ಮೆಲ್ಬೋರ್ನ್‌ ಭಾರತೀಯ ಚಲನಚಿತ್ರೋತ್ಸವ (IFFM) ಪ್ರಶಸ್ತಿಗಳು ಘೋಷಣೆಯಾಗಿವೆ. ‘ಹದಿನೇಳೆಂಟು’ ಚಿತ್ರದ ನಿರ್ದೇಶನಕ್ಕಾಗಿ ಕನ್ನಡಿಗ ಪೃಥ್ವಿ ಕೊಣನೂರು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದಿದ್ದಾರೆ. ‘ಸೀತಾ ರಾಮಂ’ (ತೆಲುಗು ಸಿನಿಮಾ), ‘ಜ್ಯುಬಿಲಿ’ (ವೆಬ್‌ ಸರಣಿ), ‘ಆಗ್ರಾ’ (independent feature film) ಪ್ರಶಸ್ತಿ ಪಟ್ಟಿಯಲ್ಲಿವೆ.

‘ಪಿಂಕಿ ಎಲ್ಲಿ?’ ಸಿನಿಮಾ ಖ್ಯಾತಿಯ ಕನ್ನಡ ಚಿತ್ರನಿರ್ದೇಶಕ ಪೃಥ್ವಿ ಕೊಣನೂರು ಮೆಲ್ಬೋರ್ನ್‌ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದಿದ್ದಾರೆ. ಅವರ ‘ಹದಿನೇಳೆಂಟು’ ಸಿನಿಮಾಗೆ ಈ ಗೌರವ ಸಂದಿದೆ. ಈ ಸಿನಿಮಾ ಸಮಾಜದ ಅಜಾಗರೂಕತೆ, ಉಪೇಕ್ಷೆಯ ದೆಸೆಯಿಂದ ಇಬ್ಬರು ಹದಿಹರೆಯದವರ ಬದುಕನ್ನು ಅಸಹನೀಯಗೊಳಿಸುವ ಕುರಿತಾದದ್ದು. ಇದಲ್ಲದೆ ಈ ಸಿನಿಮಾದಲ್ಲಿ ಪಿತೃಪ್ರಧಾನ ವ್ಯವಸ್ಥೆ, ಜಾತಿ ಪದ್ಧತಿ, ಆರ್ಥಿಕ ಅಸಮಾನತೆ, ಸಮಾಜದಲ್ಲಿನ ಸಂಕೀರ್ಣತೆಯನ್ನೂ ಹೇಳಲು ಪ್ರಯತ್ನಿಸಿದ್ದೇನೆ’ ಎಂದು ತಮ್ಮ ‘ಹದಿನೇಳೆಂಟು’ ಸಿನಿಮಾ ಬಗ್ಗೆ ಮಾತನಾಡುತ್ತಾರೆ ನಿರ್ದೇಶಕ ಪೃಥ್ವಿ ಕೊಣನೂರು.

ರಾಣಿ ಮುಖರ್ಜಿ (ಮಿಸೆಸ್‌ ಚಟರ್ಜೀ Vs ನಾರ್ವೆ) ಮತ್ತು ಮೋಹಿತ್‌ ಅಗರ್‌ವಾಲ್‌ (ಆಗ್ರಾ) ಫೀಚರ್‌ ಸಿನಿಮಾ ವಿಭಾಗದಲ್ಲಿ ಅತ್ಯುತ್ತಮ ನಟ – ನಟಿ ಪ್ರಶಸ್ತಿ ಪಡೆದಿದ್ದಾರೆ. ‘ಸೀತಾ ರಾಮಂ’ (ತೆಲುಗು ಸಿನಿಮಾ), ‘ಜ್ಯುಬಿಲಿ’ (ವೆಬ್‌ ಸರಣಿ), ‘ಆಗ್ರಾ’ (independent feature film) ಪ್ರಶಸ್ತಿ ಪಟ್ಟಿಯಲ್ಲಿವೆ. ಚಲನಚಿತ್ರ ಕ್ಷೇತ್ರದಲ್ಲಿ 25 ವರ್ಷ ಪೂರೈಸಿದ ಹಿಂದಿ ಚಿತ್ರನಿರ್ದೇಶಕ, ನಿರ್ಮಾಪಕ ಕರಣ್‌ ಜೋಹರ್‌ ಅವರನ್ನು ಚಿತ್ರೋತ್ಸವದಲ್ಲಿ ಗೌರವಿಸಲಾಯ್ತು.

ಅತ್ಯುತ್ತಮ ನಟ (Best Performance Male) – ಮೋಹಿತ್‌ ಅಗರ್ವಾಲ್‌
ಅತ್ಯುತ್ತಮ ನಟಿ (Best Performance Female) – ರಾಣಿ ಮುಖರ್ಜಿ
ಅತ್ಯುತ್ತಮ ನಟ (Best Performance Male-Series) – ವಿಜಯ್‌ ವರ್ಮಾ (ದಹಾದ್‌)
ಅತ್ಯುತ್ತಮ ನಟಿ (Best Performance Female-Series) – ರಾಜಶ್ರೀ ದೇಶಪಾಂಡೆ (ಟ್ರಯಲ್ ಬೈ ಫೈರ್‌)
ಅತ್ಯುತ್ತಮ ಸರಣಿ – ಜುಬಿಲಿ
ಅತ್ಯುತ್ತಮ Indie ಚಿತ್ರ – ಆಗ್ರಾ
ಪೀಪಲ್ಸ್ ಚಾಯ್ಸ್ ಅವಾರ್ಡ್ – ಪಠಾಣ್,
Diversity in Cinema ಪ್ರಶಸ್ತಿ – ಮೃಣಾಲ್‌ ಠಾಕೂರ್‌
Disruptor ಪ್ರಶಸ್ತಿ – ಭೂಮಿ ಪೆಡ್ನೇಕರ್
Rainbow Stories ಪ್ರಶಸ್ತಿ – ಪೈನ್‌ ಕೋನ್‌
ಅತ್ಯುತ್ತಮ ಡಾಕ್ಯುಮೆಂಟರಿ – ಟು ಕಿಲ್‌ ಎ ಟೈಗರ್‌
Rising Global Superstar of Indian Cinema ಪ್ರಶಸ್ತಿ – ಕಾರ್ತಿಕ್ ಆರ್ಯನ್ (ಶೆಹಜಾದಾ)
ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ – ಪೃಥ್ವಿ ಕೊಣನೂರು (ಹದಿನೇಳೆಂಟು)
ಅತ್ಯುತ್ತಮ ಸಿನಿಮಾ (Best Film) – ಸೀತಾ ರಾಮಂ

Previous article‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರದಲ್ಲಿ ಗಿರಿಜಾ ಶೆಟ್ಟರ್‌ | ಪರಂವಃ ಸ್ಟುಡಿಯೋಸ್‌ ಸಿನಿಮಾ
Next article‘ಗಾಂಡೀವಧಾರಿ ಅರ್ಜುನ’ ಟ್ರೈಲರ್‌ | ವರುಣ್‌ ತೇಜ್‌ ತೆಲುಗು ಸಿನಿಮಾ ಆಗಸ್ಟ್‌ 25ಕ್ಕೆ

LEAVE A REPLY

Connect with

Please enter your comment!
Please enter your name here