ಟ್ಯಾಕ್ಸಿ ಚಾಲಕನೊಬ್ಬನ ಕತೆ ‘YELLOW ಬೋರ್ಡ್‌’. ಈ ಸಿನಿಮಾಗೆ ಪುನೀತ್‌ ರಾಜಕುಮಾರ್‌ ಹಾಡಿದ್ದ ಸಾಂಗ್‌ನ ಲಿರಿಕಲ್‌ ವೀಡಿಯೊ ಬಿಡುಗಡೆಯಾಗಿದೆ. ಇದು Rap ಮ್ಯೂಸಿಕ್‌ ಸಾಂಗ್‌. ಸಿನಿಮಾ ಮಾರ್ಚ್‌ 4ರಂದು ತೆರೆಕಾಣಲಿದೆ.

ನಟ ಪುನೀತ್‌ ರಾಜಕುಮಾರ್‌ ಅವರು ಹಾಡಿದ್ದ ‘YELLOW ಬೋರ್ಡ್‌’ ಸಿನಿಮಾದ ಶೀರ್ಷಿಕೆ ಸಾಂಗ್‌ನ ಲಿರಿಕಲ್‌ ವೀಡಿಯೊ ರಿಲೀಸ್‌ ಆಗಿದೆ. ಇದು ಟ್ಯಾಕ್ಸಿ ಚಾಲಕನ ಕಥಾನಕ. ತ್ರಿಲೋಕ್‌ ರೆಡ್ಡಿ ನಿರ್ದೇಶನದ ಚಿತ್ರದಲ್ಲಿ ಟೈಗರ್ ಖ್ಯಾತಿಯ ಪ್ರದೀಪ್ ಟ್ಯಾಕ್ಸಿ ಚಾಲಕನ ಪಾತ್ರ ನಿರ್ವಹಿಸಿದ್ದಾರೆ. “ನಾವು ಈ ಸಿನಿಮಾ ಶುರು ಮಾಡುವಾಗ ಚಾಲಕರಿಗೆಂದೇ ಒಂದು ಹಾಡನ್ನು ಪ್ಲಾನ್ ಮಾಡಿದ್ದೆವು. ಅದನ್ನು ನಿರ್ದೇಶಕ ಚೇತನ್ ಅವರಿಂದ ಬರೆಸಿದೆವು. ಯಾರ ಕೈಲಿ ಹಾಡಿಸಬೇಕು ಎಂದಾಗ, ಮೊದಲು ಕಣ್ಣ ಮುಂದೆ ಬಂದದ್ದೇ ಅಪ್ಪು. ಪ್ರದೀಪ್ ಮೂಲಕ ಪುನೀತ್‌ರನ್ನು ಅಪ್ರೋಚ್ ಮಾಡಿದಾಗ ಖುಷಿಯಿಂದಲೇ ಹಾಡಿಕೊಟ್ಟರು” ಎನ್ನುತ್ತಾರೆ ನಿರ್ದೇಶಕ ತ್ರಿಲೋಕ್‌. ಟ್ಯಾಕ್ಸಿ ಚಾಲಕರಿಂದ ಸಮಾಜ ಸುಧಾರಣೆ ಸಾಧ್ಯ ಎನ್ನುವ ಸಂದೇಶವಿದೆ ಎಂದು ಚಿತ್ರದ ಬಗ್ಗೆ ಹೇಳುತ್ತಾರೆ.

ಹೀರೋ ಪ್ರದೀಪ್‌ ಮಾತನಾಡುತ್ತಾ, “ನನ್ನ ಹತ್ತು ವರ್ಷಗಳ ಸಿನಿ ಜರ್ನಿಯಲ್ಲಿ ಮೊದಲಬಾರಿಗೆ ಪುನೀತ್ ಅವರು ನನ್ನ ಪಾತ್ರಕ್ಕೆ ಹಾಡಿದ್ದಾರೆ. ಆರಂಭದಲ್ಲಿ ಜಾಲಿಡೇಸ್ ಚಿತ್ರದ ಆಡಿಯೋ ಬಿಡುಗಡೆಗೂ ಅವರು ಬಂದು ಹಾರೈಸಿದ್ದರು. ಡ್ರೈವರ್‌ಗಳ ಮೇಲೆ ಸಿನಿಮಾ ಮಾಡಿದ್ದೀರಿ, ಒಳ್ಳೇದಾಗಲಿ. ಹಾಡು ಚೆನ್ನಾಗಿದೆ ಎಂದು ಯಾವುದೇ ಸಂಭಾವನೆ ತೆಗೆದುಕೊಳ್ಳದೆ ಹಾಡಿದರು” ಎಂದು ಪುನೀತ್‌ರನ್ನು ಸ್ಮರಿಸುತ್ತಾರೆ. ಅಹಲ್ಯಾ ಸುರೇಶ್ ಹಾಗೂ ಸ್ನೇಹಾ ಚಿತ್ರದ ಇಬ್ಬರು ನಾಯಕಿಯರು. ಈ ಹಾಡನ್ನು ಪುನೀತ್‌ ಅವರಿಂದಲೇ ಬಿಡುಗಡೆ ಮಾಡಿಸಬೇಕು ಎನ್ನುವುದು ಚಿತ್ರತಂಡದ ಯೋಜನೆಯಾಗಿತ್ತು. ಈ ಬಗ್ಗೆ ಮಾತನಾಡುವ ನಿರ್ಮಾಪಕ ನವೀನ್‌, ಹಾಡನ್ನು ಅವರಿಂದಲೇ ಬಿಡುಗಡೆ ಮಾಡಿಸಬೇಕೆಂದು ಆಸೆ ಪಟ್ಟಿದ್ದೆವು, ಆಗಲಿಲ್ಲ. ಅಪ್ಪು ಅವರ ಒಂದು ಪ್ರತಿಕ್ರಿಯೆಯನ್ನೂ ತೆಗೆದುಕೊಳ್ಳಲಾಗಲಿಲ್ಲವಲ್ಲ ಎಂಬ ಗಿಲ್ಟ್ ನನ್ನನ್ನು ಕಾಡುತ್ತಿದೆ” ಎಂದು ಬೇಸರ ವ್ಯಕ್ತಪಡಿಸುತ್ತಾರೆ. ಅದ್ವಿಕ್ ಸಂಗೀತ, ಪ್ರವೀಣ್ ಛಾಯಾಗ್ರಹಣ ಈ ಚಿತ್ರಕ್ಕಿದೆ.

Previous articleಕೀರ್ತಿ ಸುರೇಶ್‌ ‘ಗುಡ್‌ಲಕ್‌ ಸಖಿ’ OTTಗೆ; ಫೆ.12ರಿಂದ ಅಮೇಜಾನ್‌ ಪ್ರೈಮ್‌ನಲ್ಲಿ ಸಿನಿಮಾ
Next article‘ಚುರುಳಿ’ ಮಲಯಾಳಂ ಸಿನಿಮಾ ಮೇಲಿದ ದೂರು ವಜಾ ಮಾಡಿದ ಕೇರಳ ಹೈಕೋರ್ಟ್‌

LEAVE A REPLY

Connect with

Please enter your comment!
Please enter your name here