ಪುನೀತ್‌ ರಾಜಕುಮಾರ್‌ ‘ಜೇಮ್ಸ್‌’ ಸಿನಿಮಾ ಇಂಟರ್‌ವೆಲ್‌ನಲ್ಲಿ ‘ಬೈರಾಗಿ’ ಸಿನಿಮಾದ ಟೀಸರ್‌ ಪ್ರದರ್ಶನವಾಗಲಿದೆ ಎಂದು ಮೊನ್ನೆ ಸುದ್ದಿಯಾಗಿತ್ತು. ಇಂದು ‘ಬೈರಾಗಿ’ ಟೀಸರ್‌ ಬಿಡುಗಡೆಯಾಗಿದ್ದು ಶಿವರಾಜಕುಮಾರ್‌ ಎರಡು ಭಿನ್ನ ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ.

”ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ನಮ್ಮ ತಂಡದ ಜತೆ ಅಪ್ಪು ಒಡನಾಟವಿದೆ. ಹೀಗಾಗಿ ಅವರ ಹುಟ್ಟುಹಬ್ಬದ ಉಡುಗೊರೆಯಾಗಿ ‘ಬೈರಾಗಿ’ ಟೀಸರ್ ಬಿಡುಗಡೆ ಮಾಡುತ್ತಿದ್ದೇವೆ. ಇದು ಪುನೀತ್ ಹಾಗೂ ಶಿವಣ್ಣನ ಅಭಿಮಾನಿಗಳಿಗೆ ಸಂತಸದ ವಿಷಯ” ಎಂದಿದ್ದರು ‘ಬೈರಾಗಿ’ ಚಿತ್ರದ ನಿರ್ದೇಶಕ ವಿಜಯ್‌ ಮಿಲ್ಟನ್‌. ಇಂದು ಸಿನಿಮಾದ ಟೀಸರ್‌ ಬಿಡುಗಡೆಯಾಗಿದ್ದು, ಹುಲಿವೇಷದಲ್ಲಿ ಶಿವರಾಜಕುಮಾರ್‌ ಮಿಂಚಿದ್ದಾರೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ಧನಂಜಯ್‌ ಮತ್ತು ಪೃಥ್ವಿ ಅಂಬರ್‌ ನಟಿಸಿದ್ದಾರೆ. ಆದರೆ ಇವರಿಬ್ಬರ ಪಾತ್ರಗಳೇನು ಎನ್ನುವುದು ಟೀಸರ್‌ನಲ್ಲಿ ಎಸ್ಟಾಬ್ಲಿಷ್‌ ಆಗಿಲ್ಲ. ಟೀಸರ್‌ ಇಡೀ ಶಿವರಾಜಕುಮಾರ್‌ ಇದ್ದು, ಅವರ ಪಾತ್ರಕ್ಕಿಲ್ಲಿ ಎರಡು ಶೇಡ್‌ ಇದ್ದಂತಿದೆ. ಧನಂಜಯ್‌ ಒಮ್ಮೆ ಮಾತ್ರ ಕಾಣಸಿಗುತ್ತಾರೆ. ‘ಕೃಷ್ಣ ಕ್ರಿಯೇಷನ್ಸ್’ ಬ್ಯಾನರ್‌ನಡಿ ಕೃಷ್ಣ ಸಾರ್ಥಕ ಈ ಸಿನಿಮಾ ನಿರ್ಮಿಸಿದ್ದಾರೆ. ‘ಟಗರು’ ಬಳಿಕ ‘ಡಾಲಿ’ ಧನಂಜಯ್ ಈ ಸಿನಿಮಾದಲ್ಲಿ ಶಿವರಾಜ್‌ಕುಮಾರ್ ಅವರನ್ನು ಜೊತೆಯಾಗಿರುವ ಚಿತ್ರವಿದು. ಹಿರಿಯ ನಟ ಶಶಿಕುಮಾರ್, ಅಂಜಲಿ, ಯಶ ಶಿವಕುಮಾರ್ ಪ್ರಮುಖ ತಾರಾಬಳಗದಲ್ಲಿದ್ದಾರೆ. ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿರುವ ಚಿತ್ರಕ್ಕೆ ಗುರು ಕಶ್ಯಪ್ ಸಂಭಾಷಣೆ ರಚಿಸಿದ್ದಾರೆ.

Previous article‘ಅಭಯ್‌’ ಸೀಸನ್‌ 3 ಟ್ರೈಲರ್‌ | ZEE5ನಲ್ಲಿ ಕುನಾಲ್‌ ಖೇಮು ವೆಬ್‌ ಸರಣಿ
Next articleNBK107 | ಬಾಲಯ್ಯ ತೆಲುಗು ಸಿನಿಮಾದ ದುನಿಯಾ ವಿಜಯ್‌ ಫಸ್ಟ್‌ಲುಕ್‌ ಬಿಡುಗಡೆ

LEAVE A REPLY

Connect with

Please enter your comment!
Please enter your name here