ಸುನಿ ನಿರ್ದೇಶನದಲ್ಲಿ ಶರಣ್ ಮತ್ತು ಆಶಿಕಾ ರಂಗನಾಥ್ ಅಭಿನಯದ ‘ಅವತಾರ ಪುರುಷ’ ಚಿತ್ರದ ‘ಲಡ್ಡು’ ಹಾಡು ಬಿಡುಗಡೆಯಾಗಿದೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆಯ ಹಾಡು ಸರಳ ಗೀತರಚನೆ ಮತ್ತು ಪಿಕ್ಚರೈಸೇಷನ್‌ನಿಂದ ಗಮನ ಸೆಳೆಯುತ್ತದೆ.

ಶರಣ್ ಮತ್ತು ಆಶಿಕಾ ರಂಗನಾಥ್ ಜೋಡಿಯ ‘ಅವತಾರ ಪುರುಷ’ ಸಿನಿಮಾದ ‘ಲಡ್ಡು’ ಹಾಡು ರಿಲೀಸ್ ಆಗಿದೆ. ಜಾಹೀರೊಂದರ ಸಾಲುಗಳನ್ನೇ ಹಾಡಾಗಿಸಿದ್ದಾರೆ ನಿರ್ದೇಶಕ ಸುನಿ. ಸರಳ ಪದಗಳ ಈ ರಚನೆಗೆ ಅರ್ಜುನ್ ಜನ್ಯ ಅವರ ಮಧುರ ಸಂಗೀತ ಸೂಕ್ತವಾಗಿ ಹೊಂದಿಕೆಯಾಗಿದೆ. ನಿಹಾಲ್ ತೌರೊ ಈ ಗೀತೆಗೆ ದನಿಯಾಗಿದ್ದು, ಆಕರ್ಷಕ ಪಿಕ್ಚರೈಸೇಷನ್‌ನಿಂದ ಹಾಡು ಗಮನ ಸೆಳೆಯುತ್ತದೆ. ಶರಣ್ ಇಮೇಜಿಗೆ ಹೊಂದುವಂತಹ ತಮಾಷೆಯ ಸೀನ್‌ಗಳು, ಸುಂದರ ನಟಿ ಆಶಿಕಾ ರಂಗನಾಥ್‌ ಸ್ಕ್ರೀನ್ ಪ್ರಸೆನ್ಸ್ ಸನ್ನಿವೇಶಗಳನ್ನು ಕಳೆಗಟ್ಟಿದೆ. ನೃತ್ಯ ನಿರ್ದೇಶಕ ಭೂಷಣ್ ಮತ್ತು ಛಾಯಾಗ್ರಾಹಕ ವಿಲಿಯಂ ಡೇವಿಡ್‌ ಅವರ ಕೆಲಸಕ್ಕೂ ಮನ್ನಣೆ ಸಲ್ಲಬೇಕು. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದಲ್ಲಿ ಸುನಿ ನಿರ್ದೇಶಿಸಿರುವ ‘ಅವತಾರ ಪುರುಷ’ ಕನ್ನಡದ ನಿರೀಕ್ಷೆಯ ಚಿತ್ರಗಳಲ್ಲೊಂದು. ‘ಆಪ್ತಮಿತ್ರ’ ನಂತರ ಅದೇ ಜಾನರ್‌ನಲ್ಲಿ ಸಿದ್ಧವಾಗಿರುವ ಸಿನಿಮಾ. ವೆಬ್ ಸರಣಿಗೆಂದು ಕತೆ ಬರೆದಿದ್ದ ನಿರ್ದೇಶಕ ಸುನಿ ನಂತರ ಎರಡು ಪಾರ್ಟ್‌ಗಳಲ್ಲಿ ಸಿನಿಮಾ ಮಾಡಲು ನಿರ್ಧರಿಸಿದ್ದಾರೆ. ಮೊದಲ ಪಾರ್ಟ್‌ ಇದೇ ಡಿಸೆಂಬರ್‌ 10ರಂದು ತೆರೆಕಾಣಲಿದೆ. ಈ ಚಿತ್ರ ತೆರೆಕಂಡ ನೂರನೇ ದಿನಕ್ಕೆ ಎರಡನೇ ಪಾರ್ಟ್‌ ತೆರೆಗೆ ಬರಲಿದೆಯಂತೆ. ಶ್ರೀನಗರ ಕಿಟ್ಟಿ, ಸಾಯಿಕುಮಾರ್, ಭವ್ಯ, ಸುಧಾರಾಣಿ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

https://youtu.be/6oG3bjVNI5Q

LEAVE A REPLY

Connect with

Please enter your comment!
Please enter your name here