ರಾಜೇಶ್‌ ಎ ಕೃಷ್ಣನ್‌ ನಿರ್ದೇಶನದ ‘ದಿ ಕ್ರೂ’ ಹಿಂದಿ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಚಿತ್ರದ ಪ್ರಮುಖ ಪಾತ್ರಧಾರಿಗಳಾದ ಕರೀನಾ ಕಪೂರ್, ಟಬು ಮತ್ತು ಕೃತಿ ಸನೋನ್ air hostess ಪಾತ್ರಗಳಲ್ಲಿ ನಟಿಸಿದ್ದಾರೆ. ಏಕ್ತಾ ಕಪೂರ್‌ ಮತ್ತು ರಿಯಾ ಕಪೂರ್‌ ನಿರ್ಮಾಣದ ಸಿನಿಮಾ ಮಾರ್ಚ್‌ 29ರಂದು ತೆರೆಕಾಣಲಿದೆ.

ಕರೀನಾ ಕಪೂರ್, ಟಬು ಮತ್ತು ಕೃತಿ ಸನೋನ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ದಿ ಕ್ರೂ’ (The Crew) ಹಿಂದಿ ಚಿತ್ರದ ಕಿರು ಟೀಸರ್‌ ಬಿಡುಗಡೆಯಾಗಿದೆ. ಚಿತ್ರವನ್ನು ಏಕ್ತಾ ಕಪೂರ್ ಮತ್ತು ರಿಯಾ ಕಪೂರ್ ನಿರ್ಮಿಸುತ್ತಿದ್ದು, ರಾಜೇಶ್ ಎ ಕೃಷ್ಣನ್ ನಿರ್ದೇಶಿಸುತ್ತಿದ್ದಾರೆ. ವಿಮಾನಯಾನ ಸಮವಸ್ತ್ರ ಧರಿಸಿರುವ ಮೂವರು ಮಹಿಳೆಯರು ವಿಮಾನ ನಿಲ್ದಾಣದ ಒಳಗೆ ನಡೆದುಕೊಂಡು ಹೋಗುತ್ತಿರುವುದನ್ನು ಟೀಸರ್‌ನಲ್ಲಿ ಕಾಣಬಹುದು. ಅವರು ಕ್ಯಾಪ್ಸ್, ಕೆಂಪು ಬಣ್ಣದ ಬ್ಲೇಜರ್ ಮತ್ತು ಸ್ಕರ್ಟ್ ಧರಿಸಿದ್ದಾರೆ. ಹಾಗೇ ಹಿನ್ನೆಲೆಯಲ್ಲಿ ‘ಚೋಲಿ ಕೆ ಪೀಚೆ’ ಹಾಡಿನ ಮ್ಯೂಸಿಕ್‌ ಸಹ ಕೇಳಿಸುತ್ತದೆ. ಚಿತ್ರಕಥೆಯು ಕ್ಯಾಬಿನ್‌ ಕ್ರೂ ಸಿಬ್ಬಂದಿಗಳಾಗಿ ತಮ್ಮ ಬದುಕನ್ನು ಮುಂದುವರಿಸಲು ಹರಸಾಹಸಪಡುವ ಮೂವರು ಮಹಿಳೆಯರ ಕುರಿತು ಹೇಳಲಿದೆ. ಆದರೆ ಅವರು ತಮ್ಮ ಸರಳ ಬದುಕನ್ನು ನಡೆಸುವಾಗ ದುರಾದೃಷ್ಟವು ಅವರನ್ನು ಕೆಲವು ಅನಿರೀಕ್ಷಿತ ಸಂದರ್ಭಗಳಲ್ಲಿ ಮತ್ತು ಸುಳ್ಳಿನ ಜಾಲದಲ್ಲಿ ಸಿಕ್ಕಿಹಾಕಿಕೊಳ್ಳುವಂತೆ ಮಾಡುತ್ತದೆ.

ಚಿತ್ರದ ಕುರಿತು ಕರೀನಾ ಮತ್ತು ಕೃತಿ ಸನೋನ್ ಅವರು ತಮ್ಮ Instagram ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ದಿಲ್ಜಿತ್ ದೋಸಾಂಜ್ ಮತ್ತು ಕಪಿಲ್ ಶರ್ಮಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವು ಮಾರ್ಚ್ 29 ರಂದು ಬಿಡುಗಡೆಯಾಗಲಿದೆ. ರಿಯಾ ಮತ್ತು ಏಕ್ತಾ ಈ ಹಿಂದೆ 2018 ರಲ್ಲಿ ‘ವೀರೇ ದಿ ವೆಡ್ಡಿಂಗ್‌’ ಚಲನಚಿತ್ರ ನಿರ್ಮಿಸಿದ್ದರು. ಈ ಚಿತ್ರದಲ್ಲಿ ಕರೀನಾ ಕಪೂರ್, ಸೋನಮ್ ಕಪೂರ್, ಸ್ವರಾ ಭಾಸ್ಕರ್ ಮತ್ತು ಶಿಖಾ ತಲ್ಸಾನಿಯಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

LEAVE A REPLY

Connect with

Please enter your comment!
Please enter your name here