ನಿನ್ನೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಟ ಪುನೀತ್‌ ರಾಜಕುಮಾರ್‌ 3D ಪ್ರತಿಮೆ ಅನಾವರಣಗೊಳಿಸಿದರು. ಪುನೀತ್‌ರ ವಿನಯ, ಮಾನವೀಯ ಮೌಲ್ಯಗಳು ಅನುಕರಣೀಯ ಎಂದು ಅಗಲಿದ ನಟನನ್ನು ಅವರು ನೆನಪು ಮಾಡಿಕೊಂಡರು.

ಬೆಂಗಳೂರಿನ ರಾಡಿಸನ್ ಬ್ಲೂ ಹೋಟೆಲ್​ನಲ್ಲಿ ನಿನ್ನೆ (ಅ. 16) ಆಯೋಜನೆಗೊಂಡಿದ್ದ ಪುನೀತ್ ರಾಜ​ಕುಮಾರ್ 3D ಪ್ರತಿಮೆ ಅನಾವರಣ ಮತ್ತು ಪುನೀತ್ ಸಂಗ್ರಹ ಶಿಲ್ಪಗಳ ಅನಾವರಣ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭಾಗಿಯಾಗಿದ್ದರು. 3D ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ ಅವರು, ”ರಾಜ್ ಕುಟುಂಬದವರು ವಿನಯವಂತರು, ಮಾನವೀಯ ಮೌಲ್ಯಗಳಿಗೆ ಹೆಚ್ಚು ಬೆಲೆ ಕೊಡುವಂಥವರು. ಪುನೀತ್ ನಿಧನ ಹೊಂದಿದಾಗ ಅವರ ಜನಪ್ರಿಯತೆ ನೋಡಿ ಅಚ್ಚರಿ ಪಟ್ಟಿದ್ದೆ. ಪ್ರತೀ ಊರುಗಳಲ್ಲಿ ಜನರು ಕಟೌಟ್‌​ಗಳನ್ನು ಹಾಕಿದ್ದನ್ನು ನೋಡಿದಾಗ ಹೆಮ್ಮೆ ಅನ್ನಿಸಿತು. ಪುನೀತ್ ಬದುಕಿದ್ದರೆ ಬಹುಶಃ ಇನ್ನೂ ಎತ್ತರಕ್ಕೆ ಬೆಳೆಯುತ್ತಿದ್ದರು. ಪುನೀತ್ ಎಲ್ಲರ ಮನೆ ಮಗ. ಈ ಪ್ರತಿಮೆಯನ್ನು ಅತ್ಯಂತ ಸಂತೋಷದಿಂದ ಅನಾವರಣ ಮಾಡಿದ್ದೇನೆ. ಮಾರ್ಚ್ 17, ಪುನೀತ್ ಹುಟ್ಟುಹಬ್ಬದ ದಿನವನ್ನು ‘ಸ್ಫೂರ್ತಿ ದಿನ’ ಎಂದು ಆಚರಣೆ ಮಾಡುತ್ತೇವೆ” ಎಂದರು.

ಸಚಿವ ಭೈರತಿ ಬಸವರಾಜು ಮಾತನಾಡಿ, ”ಅಪ್ಪು ಅವರ ಅಗಲಿಕೆಯನ್ನು ಇಂದಿಗೂ ಅರಗಿಸಿಕೊಳ್ಳಲಾಗುತ್ತಿಲ್ಲ. ನಾನು ಹಾಗೂ ಅಪ್ಪು ಒಂದೇ ವಯಸ್ಸಿನವರೇ ಆದರೂ ನನ್ನನ್ನು ಅವರು ಅಣ್ಣ ಎಂದೇ ಕರೆಯುತ್ತಿದ್ದರು. ಅಷ್ಟು ವಿನಯವಂತರಾಗಿದ್ದರು. ಪುನೀತ್ ಅವರ ಕೆಲಸಗಳನ್ನು ಅವರ ಪತ್ನಿ ಅಶ್ವಿನಿ ಪುನೀತ್ ರಾಜ​ಕುಮಾರ್ ಮುಂದುವರೆಸಿಕೊಂಡು ಹೋಗುತ್ತಿರುವುದು ಸಂತೋಷದ ವಿಚಾರ” ಎಂದರು. ಕಾರ್ಯಕ್ರಮದಲ್ಲಿ ಅಶ್ವಿನಿ ಪುನೀತ್ ರಾಜ್​ಕುಮಾರ್​​, ರಾಘವೇಂದ್ರ ರಾಜ​ಕುಮಾರ್​​​​​​​, ಮಂಗಳಾ ರಾಘವೇಂದ್ರ, ಯುವ ರಾಜ​​ಕುಮಾರ್ ಸೇರಿದಂತೆ ಅನೇಕ ಗಣ್ಯರು​​ ಭಾಗವಹಿಸಿದ್ದರು.

LEAVE A REPLY

Connect with

Please enter your comment!
Please enter your name here