ನಟ ಶಿವಕಾರ್ತಿಕೇಯನ್ ಅವರ ‘ಡಾಕ್ಟರ್’ ಸಿನಿಮಾ ಕೊರೋನಾ ಪರಿಸ್ಥಿತಿಯ ಹೊರತಾಗಿಯೂ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಓಪನಿಂಗ್ ಕಂಡಿದೆ. ವರದಿಗಳ ಪ್ರಕಾರ, ಚಿತ್ರವು ತಮಿಳುನಾಡಿನಲ್ಲಿ ಮೊದಲ ದಿನ 8 ಕೋಟಿ ರೂ.ಗಳಿಸಿದೆ.

ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನ ‘ಡಾಕ್ಟರ್‌’ ವಿಮರ್ಶಕರಿಂದ ಪ್ರಶಂಸೆಗೆ ಪಾತ್ರವಾಗಿದೆ. ಈ ಚಿತ್ರವನ್ನು ಆಕರ್ಷಕವಾದ ಮತ್ತು ಮನರಂಜನೀಯ ನಿರೂಪಣೆಗಾಗಿ ಕೆಲವರು ಪ್ರಶಂಸಿಸುತ್ತಿದ್ದು ಇನ್ನು ಕೆಲವರು ಇದು ಉತ್ತಮ ಸಂದೇಶವನ್ನು ಹೊಂದಿದೆ ಎಂದೂ ಹೇಳುತ್ತಿದ್ದಾರೆ. ಶಿವಕಾರ್ತಿಕೇಯನ್ ಮತ್ತು  ಪ್ರಿಯಾಂಕಾ ಅರುಲ್ ಮೋಹನ್ ಅವರ ಅಭಿನಯಕ್ಕಾಗಿ ಎಲ್ಲರಿಂದ ಪ್ರಶಂಸೆ ದೊರೆತಿದೆ. ಆಕ್ಷನ್ ಸನ್ನಿವೇಶಗಳು, ಛಾಯಾಗ್ರಾಹಕ ವಿಜಯ್ ಕಾರ್ತಿಕ್ ಕಣ್ಣನ್ ಅವರ ಕೆಲಸ ಮತ್ತು ಅನಿರುದ್ಧ್‌ ರವಿಚಂದರ್ ಅವರ ಸಂಯೋಜನೆ (ಹಾಡುಗಳು ಮತ್ತು ಹಿನ್ನೆಲೆ ಸ್ಕೋರ್) ಸಾಮಾಜಿಕ ಮಾಧ್ಯಮಗಳಲ್ಲಿ ಹೊಗಳಿಕೆಗೆ ಪಾತ್ರವಾಗಿವೆ. ಧನಾತ್ಮಕ ವಿಮರ್ಶೆಗಳು ಬರುತ್ತಿರುವಂತೆ, ತಮಿಳು ಚಿತ್ರೋದ್ಯಮವು ಚಿತ್ರಮಂದಿರಗಳಲ್ಲಿ ತನ್ನ ಪ್ರಾಬಲ್ಯವನ್ನು ಮರಳಿ ಪಡೆಯಲು ‘ಡಾಕ್ಟರ್’ ಚಿತ್ರ ಸಹಾಯ ಮಾಡುತ್ತಿದೆ ಎಂದೇ ನಂಬಿದ್ದಾರೆ.

ಶಿವಕಾರ್ತಿಕೇಯನ್ ಅವರ ಬ್ಯಾನರ್ ಅಡಿಯಲ್ಲಿ ಬಂದಿರುವ ಆ ಆಕ್ಷನ್ ಥ್ರಿಲ್ಲರ್‌ನಲ್ಲಿ ಯೋಗಿ ಬಾಬು, ವಿನಯ್ ರೈ, ಮಿಲಿಂದ್ ಸೋಮನ್ ಮತ್ತು ಅರ್ಚನಾ ಚಾಂಧೋಕೆ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಖ್ಯಾತ ನಿರ್ಮಾಣ ಬ್ಯಾನರ್ KJR ಸ್ಟುಡಿಯೋಸ್ ಚಿತ್ರದ ಸಹ-ನಿರ್ಮಾಣ ಮತ್ತು ವಿತರಣೆಯ ಹೊಣೆ ಹೊತ್ತುಕೊಂಡಿದೆ. ಚಿತ್ರಮಂದಿರಗಳಲ್ಲಿ ಮತ್ತೆ ಸಿನಿಮಾ ಬಿಡುಗಡೆ ಮಾಡುವ ಪ್ರಕ್ರಿಯೆ ಈ ಮುಂಚೆಯೇ ಆರಂಭವಾಗಿತ್ತು. ಆದರೆ, ಎರಡನೇ ಅಲೆ ಮತ್ತು ಎರಡನೇ ಲಾಕ್ ಡೌನ್‌ನಿಂದಾಗಿ ನಿರ್ಮಾಪಕರು ತಮ್ಮ ಯೋಜನೆಯನ್ನು ಮುಂದೂಡಬೇಕಾಯಿತು. ‘ಡಾಕ್ಟರ್’ ಚಿತ್ರದ ಟ್ರೇಲರ್ 2019ರ ನವೆಂಬರ್ 16ರಂದು ಬಿಡುಗಡೆಯಾಗಿತ್ತು. ಈ ಚಿತ್ರವು ಮಿಲಿಟರಿ ವೈದ್ಯ ವರುಣ್, ಇತರ ಆರು ಜನರೊಂದಿಗೆ ಮಾನವ ಕಳ್ಳಸಾಗಣೆಯ ಹಿಂದೆ ಬೀಳುವ ಕಥೆಯನ್ನು ಹೊಂದಿದೆ.

LEAVE A REPLY

Connect with

Please enter your comment!
Please enter your name here