‘ಜವಾನ್‌’ ಚಿತ್ರದೊಂದಿಗೆ ಬಾಲಿವುಡ್‌ ಪ್ರವೇಶಿಸಿದ ನಯನತಾರಾ ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ ನೂತನ ಹಿಂದಿ ಚಿತ್ರದಲ್ಲಿ ನಟಿಸಲಿದ್ದಾರೆ. ಐವತ್ತರ ದಶಕದ ಆರಂಭದಲ್ಲಿ ವಿಜಯ್‌ ಭಟ್‌ ನಿರ್ದೇಶಿಸಿದ್ದ ‘ಬೈಜು ಬಾವ್ರಾ’ ಹಿಂದಿ ಚಿತ್ರವನ್ನು ಬನ್ಸಾಲಿ ಮತ್ತೆ ತೆರೆಗೆ ತರುತ್ತಿರುವ ಸೂಚನೆ ಸಿಕ್ಕಿದೆ. ಈ ಚಿತ್ರದಲ್ಲಿ ನಯನತಾರಾ ನಟಿಸಲಿದ್ದಾರೆ.

‘ಜವಾನ್’ ಚಿತ್ರದ ಮೂಲಕ ನಯನತಾರಾ ಬಾಲಿವುಡ್​ಗೆ ಪಾದಾರ್ಪಣೆ ಮಾಡಿದ್ದು, ಹಿಂದಿ ಚಿತ್ರರಂಗದಲ್ಲಿಯೂ ಅಭಿಮಾನಿಗಳನ್ನು ಗಳಿಸಿದ್ದಾರೆ. ಈಗ ಸಂಜಯ್‌ ಲೀಲಾ ಬನ್ಸಾಲಿ ಅವರ ಸಿನಿಮಾದ ಕತೆ ಅವರಿಗೆ ಇಷ್ಟವಾಗಿದೆ. ಬನ್ಸಾಲಿ ಸಿನಿಮಾದಲ್ಲಿ ಅವರು ನಟಿಸಲಿದ್ದಾರೆ. ಈ ವರ್ಷ ಮಾರ್ಚ್ ತಿಂಗಳಲ್ಲೇ ಬನ್ಸಾಲಿ ಕಚೇರಿಯಲ್ಲಿ ನಯನತಾರಾ ಕಾಣಿಸಿಕೊಂಡಿದ್ದರು. ಬನ್ಸಾಲಿ ಅವರಿಗೆ ಸಿನಿಮಾ ಮೇಲಿರುವ ಪ್ರೀತಿ ಎಂಥದ್ದುಎಂಬುದನ್ನು ಅವರ ಚಿತ್ರಗಳು ಸಾರಿ ಹೇಳುತ್ತವೆ. ಅನೇಕ ಜನಪ್ರಿಯ ಚಿತ್ರಗಳನ್ನು ನೀಡಿರುವ ಖ್ಯಾತಿ ಅವರದು. ಅವರು ‘ಬೈಜು ಬವ್ರಾ’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ರಣವೀರ್‌ ಸಿಂಗ್‌ ಮತ್ತು ಅಲಿಯಾ ಭಟ್ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು. ಈ ಮಧ್ಯೆ ಅವರು ನಯನತಾರಾ ಜೊತೆ ಮಾತುಕತೆ ಪ್ರಾರಂಭಿಸಿದ್ದಾರೆ.

‘ಗಂಗೂಬಾಯಿ ಕಾಠಿಯಾವಾಡಿ’ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸಿದ ಕೊನೆಯ ಸಿನಿಮಾ. 1952ರಲ್ಲಿ ವಿಜಯ್ ಭಟ್ ಅವರು ‘ಬೈಜು ಬಾವ್ರಾ’ ಸಿನಿಮಾ ನಿರ್ದೇಶನ ಮಾಡಿದ್ದರು. ಭರತ್ ಭೂಷಣ್ – ಮೀನಾ ಕುಮಾರಿ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಸಿನಿಮಾದ ಕತೆ ಬೈಜು ಎಂಬ ವ್ಯಕ್ತಿಯನ್ನು ಆಧರಿಸಿದೆ. ಸಂಗೀತ ಸ್ಪರ್ಧೆಯಲ್ಲಿ ತಾನ್‌ಸೇನ್‌ನ ಸೋಲಿಸಬೇಕು ಎಂದು ಪಣ ತೊಡುತ್ತಾನೆ. ಬನ್ಸಾಲಿ ಈ ಚಿತ್ರವನ್ನು ಮತ್ತೆ ತೆರೆಗೆ ತರಲಿದ್ದಾರೆ ಎನ್ನಲಾಗುತ್ತಿದೆ. ‘ಜವಾನ್’ ಬಳಿಕ ನಯನತಾರಾಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದೆ. ಇದರ ಮಧ್ಯೆ ಅವರು ಹೊಸಬರ ಜೊತೆ ಕೈ ಜೋಡಿಸುವ ಮೂಲಕ ಅವರನ್ನು ಬೆಂಬಲಿಸಿದ್ದಾರೆ. ಸದ್ಯ ಅವರು ಯೂಟ್ಯೂಬರ್‌ ವಿಕ್ಕಿ ನಿರ್ದೇಶನದ ‘ಮಣ್ಣಂಗಟ್ಟಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ‘ಸಿನ್ಸ್ 1960’ ಈ ಸಿನಿಮಾ ಶೀರ್ಷಿಕೆಯ ಅಡಿಬರಹ.

LEAVE A REPLY

Connect with

Please enter your comment!
Please enter your name here