ಶಿವರಾಜಕುಮಾರ್ ನಟನೆಯ ‘ಘೋಸ್ಟ್’ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲೊಂದು. ನಾಳೆ ಜುಲೈ 12ರಂದು ಚಿತ್ರದ ‘ಬಿಗ್ ಡ್ಯಾಡಿ’ ವೀಡಿಯೋ ಬಿಡುಗಡೆಯಾಗುತ್ತಿದೆ. ‘ಇದು ಚಿತ್ರದ ಅಧಿಕೃತ ಟೀಸರ್ ಅಲ್ಲ, ಚಿತ್ರದಲ್ಲಿ ಪ್ರೇಕ್ಷಕರು ಏನನ್ನು ನಿರೀಕ್ಷಿಸಬಹುದು ಎಂಬ ಕಲ್ಪನೆಯನ್ನು ಮಾತ್ರ ನೀಡುತ್ತದೆ’ ಎನ್ನುತ್ತಾರೆ ಚಿತ್ರದ ನಿರ್ದೇಶಕ ಶ್ರೀನಿ.
ಶಿವರಾಜಕುಮಾರ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಘೋಸ್ಟ್’ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಎಂ ಜಿ ಶ್ರೀನಿವಾಸ್ ನಿರ್ದೇಶಿಸಿರುವ ಚಿತ್ರವು 2023ರ ಬಹುನಿರೀಕ್ಷಿತ ಚಿತ್ರಗಳಲ್ಲೊಂದು. ಜುಲೈ 12ರಂದು ಶಿವರಾಜಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ ‘ಘೋಸ್ಟ್’ ತಂಡವು ‘ಬಿಗ್ ಡ್ಯಾಡಿ’ ಎಂಬ ವಿಶೇಷ ವೀಡಿಯೊವನ್ನು ಬಿಡುಗಡೆ ಮಾಡುತ್ತಿದೆ. ನಿರ್ದೇಶಕ ಶ್ರೀನಿವಾಸ್ ಈ ಕುರಿತು ಮಾತನಾಡಿದ್ದು, ‘ಇದು ಚಿತ್ರದ ಅಧಿಕೃತ ಟೀಸರ್ ಅಲ್ಲ, ಇದರಲ್ಲಿ ಪ್ರೇಕ್ಷಕರಿಗೆ ‘ಘೋಸ್ಟ್’ ಚಿತ್ರದಲ್ಲಿ ಏನನ್ನು ನಿರೀಕ್ಷಿಸಬಹುದು ಎಂಬ ಕಲ್ಪನೆಯನ್ನು ಮಾತ್ರ ನೀಡುತ್ತದೆ. ಬೆಂಗಳೂರಿನ ಸಂತೋಷ್ ಥಿಯೇಟರ್ನಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ನಟ ಶಿವರಾಜಕುಮಾರ್ ಈ ವಿಡಿಯೋ ಬಿಡುಗಡೆ ಮಾಡಲಿದ್ದಾರೆ’ ಎಂದಿದ್ದಾರೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ಮಲಯಾಳಂ ನಟ ಜಯರಾಂ, ಬಾಲಿವುಡ್ ನಟ ಅನುಪಮ್ ಖೇರ್, ಪ್ರಶಾಂತ್ ನಾರಾಯಣನ್, ಅರ್ಚನಾ ಜೋಯಿಸ್, ಸತ್ಯ ಪ್ರಕಾಶ್, ಎಂ ಜಿ ಶ್ರೀನಿವಾಸ್ ನಟಿಸುತ್ತಿದ್ದಾರೆ.
"When Violence Dies, Big Daddy Is Born”
— SRINI (@lordmgsrinivas) July 9, 2023
Don't miss the grand debut on #July12 at 11:45am on the
T-Series YouTube channel. Join the excitement and embrace #GHOST as we welcome the mighty #BIGDADDY!"@NimmaShivanna @SandeshPro @baraju_SuperHit @TSeries @ArjunJanyaMusic pic.twitter.com/EApTABjlY9
ಟ್ವಿಟ್ಟರ್ನಲ್ಲಿ ಮಾಹಿತಿ ಹಂಚಿಕೊಂಡ ಶ್ರೀನಿ ‘ಭಾಗ-1 ಇದೇ ವರ್ಷ ಕನ್ನಡ ಸೇರಿದಂತೆ ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ‘ಘೋಸ್ಟ್’ ಎರಡನೇ ಭಾಗವು ಮುಂದುವರೆದ ಭಾಗದೊಂದಿಗೆ ಕೊನೆಗೊಳ್ಳುತ್ತದೆ’ ಎಂದಿದ್ದಾರೆ. ಸಂದೇಶ್ ನಾಗರಾಜ್ ನಿರ್ಮಾಣದ ಸಿನಿಮಾ ಪ್ರಸ್ತುತ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಇದರಲ್ಲಿ 1,800 VFX ಶಾಟ್ಗಳು ಸೇರಿದ್ದು, ಇವುಗಳಲ್ಲಿ ಹೆಚ್ಚಿನವನ್ನು ವಿದೇಶಿ ಸ್ಟುಡಿಯೋಗಳಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. CGI ಕೆಲಸಗಳು ಮುಗಿದ ನಂತರ ಬಿಡುಗಡೆ ದಿನಾಂಕವನ್ನು ನಿರ್ಧರಿಸುತ್ತದೆ ಎಂದು ಚಿತ್ರತಂಡ ತಿಳಿಸಿದೆ. ತಮಿಳು ಸ್ಟಾರ್ ವಿಜಯ್ ಸೇತುಪತಿ ಘೋಸ್ಟ್ನ ಭಾಗವಾಗಿದ್ದಾರೆ ಎಂಬ ವದಂತಿಗಳಿಗೆ ಬ್ರೇಕ್ ಹಾಕಿದ ತಂಡವು ನಟನನ್ನು ಸಂಪರ್ಕಿಸಿದ್ದು ನಿಜ, ಆದರೆ ಸೇತುಪತಿ ಅವರು ಸಮಯದ ಅಭಾವದಿಂದ ಈ ಚಿತ್ರದಲ್ಲಿ ನಟಿಸುತ್ತಿಲ್ಲ ಎಂದು ದೃಡಪಡಿಸಿದ್ದಾರೆ.