SIIMAದಲ್ಲಿ ಕಿರಣ್‌ ರಾಜ್‌ ನಿರ್ದೇಶನದ ‘777 ಚಾರ್ಲಿ’ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದರೆ ಯಶ್‌ ಮತ್ತು ಶ್ರೀನಿಧಿ ಶೆಟ್ಟಿ ಅತ್ಯುತ್ತಮ ಹೀರೋ/ಹಿರೋಯಿನ್‌ ಗೌರವಕ್ಕೆ ಪಾತ್ರರಾಗಿದ್ದಾರೆ. ‘ಕಾಂತಾರ’ ಸಿನಿಮಾದ ಅತ್ಯುತ್ತಮ ಸಂಗೀತ ನಿರ್ದೇಶನಕ್ಕೆ ಅಜನೀಶ್‌ ಲೋಕನಾಥ್‌ ಇದೇ ಸಿನಿಮಾದ ‘ಸಿಂಗಾರ ಸಿರಿಯೇ’ ಗಾಯನಕ್ಕೆ ವಿಜಯಪ್ರಕಾಶ್‌ ಪ್ರಶಸ್ತಿ ಪಡೆದಿದ್ದಾರೆ.

SIIMA 2023 ಪ್ರಶಸ್ತಿಗಳು ಪ್ರಕಟವಾಗಿದ್ದು, ದಕ್ಷಿಣ ಭಾರತದ ಜನಪ್ರಿಯ ಸಿನಿಮಾಗಳು ಗೌರವಕ್ಕೆ ಪಾತ್ರವಾಗಿವೆ. ಕನ್ನಡದ ‘KGF 2’, ‘ಕಾಂತಾರ’, ‘777 ಚಾರ್ಲಿ’ ಸಿನಿಮಾಗಳಿಗೆ ಹೆಚ್ಚಿನ ಪ್ರಶಸ್ತಿಗಳು ಸಂದಿವೆ. ದುಬೈನ ವರ್ಲ್ಡ್​ ಟ್ರೇಡ್​ ಸೆಂಟರ್​ನಲ್ಲಿ ನಿನ್ನೆ ರಾತ್ರಿ (ಸೆಪ್ಟೆಂಬರ್​ 15) ಪ್ರಶಸ್ತಿ ಪ್ರದಾನ ಸಮಾರಂಭ ಅದ್ಧೂರಿಯಾಗಿ ನಡೆದಿದೆ. ದಕ್ಷಿಣ ಭಾರತದ ಕಲಾವಿದರು ಹಾಗೂ ತಂತ್ರಜ್ಞರು ಸಮಾರಂಭದಲ್ಲಿ ಭಾಗಿಯಾಗಿ ಸಂಭ್ರಮಿಸಿದ್ದಾರೆ.

ಕಿರಣ್‌ ರಾಜ್‌ ನಿರ್ದೇಶನ, ರಕ್ಷಿತ್​ ಶೆಟ್ಟಿ ನಟನೆಯ ‘777 ಚಾರ್ಲಿ’ ಸಿನಿಮಾಗೆ ‘ಅತ್ತುತ್ತಮ ಚಿತ್ರ’ ಪ್ರಶಸ್ತಿ ಸಿಕ್ಕಿದೆ. ರಿಷಬ್​ ಶೆಟ್ಟಿ ಅವರು ‘ಕಾಂತಾರ’ ಸಿನಿಮಾದಲ್ಲಿನ ಅಭಿನಯಕ್ಕೆ ‘ಅತ್ಯುತ್ತಮ ನಟ’ (ಕ್ರಿಟಿಕ್ಸ್​) ಅವಾರ್ಡ್​ ಪಡೆದಿದ್ದಾರೆ. ಅದೇ ಸಿನಿಮಾದಲ್ಲಿ ನಟಿಸಿದ ಅಚ್ಯುತ್​ ಕುಮಾರ್​ ‘ಅತ್ಯುತ್ತಮ ಖಳನಟ’ ಪ್ರಶಸ್ತಿ ಪಡೆದುಕೊಂಡಿದ್ದಾರೆ. ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದಲ್ಲಿನ ಅಭಿನಯಕ್ಕೆ ಯಶ್​ ‘ಅತ್ಯುತ್ತಮ ನಟ’ ಹಾಗೂ ಶ್ರೀನಿಧಿ ಶೆಟ್ಟಿ ಅವರಿಗೆ ‘ಅತ್ಯುತ್ತಮ ನಟಿ’ ಪ್ರಶಸ್ತಿ ಸಿಕ್ಕಿದೆ.

‘ಗಾಳಿಪಟ 2’ ಸಿನಿಮಾದಲ್ಲಿನ ನಟನೆಗೆ ದಿಗಂತ್​ ಅವರು ‘ಅತ್ಯುತ್ತಮ ಪೋಷಕ ನಟ’ ಸೈಮಾ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಪ್ರಕಾಶ್​ ತುಮ್ಮಿನಾಡು ಅವರಿಗೆ ‘ಕಾಂತಾರ’ ಚಿತ್ರಕ್ಕಾಗಿ ಅತ್ಯುತ್ತಮ ಹಾಸ್ಯನಟ ಪ್ರಶಸ್ತಿ ಸಿಕ್ಕಿದೆ. ‘ಡೊಳ್ಳು’ ಚಿತ್ರದ ಡೈರೆಕ್ಟರ್​ ಸಾಗರ್​ ಪುರಾಣಿಕ್​ ‘ಅತ್ಯುತ್ತಮ ಚೊಚ್ಚಲ ನಿರ್ದೇಶಕ’ ಪ್ರಶಸ್ತಿ ಪಡೆದಿದ್ದಾರೆ. ‘ಕಾಂತಾರ’ ಸಿನಿಮಾಗಾಗಿ ಅಜನೀಶ್​ ಬಿ ಲೋಕನಾಥ್​ ಅವರು ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಸ್ವೀಕರಿಸಿದ್ದಾರೆ. ಈ ಸಿನಿಮಾದ ‘ಸಿಂಗಾರ ಸಿರಿಯೇ’ ಹಾಡಿಗಾಗಿ ವಿಜಯ್​ ಪ್ರಕಾಶ್​ ಅತ್ಯುತ್ತಮ ಗಾಯಕ ಹಾಗೂ ಪ್ರಮೋದ್​ ಮರವಂತೆ ‘ಅತ್ಯುತ್ತಮ ಗೀತಸಾಹಿತಿ’ ಪ್ರಶಸ್ತಿ​ ಪಡೆದಿದ್ದಾರೆ. ಸುನಿಧಿ ಚೌವ್ಹಾಣ್‌ (ರಾ ರಾ ರಕ್ಕಮ್ಮ, ಅತ್ಯುತ್ತಮ ಗಾಯಕಿ), ಪೃಥ್ವಿ ಶ್ಯಾಮನೂರು (ಪದವಿ ಪೂರ್ವ, ಡೆಬ್ಯೂ ಹೀರೋ), ಭುವನ್‌ ಗೌಡ (ಕೆಜಿಎಫ್‌ 2, ಅತ್ಯುತ್ತಮ ಛಾಯಾಗ್ರಹಣ) ಸಪ್ತಮಿ ಗೌಡ (ಕಾಂತಾರ, ಅತ್ಯುತ್ತಮ ನಟಿ) ಗೌರವಕ್ಕೆ ಪಾತ್ರರಾಗಿದ್ದಾರೆ.

ತೆಲುಗು ವಿಭಾಗದಲ್ಲಿ ರಾಜಮೌಳಿ ಅವರ ‘RRR’ ಮತ್ತು ಹನು ರಾಘವಪುಡಿ ಅವರ ‘ಸೀತಾ ರಾಮಂ’ ಎರಡೂ ಚಿತ್ರಗಳು ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿವೆ. ‘RRR’ ಸಿನಿಮಾದಿಂದ ಜೂನಿಯರ್‌ NTR ‘ಅತ್ಯತ್ತಮ ನಟ’, ಎಂ ಎಂ ಕೀರವಾಣಿ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಗಳನ್ನು ಪಡೆದರೆ, ಪೋಷಕ ಪಾತ್ರದಲ್ಲಿ ‘ಅತ್ಯುತ್ತಮ ನಟಿ’ ಪ್ರಶಸ್ತಿಯನ್ನು ‘ಮಸೂದ’ ಚಿತ್ರಕ್ಕಾಗಿ ಸಂಗೀತಾ ಅವರು ಪಡೆದಿದ್ದಾರೆ. ಅತ್ಯುತ್ತಮ ಡೆಬ್ಯೂ ಹಿರೋಯಿನ್‌ ಆಗಿ ಮೃಣಾಲ್ ಠಾಕೂರ್, ಅತ್ಯುತ್ತಮ ಹಿನ್ನೆಲೆ ಗಾಯಕಿ (Female) ‘ಜಿಂತಾಕ್’ ಚಿತ್ರಕ್ಕಾಗಿ ಮಂಗ್ಲಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಸೆಂಥಿಲ್ ಕುಮಾರ್ (ಅತ್ಯುತ್ತಮ ಛಾಯಾಗ್ರಾಹಕ, RRR), ಮಲ್ಲಿಡಿ ವಸಿಷ್ಟ (ಅತ್ಯುತ್ತಮ ಚೊಚ್ಚಲ ನಿರ್ದೇಶಕ, ಬಿಂಬಿಸಾರ), ನಿಖಿಲ್‌ ಸಿದ್ದಾರ್ಥ್‌ (ಸೆನ್ಸೇಷನ್‌ ಆಫ್‌ ದಿ ಯಿಯರ್‌, ಕಾರ್ತಿಕೇಯ 2), ಸುಹಾಸ್‌ (ಅತ್ಯುತ್ತಮ ಖಳನಟ, HIT 2), ಶರತ್‌ ಮತ್ತು ಅನುರಾಗ್‌ (ಡೆಬ್ಯೂ ನಿರ್ಮಾಪಕರು, ಮೇಜರ್‌) ಗೌರವಕ್ಕೆ ಪಾತ್ರರಾಗಿದ್ದಾರೆ.

Previous articleವೀಕ್ಷಕರ ಆಯ್ಕೆಗೇ ಬಿಡುವ ಪ್ರಪ್ರಥಮ ಸಂವಾದಾತ್ಮಕ ಮಾದರಿಯ ಪ್ರೇಮಕತೆ
Next article‘ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ’ 50 ದಿನ | ಇದೀಗ ZEE5ನಲ್ಲಿ ಸಿನಿಮಾ

LEAVE A REPLY

Connect with

Please enter your comment!
Please enter your name here