ಶಾರುಖ್‌ ಖಾನ್‌ ಹುಟ್ಟುಹಬ್ಬದ ನಿಮಿತ್ತ ಅವರು ಹೀರೋ ಆಗಿ ನಟಿಸಿರುವ ‘ಡಂಕಿ’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ರಾಜಕುಮಾರ್‌ ಹಿರಾನಿ ನಿರ್ದೇಶನದ ಚಿತ್ರವಿದು. ಟೀಸರ್‌ನಲ್ಲಿ ಆಕರ್ಷಕ ತಾರಾಬಳಗ ಕಾಣಿಸುತ್ತಿದ್ದು ಚಿತ್ರದ ಬಗ್ಗೆ ನಿರೀಕ್ಷೆ ಹುಟ್ಟುಹಾಕಿದೆ.

ಬಾಲಿವುಡ್‌ ತಾರೆ ಶಾರುಖ್ ಖಾನ್ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. 58ನೇ ವಸಂತಕ್ಕೆ ಕಾಲಿಟ್ಟಿರುವ ಶಾರುಖ್‌ರಿಗೆ ಶುಭಾಶಯಗಳ ಮಹಾಪೂರ ಹರಿದುಬರುತ್ತಿದೆ. ಹುಟ್ಟುಹಬ್ಬದ ಸಂದರ್ಭಕ್ಕೆ ಅವರು ಹೀರೋ ಆಗಿ ನಟಿಸಿರುವ ಬಹುನಿರೀಕ್ಷಿತ ‘ಡಂಕಿ’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ರಾಜಕುಮಾರ್‌ ಹಿರಾನಿ ನಿರ್ದೇಶನದ ಚಿತ್ರವಿದು ಎನ್ನುವುದು ವಿಶೇಷ. ‘ಮುನ್ನಾ ಬಾಯ್ ಎಂಬಿಬಿಎಸ್’, ‘3 ಈಡಿಯಟ್ಸ್’, ‘ಪಿಕೆ’, ‘ಸಂಜು’ನಂತಹ ಸೂಪರ್ ಹಿಟ್ ಚಿತ್ರಗಳ ನಿರ್ದೇಶಕ ಹಿರಾನಿ ‘ಡಂಕಿ’ಯಲ್ಲೂ ವಿಶೇಷವಾದ ಕತೆ ಹೆಣೆದಿರುವಂತಿದೆ. ಈ ಬಾರಿ ಅವರು ಐವರು ಸ್ನೇಹಿತರ ಕತೆ ಹೇಳುತ್ತಿದ್ದಾರೆ. ಸಂದೇಶದ ಜೊತೆಗೆ ಮನರಂಜನಾತ್ಮಕ ಅಂಶಗಳನ್ನು ಬೆರೆಸಿ ಹೆಣೆದಿರುವ ಟೀಸರ್‌ ಚಿತ್ರದ ಬಗ್ಗೆ ಭರವಸೆ ಮೂಡಿಸುತ್ತದೆ.

ನಟ ಶಾರುಖ್‌ ತಮ್ಮ Instagram ಖಾತೆಯಲ್ಲಿ ಟೀಸರ್‌ ಹಂಚಿಕೊಂಡಿದ್ದು, ‘A story of simple and real people trying to fulfill their dreams and desires. Of friendship, love, and being together… Of being in a relationship called Home! A heartwarming story by a heartwarming storyteller. It’s an honour to be a part of this journey and I hope you all come along with us.’ ಎಂದು ಬರೆದಿದ್ದಾರೆ. ಬೊಮನ್ ಇರಾನಿ, ತಾಪ್ಸೀ ಪನ್ನು, ವಿಕ್ಕಿ ಕೌಶಲ್, ಅನಿಲ್ ಗ್ರೋವರ್, ವಿಕ್ರಮ್ ಕೊಚ್ಚರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಪ್ರೀತಿ ಮತ್ತು ಸ್ನೇಹದ ಕಥೆಯಾಗಿರುವ ಡಂಕಿ ಸಿನಿಮಾವನ್ನು JIO ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ನಡಿ ರಾಜ್‌ಕುಮಾರ್ ಹಿರಾನಿ ಮತ್ತು ಗೌರಿ ಖಾನ್ ನಿರ್ಮಿಸಿದ್ದಾರೆ. ಅಭಿಜಿತ್‌ ಜೋಷಿ, ರಾಜ್‌ಕುಮಾರ್ ಹಿರಾನಿ ಮತ್ತು ಕನಿಕಾ ಧಿಲ್ಲೋನ್ ಕಥೆ ಬರೆದಿದ್ದಾರೆ. ‘ಡಂಕಿ’ ಸಿನಿಮಾ ಇದೇ ಕ್ರಿಸ್ಮಸ್‌ಗೆ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here