ಶಿವಕಾರ್ತಿಕೇಯನ್‌ ಮತ್ತ ಅದಿತಿ ಶಂಕರ್‌ ಅಭಿನಯದ ‘ಮಾವೀರನ್‌’ ತಮಿಳು ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ರಾಜಕಾರಣಿಯ ದ್ವೇಷಕ್ಕೆ ಗುರಿಯಾಗುವ ವ್ಯಂಗಚಿತ್ರಕಾರನ ಹೋರಾಟ ಚಿತ್ರದ ವಸ್ತು. ಜುಲೈ 14ರಂದು ಸಿನಿಮಾ ತೆರೆಕಾಣಲಿದೆ.

ನಟ ಶಿವಕಾರ್ತಿಕೇಯನ್ ಅಭಿನಯದ ‘ಮಾವೀರನ್’ ತಮಿಳು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಅದಿತಿ ಶಂಕರ್ ನಾಯಕಿಯಾಗಿ ನಟಿಸಿದ್ದು, ಹಾಸ್ಯ ನಟ ಯೋಗಿ ಬಾಬು, ಮಿಸ್ಕಿನ್, ಸರಿತಾ ಮತ್ತು ಸುನೀಲ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಮಡೋನ್ನೆ ಅಶ್ವಿನ್ ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಅರುಣ್ ವಿಶ್ವ ನಿರ್ಮಿಸಿ, ನಟಿಸಿದ್ದಾರೆ. ಸಿನಿಮಾದಲ್ಲಿ ಒಬ್ಬ ಸೌಮ್ಯ ಸ್ವಭಾವದ ವ್ಯಂಗ್ಯಚಿತ್ರಕಾರನ ಪಾತ್ರದಲ್ಲಿ ಶಿವಕಾರ್ತಿಕೇಯನ್‌ ಕಾಣಿಸಿಕೊಂಡಿದ್ದಾರೆ. ರಾಜಕಾರಣಿಯೊಬ್ಬರ ವ್ಯಂಗ್ಯಚಿತ್ರವನ್ನು ಚಿತ್ರಿಸಿ ಆ ಪ್ರಬಲ ರಾಜಕಾರಣಿಯ ದ್ವೇಷಕ್ಕೆ ಗುರಿಯಾಗಿ ಅವನು‌ ಮತ್ತು ಅವನ ಕುಟುಂಬದವರು ಎದುರಿಸುವ ತೊಂದರೆಗಳನ್ನು ಟ್ರೈಲರ್‌ ಒಳಗೊಂಡಿದೆ. ಸಿನಿಮಾದ ಟ್ರೈಲರ್‌ ಮತ್ತು ಪೋಸ್ಟರ್‌ಗಳನ್ನು ಶಿವಕಾರ್ತಿಕೇಯನ್ ತಮ್ಮ ಸೋಷಿಯಲ್‌ ಮೀಡಿಯಾ ಹ್ಯಾಂಡಲ್‌ಗಳಲ್ಲಿ ಹಂಚಿಕೊಂಡಿದ್ದಾರೆ. ವಿಧು ಅಯ್ಯಣ್ಣ ಛಾಯಾಗ್ರಹಣ, ಭರತ್ ಶಂಕರ್ ಸಂಗೀತ ಚಿತ್ರಕ್ಕಿದೆ. ಜುಲೈ 14ರಂದು ಸಿನಿಮಾ ತೆರೆಕಾಣಲಿದೆ.

Previous articleವಿದ್ಯಾ ಬಾಲನ್‌ ‘ನೀಯತ್‌’ | ಅನು ಮೆನನ್‌ ನಿರ್ದೇಶನದ ಮರ್ಡರ್‌ ಮಿಸ್ಟರಿ ಜುಲೈ 7ಕ್ಕೆ ತೆರೆಗೆ
Next article‘ಗಣ’ ಟೀಸರ್‌ | ಪ್ರಜ್ವಲ್‌ ದೇವರಾಜ್‌ ಅಭಿನಯದ Time Loop ಸಿನಿಮಾ

LEAVE A REPLY

Connect with

Please enter your comment!
Please enter your name here