ಶಿವರಾಜಕುಮಾರ್ ಇಂದು 61ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ನಿನ್ನೆ ರಾತ್ರಿ 12ರಿಂದಲೇ ಅಭಿಮಾನಿಗಳು ಅವರ ಮನೆ ಎದುರು ಜಮಾಯಿಸಿ ತಮ್ಮ ನೆಚ್ಚಿನ ನಟನಿಗೆ ಶುಭಾಶಯ ಕೋರುತ್ತಿದ್ದಾರೆ. ಬರ್ತ್‌ಡೇ ಉಡುಗೊರೆಯಾಗಿ ‘ಘೋಸ್ಟ್’ ಚಿತ್ರತಂಡ ಇಂದು ‘Big Daddy’ ವೀಡಿಯೋ ರಿಲೀಸ್ ಮಾಡಿದೆ. ಶಿವರಾಜಕುಮಾರ್ ಅವರ ಬಹುನಿರೀಕ್ಷಿತ ‘Ghost’ ಸಿನಿಮಾ ಕುರಿತ Glimpses ಇದು.
ಶ್ರೀನಿ ನಿರ್ದೇಶನದಲ್ಲಿ ಶಿವರಾಜಕುಮಾರ್ ನಟಿಸುತ್ತಿರುವ ‘GHOST’ ಸಿನಿಮಾದ Big Daddy ವೀಡಿಯೋ ರಿಲೀಸ್ ಆಗಿದೆ. ಇದು ತಮ್ಮ ಚಿತ್ರದ ಹೀರೋ ಶಿವರಾಜಕುಮಾರ್ ಅವರಿಗೆ ‘ಘೋಸ್ಟ್’ ಚಿತ್ರತಂಡದ ಬರ್ತ್‌ಡೇ ಗಿಫ್ಟ್. Big Daddy ಅಂದರೇನು ಎಂದು ಶಿವರಾಜಕುಮಾರ್ ಅಭಿಮಾನಿಗಳಲ್ಲಿ ತೀವ್ರ ಕುತೂಹಲವಿತ್ತು. ಇಂದು ಬಿಡುಗಡೆಯಾಗಿರುವ ವೀಡಿಯೋ ಅವರಿಗೆ ಖುಷಿ ಕೊಟ್ಟಿದೆ. ತಾವು ‘ಒರಿಜಿನಲ್ ಗ್ಯಾಂಗ್‌ಸ್ಟರ್’ ಎಂದು ಶಿವರಾಜಕುಮಾರ್ ಹೇಳಿಕೊಳ್ಳುವ ವೀಡಿಯೋ ಇಲ್ಲಿದೆ. ಸಿನಿಮಾ ಕುರಿತಾಗಿ ನಿರೀಕ್ಷೆ ಹುಟ್ಟಿಸುತ್ತದೆ ಟೀಸರ್. ಮತ್ತೊಂದು ಭರ್ಜರಿ ಮಾಸ್ ಚಿತ್ರದೊಂದಿಗೆ ಶಿವರಾಜಕುಮಾರ್ ತೆರೆಗೆ ಮರಳುವ ಸೂಚನೆ ಸಿಕ್ಕಿದೆ. ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಟೀಸರ್ ರಿಲೀಸ್ ಆಗಿದೆ.
ಹೊಸ ಸಿನಿಮಾ | ಇಂದು ಹುಟ್ಟುಹಬ್ಬದ ಅಂಗವಾಗಿ ಶಿವರಾಜಕುಮಾರ್ ನಟಿಸಲಿರುವ ನೂತನ ಸಿನಿಮಾವೊಂದರ ಕಾನ್ಸೆಪ್ಟ್ ಪೋಸ್ಟರ್ ಬಿಡುಗಡೆಯಾಗಿದೆ. ಈ ಹಿಂದೆ ತಮಿಳಿನಲ್ಲಿ ವಿಕ್ರಮ್ ಪ್ರಭು ಅಭಿನಯದ ‘ಪಾಯುಮ್ ಒಳಿ ನೀ ಎನಕ್ಕು’ ಚಿತ್ರ ನಿರ್ದೇಶಿಸಿದ್ದ ಕಾರ್ತಿಕ್ ಅದ್ವೈತ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಸುಧೀರ್ ಚಂದ್ರ ಫಿಲಂ ಕಂಪನಿ ಮೂಲಕ ಸುಧೀರ್ ಚಂದ್ರ ಪದಿರಿ ನಿರ್ಮಿಸುತ್ತಿದ್ದಾರೆ. ಇದು ಕನ್ನಡದಲ್ಲಿ ಅವರ ಮೊದಲ ಸಿನಿಮಾ. ‘ವಿಕ್ರಮ್ ವೇದ’ ಮತ್ತು ‘ಕೈದಿ’ ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದ ಸ್ಯಾಮ್ ಸಿ ಎಸ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸುವ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಇದೊಂದು ಆಕ್ಷನ್ ಚಿತ್ರವಾಗಿದ್ದು, ದಕ್ಷಿಣ ಭಾರತದ ಜನಪ್ರಿಯ ನಟ-ನಟಿಯರು ಚಿತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ.
#ShivannaSCFC01 here’s our concept poster. Directed by @KarthikFilmaker and produced by @sudheerbza with music by @SamCSmusic #HappyBirthdayShivanna pic.twitter.com/dQ9H4bTmUZ
— Sudheer Chandra Film Company (@SCFilmCo) July 12, 2023