‘ಕಾಂತಾರ’ ಸಿನಿಮಾದ ಅತ್ಯುತ್ತಮ ನಟನೆಗೆ ರಿಷಭ್ ಶೆಟ್ಟಿ ಅವರಿಗೆ ರಾಷ್ಟ್ರಪ್ರಶಸ್ತಿ ಸಂದಿದೆ. ವಾಸುದೇವರಾವ್, ಚಾರುಹಾಸನ್, ಸಂಚಾರಿ ವಿಜಯ್ ಅವರ ನಂತರ ನಾಲ್ಕನೇ ಬಾರಿ ರಿಷಭ್ ಶೆಟ್ಟಿ ಕನ್ನಡಕ್ಕೆ ‘ಅತ್ಯುತ್ತಮ ನಟ’ ರಾಷ್ಟ್ರಪ್ರಶಸ್ತಿ ತಂದಿದ್ದಾರೆ. ‘ಅತ್ಯುತ್ತಮ ನಟ’ ಪ್ರಶಸ್ತಿ ಸೇರಿದಂತೆ ಕನ್ನಡಕ್ಕೆ ಒಟ್ಟು ಏಳು ರಾಷ್ಟ್ರಪ್ರಶಸ್ತಿಗಳು ಸಂದಿವೆ.
ರಿಷಭ್ ಶೆಟ್ಟಿ ಕನ್ನಡಕ್ಕೆ ಮತ್ತೊಮ್ಮೆ ‘ಅತ್ಯುತ್ತಮ ನಟ’ ರಾಷ್ಟ್ರಪ್ರಶಸ್ತಿ ತಂದಿದ್ದಾರೆ. 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಇಂದು ಘೋಷಣೆಯಾಗಿದ್ದು ಕನ್ನಡಕ್ಕೆ ಒಟ್ಟು ಏಳು ರಾಷ್ಟ್ರಪ್ರಶಸ್ತಿಗಳು ಸಂದಿವೆ. ಅತ್ಯುತ್ತಮ ಮನರಂಜನಾ ಸಿನಿಮಾ (ಕಾಂತಾರ), ಅತ್ಯುತ್ತಮ ಕನ್ನಡ ಸಿನಿಮಾ (ಕೆಜಿಎಫ್ 2), ಅತ್ಯುತ್ತಮ ನಟ (ರಿಷಭ್ ಶೆಟ್ಟಿ | ಕಾಂತಾರ), ನಿರ್ದೇಶಕನ ಮೊದಲ ಅತ್ಯುತ್ತಮ ಸಾಕ್ಷ್ಯಚಿತ್ರ (ದಿನೇಶ್ ಶೆಣೈ | ಮಧ್ಯಂತರ), ಅತ್ಯುತ್ತಮ ಸಾಹಸ ಸಂಯೋಜನೆ (ಅನ್ಬರಿವ್ | ಕೆಜಿಎಫ್ 2), ಅತ್ಯುತ್ತಮ ಕಲಾ – ಸಂಸ್ಕೃತಿ ಸಿನಿಮಾ (ರಂಗವೈಭೋಗ), ಅತ್ಯುತ್ತಮ ಸಂಕಲನ (ಸುರೇಶ್ ಅರಸ್ | ಮಧ್ಯಂತರ) ವಿಭಾಗಗಳಲ್ಲಿ ಕನ್ನಡಕ್ಕೆ ರಾಷ್ಟ್ರಪ್ರಶಸ್ತಿಗಳು ಸಂದಿವೆ.
‘ಆಟ್ಟಂ’ ಮಲಯಾಳಂ ಸಿನಿಮಾಗೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಲಭಿಸಿದೆ. ನಿತ್ಯಾ ಮೆನನ್ ಮತ್ತು ಮಾನಸಿ ಪರೇಖ್ ಅತ್ಯುತ್ತಮ ನಟಿ ಪ್ರಶಸ್ತಿ ಹಂಚಿಕೊಂಡಿದ್ದಾರೆ. ಪ್ರಶಸ್ತಿ ಪಟ್ಟಿ ಇಂತಿದೆ…
ಅತ್ಯುತ್ತಮ ಸಿನಿಮಾ – ಆಟ್ಟಂ
ಅತ್ಯುತ್ತಮ ನಟ – ರಿಷಭ್ ಶೆಟ್ಟಿ (ಕಾಂತಾರ)
ಅತ್ಯುತ್ತಮ ನಟಿ – ನಿತ್ಯಾ ಮೆನನ್ (ತಿರುಚಿತ್ರಬಾಳಂ) ಮತ್ತು ಮಾನಸಿ ಪರೇಖ್ (ಕಚ್ ಎಕ್ಸ್‌ಪ್ರೆಸ್)
ಅತ್ಯುತ್ತಮ ನಿರ್ದೇಶನ – ಸೂರಜ್ ಬಾರ್ಜಾತ್ಯ (ಊಂಚಾಯಿ)
ಅತ್ಯುತ್ತಮ ಪೋಷಕ ನಟಿ – ನೀನಾ ಗುಪ್ತಾ (ಊಚಾಯಿ)
ಅತ್ಯುತ್ತಮ ಪೋಷಕ ನಟ – ಪವನ್ ಮಲ್ಹೋತ್ರಾ (ಫೌಜಿ)
ಅತ್ಯುತ್ತಮ ಕನ್ನಡ ಸಿನಿಮಾ – ಕೆಜಿಎಫ್ 2
ಅತ್ಯುತ್ತಮ ತೆಲುಗು ಸಿನಿಮಾ – ಕಾರ್ತಿಕೇಯ 2
ಅತ್ಯುತ್ತಮ ತಮಿಳು ಸಿನಿಮಾ – ಪೊನ್ನಿಯೆನ್ ಸೆಲ್ವನ್ – ಪಾರ್ಟ್ 1
ಅತ್ಯುತ್ತಮ ಮಲಯಾಳಂ ಸಿನಿಮಾ – ಸೌದಿ ವೆಲಕ್ಕಾ
ಅತ್ಯುತ್ತಮ ಹಿಂದಿ ಸಿನಿಮಾ – ಗುಲ್‌ಮೊಹರ್