ಸಂದೀಪ್‌ ಸುಂಕದ್‌ ನಿರ್ದೇಶನದ ‘ಶಾಖಾಹಾರಿ’ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ರಂಗಾಯಣ ರಘು ಮತ್ತು ಗೋಪಾಲಕೃಷ್ಣ ದೇಶಪಾಂಡೆ ಈ ಮರ್ಡರ್‌ ಮಿಸ್ಟರಿ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ಫೆಬ್ರವರಿ 16ರಂದು ತೆರೆಕಾಣಲಿದೆ.

ರಂಗಾಯಣ ರಘು ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಶಾಖಾಹಾರಿ’ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ನಟ ಡಾಲಿ ಧನಂಜಯ ಟ್ರೇಲರ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಸಂದೀಪ್‌ ಸುಂಕದ್‌ ನಿರ್ದೇಶನದ ಮರ್ಡರ್‌ ಮಿಸ್ಟರಿ ಚಿತ್ರದಲ್ಲಿ ರಂಗಾಯಣ ರಘು ಪ್ರಮುಖ ಪಾತ್ರದಲ್ಲಿದ್ದಾರೆ. ಸಸ್ಯಾಹಾರಿ ಹೋಟೆಲ್‌ ಒಂದರಲ್ಲಿ ಬಾಣಸಿಗನಾಗಿ ಕಾಣಿಸಿಕೊಂಡಿರುವ ರಘು ಜೀವನವನ್ನು ಟ್ರೇಲರ್‌ನಲ್ಲಿ ತೋರಿಸಲಾಗಿದೆ. ಚಿತ್ರಕಥೆಯು ಕೊಲೆ, ರಕ್ತಪಾತ, ನಿಗೂಢತೆಯ ಕಥಾಹಂದರವಾಗಿದ್ದು, ದೇಹವನ್ನು ಕೊಚ್ಚಿಹಾಕುವುದು. ಮೃತ ದೇಹವನ್ನು ಗೋಣಿಚೀಲದಲ್ಲಿ ಸಾಗಿಸುವ ದೃಶ್ಯಗಳು ರಾಜ್‌ B ಶೆಟ್ಟಿ ಅವರ ‘ಟೋಬಿ’ ಚಿತ್ರವನ್ನು ನೆನಪಿಸುತ್ತದೆ. ರಂಗಾಯಣ ರಘು ಹಿಂದೆಂದೂ ನೋಡಿರದ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಸಂದೀಪ್ ಸುಂಕದ್ ಅವರೇ ಚಿತ್ರಕಥೆ ರಚಿಸಿರುವ ಈ ಚಿತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ ಪೊಲೀಸ್ ಅಧಿಕಾರಿಯಾಗಿದ್ದು, ಸುಜಯ್ ಶಾಸ್ತ್ರಿ, ನಿಧಿ ಹೆಗ್ಡೆ, ಪ್ರತಿಮಾ ನಾಯಕ್, ಹರಿಣಿ, ವಿನಯ್ ಯುಜೆ, ಶ್ರೀಹರ್ಷ ಗೋಭಟ್ಟ, ಶಿಲ್ಪಾ ಶೈಲೇಶ್ ಮತ್ತು ಮೋಹನ್ ಶೇಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರ ಇದೇ ಫೆಬ್ರವರಿ 16ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಚಿತ್ರವನ್ನು Keelambi Media Lab ಬ್ಯಾನರ್‌ ಅಡಿಯಲ್ಲಿ ರಾಜೇಶ್ ಕೀಳಂಬಿ ಮತ್ತು ರಂಜಿನಿ ಪ್ರಸನ್ನ ನಿರ್ಮಿಸಿದ್ದಾರೆ. ಚಿತ್ರಕ್ಕೆ ವಿಶ್ವಜಿತ್ ರಾವ್ ಛಾಯಾಗ್ರಹಣ ಮತ್ತು ಮಯೂರ್ ಅಂಬೆಕಲ್ಲು ಸಂಗೀತವಿದೆ. ತೀರ್ಥಹಳ್ಳಿ ಮತ್ತು ಸುತ್ತಮುತ್ತಲಿನ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

LEAVE A REPLY

Connect with

Please enter your comment!
Please enter your name here