ರಕ್ಷಿತ್‌ ಶೆಟ್ಟಿ ಅಭಿನಯದ ‘ಚಾರ್ಲಿ’ ಸಿನಿಮಾ ಭಾರತದ 21 ಪ್ರಮುಖ ನಗರಗಳಲ್ಲಿ ಪ್ರೀಮಿಯರ್‌ ಆಗುತ್ತಿದೆ. ಭಾರತೀಯ ಸಿನಿಮಾರಂಗ ಇತಿಹಾಸದಲ್ಲೇ ಇದೊಂದು ವಿಶಿಷ್ಟ ಪ್ರಯತ್ನ. ಟ್ರೈಲರ್‌ ಮೂಲಕ ಸಿನಿಪ್ರಿಯರ ನಿರೀಕ್ಷೆ ಹೆಚ್ಚುಮಾಡಿರುವ ಸಿನಿಮಾ ಜೂನ್‌ 10ರಂದು ತೆರೆಕಾಣಲಿದೆ.

ಸ್ಯಾಂಡಲ್‌ವುಡ್‌ನಿಂದ ಮತ್ತೊಂದು ಪ್ಯಾನ್‌ ಇಂಡಿಯಾ ಸದ್ದು ಮಾಡಲಿದೆ. ಮನುಷ್ಯ ಮತ್ತು ನಾಯಿ ಬಾಂಧವ್ಯದ ಕತೆ ಹೇಳಲಿರುವ ‘ಚಾರ್ಲಿ’ ಸಿನಿಮಾ ಜೂನ್‌ 10ರಂದು ತೆರೆಕಾಣಲಿದೆ. ಪ್ರೊಮೋಷನ್‌ ಶುರುವಾಗಿದ್ದು, ಚಿತ್ರತಂಡದ ಹೊಸತೊಂದು ಯೋಜನೆ ಗಮನ ಸೆಳೆಯುತ್ತಿದೆ. ಭಾರತೀಯ ಸಿನಿಮಾ ಇತಿಹಾಸದಲ್ಲೇ ಮೊದಲ ಪ್ರಯತ್ನ ಎನ್ನುವಂತೆ 21 ಪ್ರಮುಖ ನಗರಗಳಲ್ಲಿ ಸಿನಿಮಾ ಪ್ರೀಮಿಯರ್‌ ಆಗಲಿದೆ. ಬೆಂಗಳೂರು, ಹೈದರಾಬಾದ್‌, ಚೆನ್ನೈ, ದೆಹಲಿ, ಮಧುರೈ ಸೇರಿದಂತೆ 21 ಸಿಟಿಗಳಲ್ಲಿ ಪ್ರೀಮಿಯರ್ ಆಗುತ್ತಿರುವ ಮೊದಲ ಸಿನಿಮಾ ಎನ್ನುವ ಹೆಗ್ಗಳಿಕೆ ಈ ಚಿತ್ರದ್ದು.

ಹೈದರಾಬಾದ್‌, ವಾರಾಣಾಸಿಯಲ್ಲಿ 7ರಂದು, ದೆಹಲಿಯಲ್ಲಿ 2ರಂದು, ಅಮೃತಸರ 2ರಂದು, ಮಧುರೈ, ಪಂಜಿಮ್, ಬರೋಡಾ, ವೈಜಾಗ್‌ನಲ್ಲಿ 8ರಂದು, ಕೊಯಮತ್ತೂರು, ಸೊಲ್ಲಾಪುರ, ತಿರುವನಂತಪುರ, ಅಹಮದಾಬಾದ್‌ನಲ್ಲಿ 7ರಂದು, ಪುಣೆ, ಮುಂಬೈ, ಕಿಚ್ಚಿನ್, ಲಖನೌ, ಚೆನ್ನೈ, ಜೈಪುರ, ಕೋಲ್ಕತ್ 6ರಂದು, ನಾಗಾಪುರ, ಸೂರತ್‌ನಲ್ಲಿ 9ರಂದು ಪ್ರೀಮಿಯರ್ ಆಗುತ್ತಿದೆ. ಪರಂವಃ ಸ್ಟುಡಿಯೋಸ್ ನಿರ್ಮಾಣದಲ್ಲಿ ಮೂಡಿ ಬಂದಿರುವ ‘ಚಾರ್ಲಿ’ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಅವರು ಧರ್ಮ ಪಾತ್ರದಲ್ಲಿ ನಟಿಸಿದ್ದು, ಅವರಿಗೆ ಜೋಡಿಯಾಗಿ ಸಂಗೀತಾ ಶೃಂಗೇರಿ ಇದ್ದಾರೆ. ನಟನೆ ಜೊತೆಗೆ ರಕ್ಷಿತ್ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ರಾಜ್‌ ಬಿ. ಶೆಟ್ಟಿ, ಡ್ಯಾನಿಶ್‌ ಸೇಠ್‌, ತಮಿಳಿನ ಬಾಬಿ ಸಿಂಹ ಸೇರಿ ಇನ್ನೂ ಅನೇಕರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಿರಣ್‌ ರಾಜ್‌ ಚೊಚ್ಚಲ ನಿರ್ದೇಶನದ ಚಿತ್ರಕ್ಕೆ ನೋಬಿನ್‌ ಪೌಲ್‌ ಸಂಗೀತ, ಅರವಿಂದ್‌ ಕಶ್ಯಪ್‌ ಛಾಯಾಗ್ರಹಣ, ಪ್ರತೀಕ್‌ ಶೆಟ್ಟಿ ಸಂಕಲನ, ಪ್ರಗತಿ ರಿಷಬ್‌ ಶೆಟ್ಟಿ ವಸ್ತ್ರ ವಿನ್ಯಾಸ, ವಿಕ್ರಮ್‌ ಮೋರ್‌ ಸಾಹಸವಿದೆ.

Previous articleಜಗತ್ತಿನ ಅತಿ ಅಪಾಯಕಾರಿ‌ ಕ್ರಿಮಿನಲ್‌ಗಳು ವಿದ್ಯಾವಂತರು!
Next articleಶಾರುಖ್‌ – ಅಟ್ಲೀ ಸಿನಿಮಾ ‘ಜವಾನ್‌’ ಟೈಟಲ್‌ ಟೀಸರ್‌ ಬಿಡುಗಡೆ

LEAVE A REPLY

Connect with

Please enter your comment!
Please enter your name here