ಬಿಗ್‌ ಬಾಸ್‌ OTT ಖ್ಯಾತಿಯ ಎಲ್ವಿಶ್‌ ಯಾದವ್‌ ಅವರ ‘ಹಮ್‌ ತೋ ದೀವಾನೆ’ ಮ್ಯೂಸಿಕ್‌ ವೀಡಿಯೋದ ಟೀಸರ್‌ ಬಿಡುಗಡೆಯಾಗಿದೆ. ರಾಣಾ ಸೋಟಲ್‌ ರಚನೆ, ರಜತ್‌ ನಾಗ್ಪಾಲ್‌ ಸಂಗೀತ ಸಂಯೋಜನೆಯ ಹಾಡುಗಳಿಗೆ ಯಾಸರ್ ದೇಸಾಯಿ ದನಿಯಾಗಿದ್ದಾರೆ. ನಾಳೆ (ಸೆಪ್ಟೆಂಬರ್‌ 14) ಮ್ಯೂಸಿಕ್‌ ವೀಡಿಯೋ ಬಿಡುಗಡೆಯಾಗಲಿದೆ.

ಎಲ್ವಿಶ್ ಯಾದವ್ ಮತ್ತು ಊರ್ವಶಿ ರೌಟೇಲಾ ಅಭಿನಯದ ‘ಹಮ್ ತೋ ದೀವಾನೆ’ ಮ್ಯೂಸಿಕ್ ವೀಡಿಯೋದ ಟೀಸರ್‌ ಬಿಡುಗಡೆಯಾಗಿದೆ. ರಾಣಾ ಸೋಟಲ್‌ ರಚನೆ, ರಜತ್‌ ನಾಗ್ಪಾಲ್‌ ಸಂಗೀತ ಸಂಯೋಜನೆಯ ಹಾಡುಗಳಿಗೆ ಯಾಸರ್ ದೇಸಾಯಿ ದನಿಯಾಗಿದ್ದಾರೆ. ಎಲ್ವಿಶ್ ಯಾದವ್ ಅವರನ್ನು ಪ್ರಸ್ತುತ Systumm ಎಂದು ಕರೆಯಲಾಗುತ್ತದೆ. ಟೀಸರ್‌ನ ಆರಂಭದಲ್ಲಿ ನಟ ಆ ಕುರಿತು ಸಂಭಾಷಣೆ ನಡೆಸಿದ್ದಾರೆ. ಟೀಸರ್‌ನಲ್ಲಿ ಊರ್ವಶಿ ಮಹಡಿಯ ಮೇಲೆ ಮಕ್ಕಳಿಗೆ ನೃತ್ಯ ತರಗತಿಗಳನ್ನು ತೆಗೆದುಕೊಳ್ಳುತ್ತಿರುವುದನ್ನು ಕಾಣಬಹುದು. ಇನ್ನೊಂದು ಕಡೆಯಿಂದ ಎಲ್ವಿಶ್ ಅವಳನ್ನು ನೋಡಿ ನಗುತ್ತಾನೆ. ನಂತರ ಒಬ್ಬರಿಗೊಬ್ಬರು ಭೇಟಿಯಾಗುತ್ತಾರೆ. ‘ಹಮ್ ತೋ ದೀವಾನೆ’ ಹಾಡಿನ ಒಂದು ಭಾಗವನ್ನು ಟೀಸರ್‌ನೊಂದಿಗೆ ಬಿಡುಗಡೆ ಮಾಡಿದ್ದಾರೆ. ಈ ಮ್ಯೂಸಿಕಲ್‌ ವಿಡಿಯೋ ನಾಳೆ ಸೆಪ್ಟೆಂಬರ್ 14 ರ ಬೆಳಗ್ಗೆ 11 ಗಂಟೆಗೆ ಬಿಡುಗಡೆಯಾಗಲಿದೆ. ಬಿಗ್ ಬಾಸ್ OTT 2 ನಂತರ ಎಲ್ವಿಶ್‌ ಅವರ ಮೊದಲ ಮ್ಯೂಸಿಕ್‌ ವಿಡಿಯೋ ಇದಾಗಿದ್ದು, ಅವರ ಬಿಗ್ ಬಾಸ್ ಸಹ-ಸ್ಪರ್ಧಿಗಳಾದ ಅಭಿಷೇಕ್ ಮಲ್ಹಾನ್, ಜಿಯಾ ಶಂಕರ್ ಮತ್ತು ಮನೀಶಾ ರಾಣಿ ಅವರ ಇತರ ಮ್ಯೂಸಿಕ್ ವೀಡಿಯೊಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವೆಲ್ಲವೂ ಇತ್ತೀಚೆಗೆ ಆನ್‌ಲೈನ್‌ನಲ್ಲಿ ಬಿಡುಗಡೆಯಾಗಿದ್ದು, ಅಭಿಷೇಕ್ ಮತ್ತು ಜಿಯಾ ‌’ಜುದಾಯಿಯಾನ್’ನಲ್ಲಿ ಕಾಣಿಸಿಕೊಂಡರೆ, ಮನಿಷಾ ಟೋನಿ ಕಕ್ಕರ್‌ನೊಂದಿಗೆ ‘ಜಮ್ನಾ ಪಾರ್‌’ನಲ್ಲಿ ಕಾಣಿಸಿಕೊಂಡಿದ್ದಾರೆ.

LEAVE A REPLY

Connect with

Please enter your comment!
Please enter your name here