ಬಾಲಿವುಡ್‌ ತಾರೆ ಶಾರುಖ್‌ ಖಾನ್‌ ಮತ್ತು ದಕ್ಷಿಣದ ಖ್ಯಾತ ಚಿತ್ರನಿರ್ದೇಶಕ ಅಟ್ಲೀ ಸಿನಿಮಾದ ಶೀರ್ಷಿಕೆ ‘ಜವಾನ್‌’ ಎಂದಾಗಿದೆ. ಇಂದು ಚಿತ್ರದ ಶೀರ್ಷಿಕೆಯನ್ನು ಹೊರಗೆಡಹುವ ಟೀಸರ್‌ ಬಿಡುಗಡೆಯಾಗಿರುವುದು ವಿಶೇಷ. ಇಲ್ಲಿ ಶಾರುಖ್‌ ಲುಕ್‌ ತೀರಾ ಭಿನ್ನವಾಗಿದ್ದು, ಮುಂದಿನ ವರ್ಷ ಜೂನ್‌ 2ಕ್ಕೆ ಸಿನಿಮಾ ಬಿಡುಗಡೆಯಾಗಲಿದೆ.

ಶಾರುಖ್‌ ಮತ್ತು ಅಟ್ಲೀ ಸಿನಿಮಾ ಕುರಿತಾಗಿ ಸಿನಿಪ್ರಿಯರಲ್ಲಿ ಸಾಕಷ್ಟು ನಿರೀಕ್ಷೆಗಳಿದ್ದವು. ಇದೀಗ ಇವರಿಬ್ಬರ ಕಾಂಬಿನೇ಼ಷನ್‌ ಸಿನಿಮಾ ಬಗ್ಗೆ ಮಾಹಿತಿ ಹೊರಬಿದ್ದಿದೆ. ಚಿತ್ರಕ್ಕೆ ‘ಜವಾನ್‌’ ಎಂದು ನಾಮಕರಣವಾಗಿದ್ದು, ಇದು ಪ್ಯಾನ್‌ ಇಂಡಿಯಾ ಸಿನಿಮಾ ಎನ್ನುವ ಸೂಚನೆ ಸಿಕ್ಕಿದೆ. ಹಿಂದಿ ಜೊತೆ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲೂ ಸಿನಿಮಾ ಬಿಡುಗಡೆಯಾಗಲಿದೆ. ರಾಜಾ ರಾಣಿ, ತೇರಿ, ಮೆರ್ಸೆಲ್, ಬಿಗಿಲ್ ಸಿನಿಮಾಗಳ ಮೂಲಕ ಕಾಲಿವುಡ್‌ನಲ್ಲಿ ಸದ್ದು ಮಾಡಿದ್ದ ಅಟ್ಲೀ ಶಾರುಖ್ ಜತೆ ಸಿನಿಮಾ ಮಾಡಲಿದ್ದಾರೆ ಎಂದಾಗಲೇ ಅಭಿಮಾನಿ ವಲಯದಲ್ಲಿ ಕುತೂಹಲ ಮೂಡಿತ್ತು. ಇದೀಗ ಚಿತ್ರದ ಮೊದಲ ಲುಕ್ ಮತ್ತು ಟೀಸರ್‌ ಕೌತುಕ ಸೃಷ್ಟಿಸಿದೆ. “ಜವಾನ್ ಸಿನಿಮಾದ ಕಥೆ ಎಲ್ಲಾ ಕಡೆ ಸಲ್ಲುತ್ತದೆ. ಇದೊಂದು ಯೂನಿವರ್ಸಲ್ ಕತೆ. ನನಗೆ ಇದೊಂದು ಹೊಸ ಅನುಭವ. ಮೈನವಿರೇಳಿಸುವ ಆ್ಯಕ್ಷನ್ ಸಿನಿಮಾದ ಹೈಲೆಟ್. ಸದ್ಯ ಬಿಡುಗಡೆ ಆಗಿರುವ ಟೀಸರ್ ಸಣ್ಣ ಝಲಕ್ ಅಷ್ಟೇ” ಎಂದಿದ್ದಾರೆ ಶಾರುಖ್.

ನಿರ್ದೇಶಕ ಅಟ್ಲಿ, “ಇದೊಂದು ವಿಶ್ಯುವಲ್ ಟ್ರೀಟ್ ಸಿನಿಮಾ. ಪ್ರೇಕ್ಷಕನಿಗೆ ಹೊಸ ಥರದ ಅನುಭವ ಈ ಸಿನಿಮಾದಲ್ಲಿ ಸಿಗಲಿದೆ. ಆ್ಯಕ್ಷನ್ ಜೊತೆಗೆ ಕಮರ್ಷಿಯಲ್, ಡ್ರಾಮಾ, ಎಮೋಷನಲ್‌ ಕಂಟೆಂಟ್ ಸಿನಿಮಾದಲ್ಲಿ ಇರಲಿದೆ. ಸಿನಿಮಾವನ್ನು ಸ್ವತಃ ಶಾರುಖ್ ಪ್ರಸೆಂಟ್ ಮಾಡುತ್ತಿರುವುದು ಮತ್ತಷ್ಟು ಖುಷಿ ನೀಡಿದೆ” ಎಂದಿದ್ದಾರೆ. ಸದ್ಯ ‘ಪಠಾಣ್’ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ಶಾರುಖ್, ಅದರ ಜತೆಗೆ ‘ಜವಾನ್’ ಚಿತ್ರದಲ್ಲಿಯೂ ತೊಡಗಿಸಿಕೊಳ್ಳಲಿದ್ದಾರೆ. ಟೀಸರ್ ಬಿಡುಗಡೆ ಮಾಡಿರುವ ಚಿತ್ರತಂಡ ಸಿನಿಮಾ ರಿಲೀಸ್ ದಿನಾಂಕವನ್ನೂ ಘೋಷಿಸಿದೆ. 2023ರ ಜೂನ್ 2ರಂದು ಈ ಸಿನಿಮಾ ತೆರೆಗೆ ಬರಲಿದ್ದು ಚಿತ್ರದಲ್ಲಿ ಯಾರೆಲ್ಲ ಇರಲಿದ್ದಾರೆ‌ ಎಂಬ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ಹೊರಬೀಳಲಿದೆ. ಚಿತ್ರವನ್ನು ಶಾರುಖ್ ಒಡೆತನದ ರೆಡ್ ಚಿಲ್ಲೀಸ್ ಎಂಟರ್‌ಟೇನ್‌ಮೆಂಟ್‌ ಸಂಸ್ಥೆ ನಿರ್ಮಿಸುತ್ತಿದೆ.

LEAVE A REPLY

Connect with

Please enter your comment!
Please enter your name here