

Please enter your comment!
Please enter your name here