ಶಿವರಾಜಕುಮಾರ್ ಅಭಿನಯದ ‘ನೀ ಸಿಗೋವರೆಗೂ’ ಎರಡನೇ ಹಂತದ ಚಿತ್ರೀಕರಣದಲ್ಲಿದೆ. ನೂತನ ಪೋಸ್ಟರ್‌ನಲ್ಲಿ ರಗಡ್ ಮಿಲಿಟರಿ ಅಧಿಕಾರಿಯಾಗಿ ಕಾಣಿಸುತ್ತಿದ್ದಾರವರು. ಈ ಸಿನಿಮಾ ತೆಲುಗು ಭಾಷೆಯಲ್ಲೂ ತೆರೆಕಾಣಲಿದೆ ಎನ್ನುವುದು ವಿಶೇಷ.

ಶಿವರಾಜಕುಮಾರ್‌ ಅಭಿನಯದ ‘ನೀ ಸಿಗೋವರೆಗೂ’ ಆರಂಭದಲ್ಲಿ ಲವರ್‌ಬಾಯ್ ಇಮೇಜಿನ ಫೋಟೊ ಬಿಡುಗಡೆ ಮಾಡಿದ್ದರು. ಇದೊಂದು ಪ್ರೇಮಕತೆ ಎಂದೇ ಚಿತ್ರಪ್ರೇಮಿಗಳು ಭಾವಿಸಿದ್ದರು. ಇದೀಗ ನೂತನ ಪೋಸ್ಟರ್‌ನಲ್ಲಿ ಚಿತ್ರದ ಮತ್ತೊಂದು ಎಳೆಯ ಪರಿಚಯ ಸಿಕ್ಕಿದೆ. ಆರ್ಮಿ ಆಫೀಸರ್‌ ಲುಕ್‌ನಲ್ಲಿ ಅವರು ಮಿಂಚಿದ್ದು, ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟರ್‌ ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ. ಚಿತ್ರ ತನ್ನ ಮೊದಲ ಹಂತದ ಚಿತ್ರೀಕರಣ ಮುಗಿಸಿಕೊಂಡಿದೆ. ದ್ವಿತೀಯ ಹಂತದ ಚಿತ್ರೀಕರಣ ಸದ್ಯದಲ್ಲೇ ಆರಂಭವಾಗಲಿದೆಯಂತೆ. ಬೆಂಗಳೂರು, ಚಿಕ್ಕಮಗಳೂರು, ಜಮ್ಮು – ಕಾಶ್ಮೀರ ಅಷ್ಟೇ ಅಲ್ಲದೆ ಅಮೆರಿಕದಲ್ಲೂ ಚಿತ್ರೀಕರಣ ನಡೆಯಲಿದೆ ಎನ್ನುವ ಮಾಹಿತಿ ಸಿಕ್ಕಿದೆ.

ಇದೊಂದು ಭಾವನಾತ್ಮಕ ಪ್ರೇಮಕತೆ ಎನ್ನುತ್ತಾರೆ ನಿರ್ದೇಶಕ ರಾಮ್ ಧೂಲಿಪುಡಿ. ಆದರೆ ಹೀರೋನ ಆರ್ಮಿ ಆಫೀಸರ್ ಪಾತ್ರದ ಗುಟ್ಟನ್ನು ಅವರು ಬಿಟ್ಟುಕೊಡುವುದಿಲ್ಲ. ಮೆಹ್ರಿನ್ ಫಿರ್ಜಾದಾ ಚಿತ್ರದ ನಾಯಕಿ. ನಾಜರ್, ಸಾಧುಕೋಕಿಲ, ಸಂಪತ್ ಕುಮಾರ್, ಮಂಗ್ಲಿ ಮುಂತಾದವರು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ‘ಟಗರು’ ಖ್ಯಾತಿಯ ಚರಣ್ ರಾಜ್ ಸಂಗೀತ ನಿರ್ದೇಶನ, ಮಹೇಂದ್ರ ಸಿಂಹ ಛಾಯಾಗ್ರಹಣ, ದೀಪು ಸಂಕಲನ ಹಾಗೂ ರವಿ ಸಂತೆಹಕ್ಲು ಕಲಾ ನಿರ್ದೇಶನ ಚಿತ್ರಕ್ಕಿದೆ. ಬಾಲಶ್ರೀರಾಮ್ ಸ್ಟುಡಿಯೋಸ್ ಲಾಂಛನದಲ್ಲಿ ನರಾಲ ಶ್ರೀನಿವಾಸ್ ರೆಡ್ಡಿ, ಶ್ರೀಕಾಂತ್ ಧುಲಿಪುಡಿ ಹಾಗೂ ಸ್ವಾತಿ ವನಪಲ್ಲಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಞನ್ನಡ ಹಾಗೂ ತೆಲುಗು ಎರಡೂ  ಭಾಷೆಗಳಲ್ಲಿ ‘ನೀ ಸಿಗೋವರೆಗೂ’ ಚಿತ್ರ ತಯಾರಾಗಲಿದೆ ಎನ್ನುವುದು ವಿಶೇ‍ಷ.

LEAVE A REPLY

Connect with

Please enter your comment!
Please enter your name here