ಪ್ರಜ್ವಲ್‌ ದೇವರಾಜ್‌ ಅಭಿನಯದ ‘ಗಣ’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಎರಡು ಕಾಲಘಟ್ಟದಲ್ಲಿ ನಡೆಯುವ ಕತೆ. ಹರಿಪ್ರಸಾದ್‌ ಜಕ್ಕ ನಿರ್ದೇಶನದ ಚಿತ್ರದ ನಾಯಕಿ ವೇದಿಕಾ.

‘ಗಣ ನಾನು ಈವರೆಗೂ ಮಾಡಿರುವ ಚಿತ್ರಗಳಲ್ಲೇ ಬೇಗ ಮುಗಿದಿರುವ ಚಿತ್ರ ಹಾಗೂ ಡಿಫರೆಂಟ್ ಜಾನರ್‌ ಚಿತ್ರ ಕೂಡ. 1993 ಹಾಗೂ 2023 ಎರಡು ಕಾಲಘಟ್ಟದಲ್ಲಿ ಕತೆ ನಡೆಯುತ್ತದೆ‌. ಸಮಯದ ಜೊತೆ ಹೋರಾಡುವ ಚಿತ್ರ ಎನ್ನಬಹುದು’ ಎಂದು ತಮ್ಮ ನೂತನ ಸಿನಿಮಾ ಬಗ್ಗೆ ಹೇಳುತ್ತಾರೆ ಹೀರೋ ಪ್ರಜ್ವಲ್‌ ದೇವರಾಜ್‌. ಅವರ ಹುಟ್ಟುಹಬ್ಬದ ಅಂಗವಾಗಿ ಚಿತ್ರತಂಡ ಟೀಸರ್‌ ಬಿಡುಗಡೆಗೊಳಿಸಿದೆ. ಪ್ರಜ್ವಲ್ ತಾಯಿ ಚಂದ್ರಲೇಖ ಟೀಸರ್ ಬಿಡುಗಡೆ ಮಾಡಿ ಶುಭ ಕೋರಿದರು. ನಟ ದೇವರಾಜ್, ರಾಗಿಣಿ ಪ್ರಜ್ವಲ್ ಹಾಗೂ ಪ್ರಣಾಮ್ ದೇವರಾಜ್ ಉಪಸ್ಥಿತರಿದ್ದರು.

ನಿರ್ಮಾಪಕ ಪಾರ್ಥು ಅವರಿಗೆ ಸಿನಿಮಾ ಬಗ್ಗೆ ವಿಪರೀತ ಪ್ಯಾಷನ್‌. ಐಟಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅವರು ಸಾಕಷ್ಟು ಹೋಂವರ್ಕ್‌ ಮಾಡಿಕೊಂಡು ಚಿತ್ರನಿರ್ಮಾಣಕ್ಕೆ ಇಳಿದಿದ್ದು, ಸ್ವತಃ ಅವರೂ ಸಿನಿಮಾದ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ. ನಾಯಕಿ ವೇದಿಕಾ, ‘ಎಲ್ಲರೂ ತಮ್ಮ ಸಿನಿಮಾ ಡಿಫರೆಂಟ್‌ ಎಂದು ಹೇಳುತ್ತಾರೆ. ಆದರೆ ಗಣ ಸಿನಿಮಾದ ಕಥಾವಸ್ತು ನಿಜಕ್ಕೂ ತುಂಬಾ ಭಿನ್ನವಾಗಿದೆ. ನನಗೆ ತುಂಬಾ ವಿಶೇಷವಾದ ಅನುಭವ ನೀಡಿದೆ ಸಿನಿಮಾ’ ಎನ್ನುತ್ತಾರೆ. ‘ಮೊದಲ ಬಾರಿ ಟೈಂ ಲೂಪ್‌ ಪ್ರಯತ್ನ ಮಾಡಿದ್ದೇವೆ. ಪ್ರೇಕ್ಷಕರನ್ನು ಹಿಡಿದಿಡುವಂಥ ಸಾಕಷ್ಟು ಕುತೂಹಲಕಾರಿ ಅಂಶಗಳು ಚಿತ್ರದಲ್ಲಿವೆ’ ಎನ್ನುವುದು ಚಿತ್ರದ ಬರವಣಿಗೆ, ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿರುವ ರಾಜ್‌ ಗೋಪಿ ಅವರ ಮಾತು. ಕೃಷಿ ತಾಪಂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಿವರಾಜ್ ಕೆ ಆರ್ ಪೇಟೆ, ಮಾಸ್ಟರ್ ರಘುನಂದನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಅನೂಪ್‌ ಸಿಳೀನ್‌ ಸಂಗೀತ, ಜೈ ಆನಂದ್‌ ಛಾಯಾಗ್ರಹಣ, ಸತೀಶ್‌ ಕಲಾನಿರ್ದೇಶನ, ಹರೀಶ್‌ ಕೊಮ್ಮೆ ಸಂಕಲನ ಚಿತ್ರಕ್ಕಿದೆ.

Previous articleಶಿವಕಾರ್ತಿಕೇಯನ್‌ ‘ಮಾವೀರನ್‌’ ಟ್ರೈಲರ್‌ | ಮಡೋನ್ನೆ ಅಶ್ವಿನ್‌ ನಿರ್ದೇಶನದ ಸಿನಿಮಾ
Next article‘ಸಲಾರ್‌’ ಟೀಸರ್‌ | ಪ್ರಶಾಂತ್‌ ನೀಲ್‌ – ಪ್ರಭಾಸ್‌ ಸಿನಿಮಾದ ಫಸ್ಟ್‌ Glmpses!

LEAVE A REPLY

Connect with

Please enter your comment!
Please enter your name here