ಮಾಜಿ ಟೆಸ್ಟ್‌ ಕ್ರಿಕೆಟರ್‌ ಮಹೇಂದ್ರಸಿಂಗ್‌ ಧೋನಿ ನಿರ್ಮಾಣದ ‘LGM’ ತಮಿಳು ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಹರೀಶ್‌ ಕಲ್ಯಾಣ್‌ ಮತ್ತು ಇವಾನಾ ಮುಖ್ಯಭೂಮಿಕೆಯಲ್ಲಿ ನಟಿಸಿರುವ ರೊಮ್ಯಾಂಟಿಕ್‌ – ಕಾಮಿಡಿ ಚಿತ್ರವಿದು. ರಮೇಶ್‌ ತಮಿಳ್ಮಣಿ ನಿರ್ದೇಶನದ ಸಿನಿಮಾದ ಬಿಡುಗಡೆ ದಿನಾಂಕವಿನ್ನೂ ಘೋಷಣೆಯಾಗಿಲ್ಲ.

ಧೋನಿ ಪ್ರೊಡಕ್ಷನ್ಸ್‌ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ರೊಮ್ಯಾಂಟಿಕ್ ಕಾಮಿಡಿ ಚಿತ್ರ ‘LGM’ (Let’s Get Married) ತಮಿಳು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಇವಾನಾ ಮತ್ತು ಹರೀಶ್ ಕಲ್ಯಾಣ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಸಾಕ್ಷಿ ಧೋನಿ ಮತ್ತು ವಿಕಾಸ್ ಹಸೀಜಾ ಚಿತ್ರದ ನಿರ್ಮಾಪಕರು. ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ ನಂತರ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಅವರ ಪತ್ನಿ ಸಾಕ್ಷಿ ಧೋನಿ, ‘ಧೋನಿ ಎಂಟರ್‌ಟೇನ್‌ಮೆಂಟ್‌’ ಚಿತ್ರನಿರ್ಮಾಣ ಸಂಸ್ಥೆ ಘೋಷಿಸಿದ್ದರು. ಕೆಲವು ತಿಂಗಳುಗಳ ಈ ಸಂಸ್ಥೆಯಡಿ ಚೊಚ್ಚಲ ತಮಿಳು ಸಿನಿಮಾ ‘LGM’ ಸೆಟ್ಟೇರಿತ್ತು. ಇದೀಗ ಸಿನಿಮಾ ತೆರೆಗೆ ಸಿದ್ಧವಾಗಿದ್ದು, ಟ್ರೈಲರ್‌ ಬಿಡುಗಡೆಯಾಗಿದೆ.

ಪರಸ್ಪರ ಪ್ರೀತಿಯಲ್ಲಿರುವ ಹರೀಶ್ ಮತ್ತು ಇವಾನಾ ಅವರ ಸುತ್ತ ಟ್ರೈಲರ್‌ ಸುತ್ತುತ್ತದೆ. ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ ಇವರಿಬ್ಬರೂ ಮದುವೆಯಾಗಲು ನಿರ್ಧರಿಸುತ್ತಾರೆ. ಇವಾನಾ ಮದುವೆಗೂ ಮೊದಲು ವರನ ತಾಯಿಯನ್ನು ಅರ್ಥಮಾಡಿಕೊಳ್ಳಲು ಬಯಸುತ್ತಾಳೆ. ಇವಾನಾ, ಹರೀಶ್‌ ಕುಟುಂಬ ಸಮೇತರಾಗಿ ಕೊಡಗಿಗೆ ಪ್ರವಾಸ ಹೋಗುವಂತೆ ಸೂಚಿಸುತ್ತಾಳೆ. ಆ ಸಮಯದಲ್ಲಿ ಒಬ್ಬರನ್ನೊಬ್ಬ ಅರ್ಥೈಸಿಕೊಳ್ಳಲು ಬಯಸುತ್ತಾರೆ. ಇದರ ಮಧ್ಯೆ ಇವಾನಾ ಮತ್ತು ಅವಳ ಅತ್ತೆ ಕಾಡಿನಲ್ಲಿ ಕಳೆದುಹೋಗಿ ಕಳ್ಳ ಬೇಟೆಗಾರರಿಂದ ಅಪಹರಣಕ್ಕೆ ಒಳಗಾಗುತ್ತಾರೆ. ಸತತ ಹುಡುಕಾಟದ ನಂತರ ಅವರಿಬ್ಬರು ಸಿಗುತ್ತಾರೆ ಮತ್ತು ಅವರಿಬ್ಬರ ಮಧ್ಯೆ ಏರ್ಪಟ್ಟಿದ್ದ ಭಿನ್ನಾಭಿಪ್ರಾಯಗಳನ್ನು ಕೈ ಬಿಡುತ್ತಾರೆಯೇ ಎಂಬುದನ್ನು ಚಿತ್ರ ತೋರಿಸಲಿದೆ. ರಮೇಶ್ ತಮಿಳ್ಮಣಿ ಚಿತ್ರಕಥೆ ಬರೆದು ನಿರ್ದೇಶಿಸಿರುವ ಚಿತ್ರದಲ್ಲಿ ಹಾಸ್ಯನಟ ಯೋಗಿ ಬಾಬು ಮತ್ತು ಆರ್‌ ಜೆ ವಿಜಯ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

Previous article‘OMG 2’ ಟೀಸರ್ | ಅಕ್ಷಯ್‌ ಕುಮಾರ್‌ ಹಿಂದಿ ಸಿನಿಮಾ ಆಗಸ್ಟ್‌ 11ರಂದು ತೆರೆಗೆ
Next articleಶಿವರಾಜಕುಮಾರ್‌ ಬರ್ತ್‌ಡೇ ಸೆಲೆಬ್ರೇಷನ್‌ | ‘ಘೋಸ್ಟ್‌’ Big Daddy ವೀಡಿಯೋ ಬಿಡುಗಡೆ

LEAVE A REPLY

Connect with

Please enter your comment!
Please enter your name here