ಹರಿ ನಿರ್ದೇಶನದಲ್ಲಿ ವಿಶಾಲ್‌ ನಟಿಸಿರುವ ‘ರತ್ನಂ’ ತಮಿಳು ಆಕ್ಷನ್‌ – ಡ್ರಾಮಾ ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಿದೆ. ತಿಂಗಳುಗಳ ಹಿಂದೆ ಬಂದಿದ್ದ ಪೋಸ್ಟರ್‌ಗಳು ಇದೊಂದು ರಕ್ತಸಿಕ್ತ ಸೇಡಿನ ಕತೆ ಎನ್ನುವ ಸುಳಿವು ನೀಡಿದ್ದವು. ಈಗ ಬಂದಿರುವ ಟ್ರೇಲರ್‌ ಇದಕ್ಕೆ ಇಂಬು ನೀಡುತ್ತಿದೆ.

ಬಹಳ ದಿನಗಳಿಂದ ಯಶಸ್ಸಿನ ನಿರೀಕ್ಷೆಯಲ್ಲಿದ್ದ ಹೀರೋ ವಿಶಾಲ್‌ ಅವರಿಗೆ ‘ಮಾರ್ಕ್‌ ಆಂಥೋನಿ’ ಗೆಲುವು ಒಂದೊಳ್ಳೆ ಬ್ರೇಕ್‌ ನೀಡಿತ್ತು. ಅಧಿಕ್‌ ರವಿಚಂದ್ರನ್‌ ನಿರ್ದೇಶನದ ಈ ಸಿನಿಮಾ ಮೂಲಕ ವಿಶಾಲ್‌ ಮತ್ತೆ ಸ್ಪರ್ಧೆಗೆ ಮರಳಿದ್ದಾರೆ. ಇದೀಗ ಅವರ ಮುಂದಿನ ಚಿತ್ರವಾಗಿ ‘ರತ್ನಂ’ ತೆರೆಕಾಣಲಿದೆ. ಈ ಹಿಂದೆ ರಿಲೀಸ್‌ ಆಗಿದ್ದ ಚಿತ್ರದ ಪೋಸ್ಟರ್‌ಗಳು ಇದೊಂದು ರಕ್ತಸಿಕ್ತ ಕತೆ ಎನ್ನುವ ಸುಳಿವು ನೀಡಿದ್ದವು. ಟ್ರೇಲರ್‌ ಅದನ್ನು ನಿಜವಾಗಿಸಿದೆ. ತಮಿಳುನಾಡು – ಆಂಧ್ರ ಗಡಿಯಲ್ಲಿ ಜನರು ತುಂಬಿದ ಬಸ್‌ ಉರುಳಿ ಬೀಳುವುದರೊಂದಿಗೆ ಟ್ರೇಲರ್‌ ಆರಂಭವಾಗುತ್ತದೆ. ನಂತರ ಸರಣಿ ಆಕ್ಷನ್‌ ಸೀನ್‌ಗಳನ್ನು ನೋಡಬಹುದು. ಹಿನ್ನೆಲೆಯಲ್ಲಿ ಕೇಳಿಬರುವ ರೊಮ್ಯಾಂಟಿಕ್‌ ಸಾಂಗ್‌ ಇತ್ತೀಚಿನ ‘ಲಿಯೋ’, ‘ಜೈಲರ್‌’ ಸಿನಿಮಾಗಳ ಸನ್ನಿವೇಶವನ್ನು ನೆನಪು ಮಾಡುತ್ತವೆ.

ಟ್ರೇಲರ್‌ ಹೇಳುವಂತೆ ಇದು ತಮಿಳು ನಾಡು ಮತ್ತು ಆಂಧ್ರ ಗಡಿಯ ಹಳ್ಳಿಯೊಂದರಲ್ಲಿ ನಡೆಯುವ ಕತೆ. ಎರಡೂ ಭಾಗಗಳಲ್ಲಿ ಚಿತ್ರದ ಕಥಾನಾಯಕ ರತ್ನಂಗೆ ಶತ್ರುಗಳಿದ್ದಾರೆ. ರತ್ನಂ ಮತ್ತು ಚಿತ್ರದ ನಾಯಕನಟಿ (ಪ್ರಿಯಾ ಭವಾನಿ ಶಂಕರ್‌) ಇಬ್ಬರೂ ಪ್ರೀತಿ, ಬದುಕಿಗಾಗಿ ಹೋರಾಟ ನಡೆಸುತ್ತಾರೆ. ಈ ಹಂತದಲ್ಲಿ ರಕ್ತದೋಕುಳಿ ಹರಿಯುತ್ತದೆ. ಸಮುದ್ರಖನಿ, ಗೌತಮ್‌ ಮೆನನ್‌, ರಾಮಚಂದ್ರ ರಾಜು, ಮುರಳಿ ಶರ್ಮ, ಹರೀಶ್‌ ಪರಾಡಿ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ‘ರತ್ನಂ’ ನಂತರ ವಿಶಾಲ್‌ರ ‘ತುಪ್ಪರಿವಾಲನ್‌ 2’ ಬಿಡುಗಡೆಯಾಗಲಿದೆ. ಈ ಚಿತ್ರದ ಮೂಲಕ ವಿಶಾಲ್‌ ನಿರ್ದೇಶಕರಾಗುತ್ತಿದ್ದಾರೆ ಎನ್ನವುದು ವಿಶೇಷ.

LEAVE A REPLY

Connect with

Please enter your comment!
Please enter your name here